ಗೋಕಾಕ: ಪ್ರತಿ ಮನೆ ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಕಾರ್ಯಪ್ರವೃತ್ತರಾಗಬೇಕೆಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಮ್ ಬಿ ಬಳಗಾರ ಹೇಳಿದರು.
ಅವರು, ಮಂಗಳವಾರದಂದು ಸಂಜೆ ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ ತಾಲೂಕ ಘಟಕ ಮತ್ತು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿಕ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕರಣದ ಬದಲಾವಣೆಯಿಂದ ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದ್ದು, ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಿಸಬೇಕು. ಇಂದಿನ ಯುವಪೀಳಿಗೆಯಲ್ಲಿ ಮಾತೃ ಭಾಷೆಯ ಅರಿವು ಮೂಢಿಸಿ ಅದನ್ನು ಹೆಚ್ಚು ಬಳಸುವಂತೆ ಪ್ರೇರೆಪಿಸಬೇಕು. ಕನ್ನಡ ಭಾಷೆ ಮೊದಲ ಭಾಷೆಯಾಗಲಿ, ಅನ್ಯ ಭಾಷೆಗಳು ಸಂಪರ್ಕಭಾಷೆಗಳಾಗಲಿ ಎಂದ ಅವರು ಅಖಂಡ ಕರ್ನಾಟಕವನ್ನು ಬಲಿಷ್ಠಗೊಳಿಸಲು ನಾವೆಲ್ಲ ಸಂಕಲ್ಪ ಮಾಡಬೇಕು ಎಂದರು.
ರಾಜ್ಯೋತ್ಸವ ಅಂಗವಾಗಿ ಗೀತ ಗಾಯನ ಕಾರ್ಯಕ್ರಮ ಜರುಗಿತು.
ವೇದಿಕೆಯ ಮೇಲೆ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಮಹಾಂತೇಶ ತಾಂವಶಿ, ಭಾವಯಾನ ವೇದಿಕೆ ಗೌರವಾಧ್ಯಕ್ಷೆ ಪುಷ್ಪ ಮುರಗೋಡ, ಬಸವ ಸತ್ಸಂಗ ಸಮೀತಿಯ ಈರಣ್ಣ ಪರುಶೆಟ್ಟಿ ಇದ್ದರು.
Check Also
ಬಿಪಿಎಲ್ ಇದ್ದಿದ್ದನ್ನು ಎಪಿಎಲ್ಗೆ ಸೇರಿಸಿದ್ದಕ್ಕೆ ಜನರು ಸರ್ಕಾರದ ವಿರುದ್ಧ ಆಕ್ರೋಶ
Spread the loveಸದ್ಯ ಕರ್ನಾಟಕದಲ್ಲಿ ಪಡಿತರ ಚೀಟಿ ಪರಿಷ್ಕರಣೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದಕ್ಕೆ ಮತ್ತು …