Breaking News

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,

Spread the love

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,

 

ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕದಲ್ಲಿ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿದ ಸಂಘಟನೆಗಳಿಂದ ಪ್ರದಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ಈಶ್ವರ ಗುಡಜ ಇವರು

ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ ನ್ಯಾಯಾಧೀಶ ಮಂಜುನಾಥ ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಆಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಮಾಡಿ ಅವರನ್ನು ವೃತ್ತಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

 

ಈ ಸಂದರ್ಭದಲ್ಲಿ ಮಂಜುಳಾ ರಾಮಗಾನಟ್ಟಿ,ದೀಪಕ‌ ಇಂಗಳಗಿ, ಗೋವಿಂದ ಕಣಮಡ್ಡಿ,ಚಿಕ್ಕಯ್ಯ ಕನಮಡ್ಡಿ,ವಿಶಾಲ ಮೇಸ್ರ್ತಿ,ಹಣಮಂತ ಮೇಸ್ತ್ರಿ,ಕಿರಣ ಉಳ್ಳಾಗಡ್ಡಿ,ದನಂಜಯ ಪೂಜೇರಿ, ಸ.ಜು ಮೇಸ್ರ್ತಿ, ಮಂಜು ಅಮ್ಮನಗಿ ಇನ್ನೂಳಿದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ