ನವದೆಹಲಿ(ಆ.11): 2019-20ನೇ ಸಾಲಿನಲ್ಲಿ ಬಿಜೆಪಿ ಒಟ್ಟು 3,623 ಕೋಟಿ ರು. ಆದಾಯ ಗಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದಿಂದ 2,555 ಕೋಟಿ ರು. ಗಳಿಸಿದೆ. 2018-18ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ. 50ರಷ್ಟುಏರಿಕೆಯಾಗಿದೆ.
ಚುನಾವಣೆ ಮತ್ತು ಪ್ರಚಾರಕ್ಕೆ ಬಿಜೆಪಿ 2019-20ನೇ ಸಾಲಿನಲ್ಲಿ 1651 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ 1352 ಕೋಟಿ ರು. ಖರ್ಚು ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಬಿಜೆಪಿಯ ಖರ್ಚು ಶೇ.64ರಷ್ಟುಏರಿಕೆಯಾಗಿದೆ. ಜಾಹಿರಾತಿಗಾಗಿ 400 ಕೋಟಿ ರು. ಹಣವನ್ನು ಬಿಜೆಪಿ ಖರ್ಚು ಮಾಡಿದೆ.
ಇದೇ ಸಾಲಿನಲ್ಲಿ ಕಾಂಗ್ರೆಸ್ 682 ಕೋಟಿ ರು. ಆದಾಯ ಗಳಿಸಿದೆ ಮತ್ತು 998 ಕೋಟಿ ರು. ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್ ಒಟ್ಟಾರೆ 143 ಕೋಟಿ ರು.
ಆದಾಯ ಗಳಿಸಿದ್ದು 107 ಕೋಟಿ ರು. ಖರ್ಚು ಮಾಡಿದೆ. ಸಿಪಿಎಂ 156 ಕೋಟಿ ಆದಾಯ ಗಳಿಸಿದ್ದು 105 ಕೋಟಿ ವೆಚ್ಚ ಮಾಡಿದೆ. ಎನ್‌ಸಿಪಿ 85 ಕೋಟಿ ಆದಾಯ ಗಳಿಸಿದ್ದು 109 ಕೋಟಿ ಖರ್ಚು ಮಾಡಿದೆ. ಬಿಎಸ್‌ಪಿ ಆದಾಯ 58 ಕೋಟಿ ಆಗಿದ್ದು 95 ಕೋಟಿ ಖರ್ಚು ಮಾಡಿದೆ. ಸಿಪಿಐ 6.58 ಕೋಟಿ ಆದಾಯ ಗಳಿಸಿದ್ದು 6.53 ಕೋಟಿ ವೆಚ್ಚ ಮಾಡಿದೆ.