ಹೊಸದಿಲ್ಲಿ: ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು (ಎನ್‌ಪಿಪಿಎ), 2015ರಲ್ಲಿ ಸಿದ್ಧಪಡಿಸಲಾಗಿದ್ದ “ಅತ್ಯಗತ್ಯ ಔಷಧಿಗಳ ರಾಷ್ಟ್ರೀಯ ದರ ನಿಗದಿ ಪಟ್ಟಿ’ಯಲ್ಲಿರುವ (ಎನ್‌ಎಲ್‌ಇಎಂ) 871 ಔಷಧಿಗಳ ಗರಿಷ್ಟ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ರಾಜ್ಯಸಭೆಗೆ ನೀಡಿರುವ ಲಿಖೀತ ಉತ್ತರದಲ್ಲಿ ಅವರು ಈ ವಿಷಯ ಉಲ್ಲೇಖೀಸಿದ್ದಾರೆ. ಇದೇ ವೇಳೆ, ಪ್ಲಾಸ್ಟಿಕ್ ಪ್ರಾಸೆಸಿಂಗ್ ಉದ್ಯಮಕ್ಕೆ ಉತ್ತೇಜನ ನೀಡಲು ಮಧ್ಯಪ್ರದೇಶದ ಟೋಮಟ್, ಬಿಲೌವಾ, ಒಡಿಶಾದ ಪರದೀಪ್, ತಮಿಳುನಾಡಿನ ತಿರುವಳ್ಳೂರ್ ಹಾಗೂ ಅಸ್ಸಾಂನ ತಿನ್ಸುಕಿಯಾದಲ್ಲಿ ಪ್ಲಾಸ್ಟಿಕ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Laxmi News 24×7