Breaking News

ನೇಣು ಬಿಗಿದುಕೊಂಡು ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ನಿಗೂಢ

Spread the love

ಧಾರವಾಡ: ಮೆಡಿಕಲ್​​ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ(ಡಿಮ್ಹಾನ್ಸ್) ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ಡಾ.ಪ್ರಜ್ಞಾ ಪಾಲೇಗರ್(24) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶಿವಮೊಗ್ಗ ಮೂಲದ ಯುವತಿ ಎರಡು ವಾರಗಳ ಹಿಂದಷ್ಟೇ ಬಂದಿದ್ದಳು. ನಿನ್ನೆ ಆಕೆಯ ತಂದೆ-ತಾಯಿ ಕೂಡ ಬಂದು ಹೋಗಿದ್ದರು ಎನ್ನಲಾಗಿದೆ.

ಇನ್ನು ಡಾ. ಪ್ರಿಯಾ ಪಾಟೀಲ್ ಜೊತೆ ಪ್ರಜ್ಞಾ ಹಾಸ್ಟೆಲ್​​ ರೂಮ್​​ ಶೇರ್​​ ಮಾಡಿಕೊಂಡಿದ್ದಳು, ಆದರೆ ನಿನ್ನೆ ಈಕೆಯ ಪೋಷಕರು ಬಂದಿರುವ ಕಾರಣ ಪ್ರಿಯಾ ಹೊರಗಡೆಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ರಾತ್ರಿ ಒಬ್ಬಳೇ ರೂಮಿನಲ್ಲಿದ್ದ ಡಾ. ಪ್ರಜ್ಞಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಪ್ರಿಯಾ ರೂಮಿಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ವ್ಯಾಸಾಂಗ ಮಾಡಲು ಮನಸ್ಸಿಲ್ಲದ ಹಿನ್ನೆಲೆಯಲ್ಲಿ ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,  ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

ಧಾರವಾಡ ರಾಯಾಪುರ ಕೈಗಾರಿಕೆ ಪ್ರದೇಶದಲ್ಲಿ ಗೀಡಗಂಟೆಗಳಿಂದ ಎಲ್ಲೆಂದರಲ್ಲಿ ರಸ್ತೆಗೆ ಬೀಳುತ್ತಿದೆ ರಾಶಿ ಕಸ;ಅಗ್ನಿ ಅವಘಡ ಭೀತಿಯಲ್ಲಿ ಇಂಡಸ್ಟ್ರಿಯಲಿಸ್ಟ.

Spread the loveಧಾರವಾಡ : ಕೈಗಾರಿಕೆ ಪ್ರದೇಶಗಳ‌ ಅಂದ್ಮೇಲೆ ಅಲ್ಲಿ‌ ಕೈಗಾರಿಕೆಗಳ ಶೆಡ್, ಗೂಡೌನ ಕಾಣಬೇಕು ಉತ್ತಮ ರಸ್ತೆ ಇರಬೇಕು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ