ನವದೆಹಲಿ: ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಶ್ ತಮ್ಮ ನಿರ್ಗಮನ ವೇಳೆ ನಾಲ್ವರು ಉದ್ಯೋಗಿಗಳಿಗೆ ಮುಂಬಡ್ತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ನಿಲಯ್ ಮಿತಾಶ್ ಅವರು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಗೆ ನೇಮಕವಾದ ಹಿನ್ನೆಲೆ ವಿ. ವಿಧ್ಯಾವತಿಯವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಲಯ್ ಮಿತಾಶ್ ತಮ್ಮ ನಿರ್ಗಮನದ ಮುನ್ನ ಸಹಾಯಕ ಸಮನ್ವಯ ಅಧಿಕಾರಿಗಳಾಗಿದ್ದ ಕುಸುಮಾ ಪಿ ನಿಂದರಗಿ, ಅಶೋಕ್ ಸಿ. ಕುಂಬಾರ್, ಐ ಶಂಬುಲಿಂಗಪ್ಪ, ಎಲ್.ದಿವಾಕರ್ ಗೆ ಉಪ ಸಮನ್ವಯ ಅಧಿಕಾರಗಳಾಗಿ ಮುಂಬಡ್ತಿ ನೀಡಿದ್ದಾರೆ.
ಮುಂಬಡ್ತಿ ನಿಯಮ ಬಾಹಿರವಾಗಿದ್ದು ಏಕಾಏಕಿ ಬಡ್ತಿ ನೀಡಲಾಗಿದೆ ಎಂದು ಭವನದ ಇತರೆ ಕೆಲವು ಹೆಸರು ಹೇಳಲು ಇಚ್ಛಿಸದ ಉದ್ಯೋಗಿಗಳು ಆರೋಪಿಸಿದ್ದಾರೆ. ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಫೈಲ್ ಗಳು ಬಾಕಿ ಉಳಿಸಿಕೊಂಡಿದ್ದಾರೆ. ವರ್ಗಾವಣೆ ಆದೇಶಯಾಗುತ್ತಿದ್ದಂತೆ ಎಲ್ಲ ಫೈಲ್ ಗಳನ್ನು ಬಿಟ್ಟು ನಿಯಮ ಮೀರಿ ನಾಲ್ವರನ್ನ ಮಾತ್ರ ಪ್ರಮೋಷನ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.