Breaking News

ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆ

Spread the love

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

 

ಜಮೀನಿಗೆ ಆಕಳು ಮೇಯಿಸಲು ಬಿಟ್ಟಿದ್ದಿಯಾ ಎಂದು ಜಗಳ ತೆಗೆದು ಶ್ರೀಕಾಂತ ಕಟಾಬಳಿ ಎನ್ನುವ ಯುವಕನ ಮೇಲೆ ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್ ಹಾಗೂ ರಂಜಿತ್‌ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಘಟನೆಯಲ್ಲಿ ಶ್ರೀಕಾಂತ ಕಟಾಬಳಿ ತಲೆಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

ದಡ್ಡಿ ಕುಟುಂಬದ ವಿರುದ್ಧ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗಾಯಾಳು ಶ್ರೀಕಾಂತ ಅತ್ತಿಗೆ ಸ್ಪರ್ಧೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ವೈಷಮ್ಯ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆಂದು ಕಟಾಬಳಿ ಕುಟುಂಬಸ್ಥರ ಆರೋಪಿಸಿದ್ದಾರೆ. ಅಲ್ಲದೇ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಾಯಾಳು ಶ್ರೀಕಾಂತ ಕುಟುಂಬಸ್ಥರ ಆರೋಪಿಸಿದ್ದು, ಲಕ್ಷ್ಮಣ್ ದಡ್ಡಿ ಹಾಗೂ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ

Spread the love ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇಲ್ಲಿಯವರೆಗೆ 150ಕ್ಕೂ ಅಧಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ