ಬೆಂಗಳೂರು : ನಗರದ ಹೋಂಗಸಂದ್ರದಲ್ಲಿರುವ ಕ್ಲಿನಿಕ್ ನ ವೈದ್ಯರೊಬ್ಬರು ಕೋವಿಡ್ ರೋಗಿಗೆ ಹಲವು ದಿನಗಳಿಂದ ಚಿಕಿತ್ಸೆ ನೀಡಿದ್ದು, ಮಾಹಿತಿ ತಿಳಿದರೂ ಕೂಡ ಆರೋಗ್ಯ ಇಲಾಖೆ ಅಥವಾ ಇತರೆ ಅಧಿಕಾರಿಗಳಿಗೆ ಮಾಹಿತಿ ತಾವಾಗಿ ನೀಡದೆ, ಮಾಹಿತಿ ಮುಚ್ಚಿಟ್ಟ ವೇಣು ಕ್ಲಿನಿಕ್ ಗೆ ಬೀಗ ಜಡಿದು , ಅನುಮತಿ ರದ್ದುಗೊಳಿಸಲಾಗಿದೆ.
ತಾವು ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಪಾಸಿಟಿವ್ ಎಂದು ತಿಳಿದ ಮೇಲೂ ಆರೋಗ್ಯ ಇಲಾಖೆಗೆ ಮಾಹಿತಿ ನೀದರೆ ಕ್ಲಿಕಿಕ್ ನಲ್ಲೆ ಅವಿತು ಕುಳಿತಿದ್ದರು.
ಇಲಾಖೆಗೆ ಈ ವಿಷಯ ತಿಳಿದ ನಂತರ ವೇಣು ಕ್ಲಿನಿಕ್ ನ ವೈದ್ಯರನ್ನು ಪತ್ತೆ ಮಾಡುವ ಸಲುವಾಗಿ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸಿಬ್ಬಂದಿ ಬಂದಿರುವ ವಿಷಯ ತಿಳಿದು, ವೈದ್ಯರು ತಾವು ಹಾಗೂ ಸಿಬ್ಬಂದಿ ಹೊರಗಡೆ ಕ್ಲಿನಿಕ್ ಗೆ ಬೀಗ ಹಾಕಿ ಇವರುಗಳು ಒಳಗೆ ಅವಿತಿದ್ದು ಇಲಾಖೆ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಬಾಗಿಲು ತೆಗೆಸಿ ಎಲ್ಲರನ್ನು ಕರೆತಂದು ಕ್ವಾರಂಟಿನ್ಗೆ ಒಳಪಡಿಸಿರುತ್ತಾರೆ.
ಮಾಹಿತಿ ಮುಚ್ಚಿಟ್ಟು, ತಾವು ಹಾಗೂ ಕ್ಲಿನಿಕ್ ಸಿಬ್ಬಂದಿ ಬಚ್ಚಿಟ್ಟುಕೊಂಡು ದಾರಿತಪ್ಪಿಸಲು, ಜಿಲ್ಲಾ ಕುಟುಂಬ ಕಲ್ಯಾಣಇಲಾಖೆ ಅರಿಗ್ಯಾಧಿಕಾರಿ ಡಾ ಗುಳೂರು ಶ್ರೀನಿವಾಸ್ ರಿಂದ ವರದಿ ತರಿಸಿಕೊಂಡು ವೈದ್ಯರ ಮತ್ತು ತಂಡ ನಡೆದುತ್ತಿದ್ದ ಕ್ಲಿನಿಕ್ ಗೆ ಬೀಗ ಹಾಕಿಸಿ ಅದರ ಲೈಸನ್ಸ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಏನ್ ಶಿವಮೂರ್ತಿ ರದ್ದುಪಡಿಸಿದ್ದಾರೆ.