Breaking News

ಸೆಪ್ಟೆಂಬರ್ 21 ರಂದು ಆರ್‌ಸಿಬಿ ಮೊದಲ ಪಂದ್ಯ, ಎದುರಾಳಿ ಯಾರು ಗೊತ್ತಾ..?

Spread the love

ಬೆಂಗಳೂರು: ಅಂತು ಇಂತು 13ನೇ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಕಳೆದ ಒಂದು ವಾರಗಳ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ. ಲೀಗ್ ಹಂತದ 56 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪ್ಲೇ-ಆಫ್ ಹಂತದ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸೆಪ್ಟೆಂಬರ್ 21 ರಂದು ಮಾಜಿ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ದುಬೈನಲ್ಲಿ ಎದುರಿಸಲಿದೆ. ಆರ್‌ಸಿಬಿ ತಂಡ 3 ಪಂದ್ಯಗಳನ್ನು ಮಧ್ಯಾಹ್ನದ ವೇಳೆ ಆಡಲಿದೆ. ಭಾರತದಲ್ಲಿ ನಡೆಯುವಂತೆ ಯುಎಇಯಲ್ಲೂ ತವರು ಹಾಗೂ ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

– ಆರ್‌ಸಿಬಿ ವೇಳಾಪಟ್ಟಿ
ದಿನಾಂಕ, ಎದುರಾಳಿ, ಸಮಯ (ಭಾರತೀಯ ಕಾಲಮಾನ)
ಸೆ.21, ಸನ್‌ರೈಸರ್ಸ್‌, ರಾ.7.30ಕ್ಕೆ
ಸೆ.24, ಕಿಂಗ್ಸ್ ಇಲೆವೆನ್, ರಾ.7.30ಕ್ಕೆ
ಸೆ.28, ಮುಂಬೈ ಇಂಡಿಯನ್ಸ್, ರಾ.7.30ಕ್ಕೆ*
ಅ.3, ರಾಜಸ್ಥಾನ್ ರಾಯಲ್ಸ್, ಮ.3.30ಕ್ಕೆ *
ಅ.5, ಡೆಲ್ಲಿ ಕ್ಯಾಪಿಟಲ್ಸ್, ರಾ.7.30ಕ್ಕೆ*
ಅ.10, ಸಿಎಸ್‌ಕೆ, ರಾ.7.30ಕ್ಕೆ
ಅ.12, ಕೆಕೆಆರ್, ರಾ.7.30ಕ್ಕೆ *
ಅ.15, ಕಿಂಗ್ಸ್ ಇಲೆವೆನ್, ರಾ.7.30ಕ್ಕೆ*
ಅ.17, ರಾಜಸ್ಥಾನ್ ರಾಯಲ್ಸ್, ಮ.3.30ಕ್ಕೆ
ಅ.21, ಕೆಕೆಆರ್, ರಾ.7.30ಕ್ಕೆ
ಅ.25, ಸಿಎಸ್‌ಕೆ, ಮ.3.30ಕ್ಕೆ*,
ಅ.28, ಮುಂಬೈ ಇಂಡಿಯನ್ಸ್, ರಾ.7.30ಕ್ಕೆ
ಅ.31, ಸನ್‌ರೈಸರ್ಸ್‌, ರಾ.7.30ಕ್ಕೆ *
ನ.2, ಡೆಲ್ಲಿ ಕ್ಯಾಪಿಟಲ್ಸ್, ರಾ.7.30ಕ್ಕೆ

(* ತವರು ನೆಲದ ಪಂದ್ಯಗಳು).

 


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ