Breaking News

ಕೊವ್ಯಾಕ್ಸಿನ್​, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್​ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು

Spread the love

ತುರ್ತು ಪರಿಸ್ಥಿತಿಯಲ್ಲಿ  ಷರತ್ತುಬದ್ಧ ಅನುಮತಿ ಪಡೆದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳಿಗೆ ಸಂಪೂರ್ಣವಾಗಿ ನಿಯಮಿತ ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡುವಂತೆ ಭಾರತದ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಲಸಿಕೆಗಳಿಗೆ ಮಾರುಕಟ್ಟೆ ದೃಢೀಕರಣ ಸಿಕ್ಕರೆ, ಅವು ಔಷಧ ಮಾರುಕಟ್ಟೆಯಲ್ಲಿ ಸಿಗಲಿವೆ. ಸೀರಂ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​  ಲಸಿಕೆಗಳ ಸ್ಥಿತಿಯನ್ನು ಅಪ್​ಗ್ರೇಡ್ ಮಾಡಬೇಕು ಅಂದರೆ, ಸದ್ಯ ಅವುಗಳನ್ನು ತುರ್ತುಸಂದರ್ಭದಲ್ಲಿ ವಯಸ್ಕರಿಗೆ ಷರತ್ತುಬದ್ಧವಾಗಿ, ನಿಯಂತ್ರಿತವಾಗಿ ನೀಡಲಾಗುತ್ತಿದೆ.  ಈ ತುರ್ತು ಪರಿಸ್ಥಿತಿಯಲ್ಲಿ ನಿಯಂತ್ರಿತ ಬಳಕೆ ಎಂಬ ಲೇಬಲ್​ ತೆಗೆದುಹಾಕಿ, ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡಬೇಕು ಎಂದು ಡ್ರಗ್ಸ್​ ಕಂಟ್ರೋಲರ್ ಜನರಲ್​​ ಆಫ್​ ಇಂಡಿಯಾ(ಡಿಸಿಜಿಐ)ಕ್ಕೆ ವಿಷಯ ತಜ್ಞರ ಸಮಿತಿ ಸಲಹೆ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ), ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳ ಸ್ಥಿತಿಯನ್ನು ನವೀಕರಿಸಿ, ಅವುಗಳಿಗೆ ಮಾರುಕಟ್ಟೆ ಬಳಕೆ ಅನುಮತಿ ನೀಡಬೇಕು ಎಂದು ಸಿಡಿಎಸ್​ಸಿಒದ ವಿಷಯ ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಶಿಫಾರಸ್ಸನ್ನು ಡಿಸಿಜಿಐ ಮೌಲ್ಯಮಾಪನ ಮಾಡಲಿದ್ದು, ನಂತರ ನಿರ್ಧಾರ ಪ್ರಕಟಿಸಲಿದೆ ಎಂದು  ಹೇಳಿದೆ. ತಮ್ಮ ಕೊವಿಡ್​ 19 ಲಸಿಕೆಗಳ ಮಾರುಕಟ್ಟೆ ಬಳಕೆಗೆ ಅನುಮತಿ ನೀಡಬೇಕು ಎಂದು ಸೀರಮ್​ ಇನ್​ಸ್ಟಿಟ್ಯೂಟ್​ ಮತ್ತು ಭಾರತ್​ ಬಯೋಟೆಕ್​ ಎರಡೂ ಕಂಪನಿಗಳು ಎರಡನೇ ಬಾರಿ ಸಿಡಿಎಸ್​ಸಿಒದ ವಿಷಯ ತಜ್ಞರ ಸಮಿತಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಬುಧವಾರ ಪರಿಶೀಲನೆ ಮಾಡಿದ ಸಮಿತಿ, ಡಿಸಿಜಿಐಗೆ ಶಿಫಾರಸ್ಸು ಸಲ್ಲಿಸಿದೆ. ಹಾಗೇ, ಪೂರ್ಣಪ್ರಮಾಣದ ಮಾರುಕಟ್ಟೆ ಬಳಕೆಗೂ ಕೆಲವು ಷರತ್ತುಗಳು ಅನ್ವಯ ಆಗಲಿವೆ  ಎಂದು ಪಿಟಿಐ ವರದಿ ಮಾಡಿದೆ.

ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ಗಳು ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಹಿಡಿದ ಸ್ವದೇಶಿ ಲಸಿಕೆಗಳು. ಇವೆರಡಕ್ಕೂ 2021ರ ಜನವರಲ್ಲಿ ತುರ್ತು ಪರಿಸ್ಥಿತಿಯ ಬಳಕೆಗೆ ಅನುಮತಿ ಸಿಕ್ಕಿದೆ. ಅದರಂತೆ ಈಗಾಗಲೇ ದೇಶಾದ್ಯಂತ ಲಕ್ಷಾಂತರ ಜನರಿಗೆ ಈ ಎರಡು ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ.  ಎರಡೂ ಲಸಿಕೆಗಳೂ ಎರಡು ಡೋಸ್​​ನವಾಗಿದ್ದು, 2-8 ಡಿಗ್ರಿ ಸೆಲ್ಸಿಯಸ್​​ ತಾಪಮಾನದಲ್ಲಿ ರಕ್ಷಿಸಬೇಕಾಗುತ್ತದೆ. ಇದೀಗ ಒಮ್ಮೆ ಮಾರುಕಟ್ಟೆ ಬಳಕೆಗೆ ಅನುಮೋದನೆ ಸಿಕ್ಕರೂ, ಕೂಡಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಲಸಿಕೆಗಳು ಸಿಗಲಾರವು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ