Breaking News

ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರು.. ಹಿಜಾಬ್ ವಿವಾದದಲ್ಲಿ ಸರ್ಕಾರ ಎಡವಿದ್ದು ಎಲ್ಲಿ..?

Spread the love

ಇಲ್ಲಿ ಯಾವ ಆಶಯಗಳಿದ್ವೋ ಏನೋ? ಆದ್ರೆ, ಸಂವಿಧಾನದ ಆಶಯಗಳು ಗಾಳಿ ಗೋಪುರವಾದವು.. ಈವರೆಗೆ ಇಲ್ಲದ ಹಿಜಾಬ್ ವಿವಾದ ಧುತ್ತನೇ ಎದ್ದು, ರಾಜ್ಯ ಧರ್ಮಾಧಾರಿತ ರಾಜಕಾರಣದ ಪ್ರಯೋಗಶಾಲೆ ಆಯ್ತು.. ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಸರ್ಕಾರ ಬಾವಿ ತೋಡಿತು.

ಪರಿಸ್ಥಿತಿ ಕೈಮೀರಿದ ಮೇಲೆ ಎಚ್ಚೆತ್ತುಕೊಂಡಿತಾ ಸರ್ಕಾರ?
ರಾಜ್ಯದೆಲ್ಲೆಡೆ ಹಿಜಾಬ್ ವಿವಾದ ಜೋರಾಗಿದೆ. ಇದನ್ನ ನಂದಿಸಲು ಸರ್ಕಾರ 3 ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನೂ ಘೋಷಿಸಿದೆ. ಆದ್ರೆ, ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರು ಎನ್ನುವಂತೆ, ವಿವಾದ ತಾರಕಕ್ಕೇರಿದ ಮೇಲೆ ಅದನ್ನ ನಿಯಂತ್ರಿಸಲು ಮುಂದಾಗಿದೆ. ಇದು ಸರ್ಕಾರ ಇಂಥಾ ಸೂಕ್ಷ್ಮ ವಿಚಾರದಲ್ಲಿ ವಿಳಂಬ ಧೋರಣೆಯನ್ನ ತಾಳಿತಾ ಅನ್ನೋ ಪ್ರಶ್ನೆಯೂ ಎದ್ದಿದೆ.

‘ಮೂರು ದಿನ ಹೈಸ್ಕೂಲ್-ಕಾಲೇಜಿಗೆ ರಜೆ’

ಹಿಜಾಬ್-ಕೇಸರಿ ಗಲಾಟೆ ಕೈ ಮೀರಿದ ಮೇಲೆ ಸಿಎಂ ಬೊಮ್ಮಾಯಿ ಸರ್ಕಾರ ಎಚ್ಚೆತ್ತುಕೊಂಡಿತಾ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. ಕಾಲೇಜುಗಳಲ್ಲಿ ಈ ಹಂತಕ್ಕೆ ಸಂಘರ್ಷ ಉಂಟಾಗ್ತಿದ್ರು ಸರ್ಕಾರವೇ ಬಿಟ್ಟುಕೊಡ್ತಾ? ಶುರುವಲ್ಲೇ ಆರಬೇಕಿದ್ದ ಗಲಾಟೆ ಜೋರಾಗಿದ್ದು ಹೇಗೆ? ಹಿಜಾಬ್​​​​ ಪ್ರಕರಣ ಅಂದಾಜಿಸುವಲ್ಲೇ ಎಡವಿಬಿಟ್ಟಿತಾ ಸರ್ಕಾರ ಎಂಬ ಮಾತುಗಳು ರಾಜ್ಯದೆಲ್ಲೆಡೆ ರಿಂಗಣಿಸುತ್ತಿವೆ.

 


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ