ಬೆಂಗಳೂರು: ಜಿಲ್ಲಾ ಉಸ್ತುವಾರಿ ಪಟ್ಟಿ ಕೇಸರಿ ಮನೆಯಲ್ಲಿ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ. ಲಿಸ್ಟ್ ರಿಲೀಸ್ ಆಗಿ ಮೂರು ದಿನ ಕಳೆದ್ರೂ ಸಂಪುಟ ಸಹೋದ್ಯೋಗಿಗಳ ಬೇಸರ ಮಾತ್ರ ಕಡಿಮೆಯಾಗಿಲ್ಲ. ಕೆಲವರು ಪರೋಕ್ಷವಾಗೇ ತಮ್ಮ ಇಂಗಿತ ಹೊರಹಾಕ್ತಿದ್ರೆ, ಇನ್ನೂ ಕೆಲವರು ಬೇಸರವನ್ನ ನುಂಗಿಕೊಂಡು ಕೊಟ್ಟಿರೋ ಜಿಲ್ಲೆಯಲ್ಲಿ ಕೆಲಸವನ್ನ ಆರಂಭಿಸಿದ್ದಾರೆ.
ಉಸ್ತುವಾರಿ ಬಗ್ಗೆ ಕೊನೆಗೂ ಮಾತನಾಡಿದ ‘ಸಾಮ್ರಾಟ್’
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಿಸಲಾಗಿದ್ದು, ಕೆಲ ಜಿಲ್ಲೆಗಳಲ್ಲಿ ಕೇಸರಿ ಹೈ ಕಮಾಂಡ್ ಅದಲು-ಬದಲು ಆಟ ಆಡಿದೆ. ಅದ್ಯಾವ ತಂತ್ರವನ್ನ ಹೆಣೆದು ಬಿಜೆಪಿ ಈ ಉಸ್ತುವಾರಿ ಹೊಣೆಯನ್ನ ನೀಡಿದ್ಯೋ ಗೊತ್ತಿಲ್ಲ. ಆದ್ರೆ, ಉಸ್ತುವಾರಿ ಪಟ್ಟಿಯಲ್ಲಿ ಪ್ರಮುಖರಿಗೇ ಕೊಕ್ ಕೊಟ್ಟಿರೋದು ಕೆಲ ಸಚಿವರಿಗೆ ಬೇಸರ ತರಿಸಿದೆ.
ಹೀಗಾಗಿ ಕಳೆದ ಎರಡು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಸಚಿವ ಆರ್. ಅಶೋಕ್ ಇದೀಗ ಉಸ್ತುವಾರಿ ಉರಿ ಬಗ್ಗೆ ಮೌನ ಮುರಿದಿದ್ದಾರೆ. ಕೈಗೆಟುಕದ ದ್ರಾಕ್ಷಿ ಹುಳಿ ಎಂಬಂಥಹ ಮಾತುಗಳನ್ನ ಆಡಿದ್ದಾರೆ. ಇತ್ತ ಸುಧಾಕರ್ ಕೊಟ್ಟಿರೋ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೇ ಅಭಿವೃದ್ಧಿ ಮಾಡ್ತೀನಿ ಅಂತಾ ಮನದಲ್ಲಿ ಬೇಸರ ನುಂಗಿಕೊಂಡು ಮಾತನಾಡಿದ್ದಾರೆ.