ಇಂದಿನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಸಿಗೋದು ಡೌಟ್ ಇದ್ದು, ಬಿಸಿಯೂಟ ಕಾರ್ಯ ಕರ್ತೆಯರು ಮತ್ತೆ ಹೋರಾಟಕ್ಕಿಳಿದಿದ್ಧಾರೆ. ಇಂದು ರಾಜ್ಯಾದ್ಯಂತ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಸಲಾಗುತ್ತದೆ.60 ವರ್ಷ ವಯಸ್ಸಾದ ಕಾರ್ಯಕರ್ತೆಯರನ್ನು ವಜಾ ಮಾಡಿದ ಹಿನ್ನೆಲೆ ಇಂದಿನಿಂದ ಶಾಲೆಗಳಲ್ಲಿ ಬಿಸಿಯೂಟ ಮಾಡದಿರಲು ನಿರ್ಧಾರ ಮಾಡಿದ್ಧಾರೆ.
ಸುಮಾರು 6,500 ಕಾರ್ಯಕರ್ತೆಯರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹೀಗಾಗಿ ಇಂದು ರಾಜ್ಯಾದ್ಯಂತ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಸಲಾಗುತ್ತದೆ.ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‍ನಲ್ಲಿ ಅರ್ನಿಧಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ 50 ಲಕ್ಷ ಬಡ, ರೈತ, ಕೃಷಿ ಕಾರ್ಮಿಕರು ಹಾಗೂ ದಿನ ದಲಿತರ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ತಯಾರಿಸಿ ನೀಡುತ್ತಿದ್ದರು. ಬಿಸಿಯೂಟ ಕಾರ್ಯಕರ್ತೆಯರಿಗೆ ಈ ಕೆಲಸವೆ ಆಧಾರ.. ಇಂತಹ ತಾಯಂದಿರಿಗೆ ಆಧಾರಿತ ನಿವೃತ್ತಿ ವೇತನ ನಿಗದಿಪಡಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ವಜಾಗೊಂಡಿರುವ ಕಾರ್ಯಕರ್ತೆಯರಿಗೂ ಗ್ರಾಚ್ಯುಟಿ ಜಾರಿ ಮಾಡಬೇಕು. ರಾಜ್ಯಾದ್ಯಂತ ಆಡುಗೆ ಕೆಲಸ ಬಂದ್ ಮಾಡಿ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಖಜಾಂಜಿ ಮಹದೇವಮ್ಮ ತಿಳಿಸಿದ್ದಾರೆ.