ಹೃದಯವಿದ್ರಾವಕ ಟ್ರಾಜಿಡಿ ಡ್ರಾಮ ಸಿನೆಮಾ ಅಲ್ಲ ಅದು.. ಒಂದು ಹೆಣ್ಣಿನ ಬದುಕಿನ ದುರಂತವಿದೆ, ಹೋರಾಟವಿದೆ, ಲವಲವಿಕೆ ಇದೆ, ನಗುವಿದೆ, ಭಾವುಕರನ್ನಾಗಿಸುತ್ತದೆ, ನಮ್ಮ ಸಮಾಜದ ಇನ್ನೊಂದು ಆ್ಯಂಗಲ್ ಗೆ ಕನ್ನಡಿ ಹಿಡಿಯುತ್ತದೆ.. ಎಲ್ರಿಗೂ ಗೊತ್ತಿದೆ ಇದು ಆಸಿಡ್ ದಾಳಿಗೊಳಗಾದ ಹೆಣ್ಣೊಬ್ಬಳ ಕತೆ ಅಂತ. ಆ ಹೆಣ್ಣು ಸಹಜವಾಗಿ ಬದುಕಲು ಹೋರಾಡುವ ಕತೆ, ಸಮಾಜದೊಳಗೆ ತನ್ನ ಅಸ್ಥಿತ್ವವನ್ನು ಗಟ್ಟಿ ಮಾಡ್ಕೊಂಡು ಬದುಕುವ ಕತೆ. ನಮ್ಮ ಸುತ್ತಮುತ್ತಲಿನ ಸಮಾಜದಲ್ಲೇ ಆ್ಯಸಿಡ್ ದಾಳಿಗೆ ತುತ್ತಾಗಿ ಅಥವ ಯಾವ್ಯಾವುದೋ ಕಾರಣಗಳಿಗಾಗಿ ಮುಖ ಸುಟ್ಕೊಂಡು, ಅಪಘಾತಗಳಿಂದಲೂ ತಮ್ಮ ಬಾಹ್ಯ ಸೌಂದರ್ಯ ಕಳೆದುಕೊಂಡು, ಅಂಗವಿಕಲರಾಗಿ ಲೋಕದ ದೃಷ್ಟಿಯಿಂದ ಕುರೂಪಿ ಎನಿಸಿಕೊಂಡರೂ ಅಂತರಂಗದ ಅವರ ಸೌಂದರ್ಯ, ಆತ್ಮಸ್ಥೈರ್ತ ಮತ್ತು ಆತ್ಮವಿಶ್ವಾಸಗಳಿಂದ ಬೌನ್ಸ್ ಬ್ಯಾಕ್ ಆಗಿ ಬದುಕನ್ನ ಗಟ್ಟಿ ಮಾಡ್ಕೊಂಡು ಹೆಣ್ಣುಮಕ್ಕಳು ಬದುಕುವುದನ್ನ ನೋಡಿದೀವಿ.. ಮುಖ ಸುಟ್ಕೊಂಡು ಅಥವ ಅಂಗವಿಕಲರಾದ ಕಾರಣಕ್ಕೆ ಬದುಕುವುದನ್ನೇ ತ್ಯಜಿಸಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆಯೂ ಕೇಳಿದಿವಿ, ನೋಡಿದಿವಿ ಅಥವ ಓದಿದಿವಿ.. ಹೆಣ್ಣಿಗೆ ಮತ್ತು ಹೆಣ್ಣಿನ ಸಂಕುಲಕ್ಕೆ ಧೈರ್ಯ ತುಂಬುವ, ಸ್ಪೂರ್ತಿ ನೀಡುವ ಸಿನೆಮಾ ಚಪಾಕ್ ಅಕ್ಕತಂಗಿಯರನ್ನೊ, ನಮಗೆ ಬಹಳ ಪರಿಚಿತರನ್ನೋ, ಹತ್ತಿರದವರನ್ನೋ, ನಮ್ಮ ಗೆಳೆಯ-ಗೆಳತಿಯರನ್ನೋ, ಅಥವ ನಮ್ಮನ್ನೋ ಒಮ್ಮೆಯಾದರೂ ಊಹಿಸಿಕೊಂಡರೆ., ಕೆಲವು ಸನ್ನಿವೇಶಗಳು ಅಥವ ಸಂಭಾಷಣೆಗಳಿಗೆ ರಿಲೆಟ್ ಮಾಡಿಕೊಂಡರೆ, ಎದೆ ಝಲ್ ಅನಿಸುತ್ತದೆ.. ನಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ ಸಿನೆಮಾ..