Breaking News

ಜೈಲಿಂದ ಬಿಡುಗಡೆಯಾದ ಚಂದ್ರು ಲಮಾಣಿ – ದೇವಸ್ಥಾನದಲ್ಲಿ ಈಡುಗಾಯಿ ಹೊಡೆದ ಶಾಸಕ

Spread the love

ಬೆಂಗಳೂರು: 5 ಲಕ್ಷ ಲಂಚ  ಪಡೆದ ಆರೋಪದಡಿ ಜೈಲು ಸೇರಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ  ಜಾಮೀನು ಸಿಕ್ಕ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಶಿರಹಟ್ಟಿ ಶಾಸಕರಾಗಿರುವ ಚಂದ್ರು ಲಮಾಣಿ ಕಳೆದ 15 ದಿನದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಚಂದ್ರು ಲಮಾಣಿಗೆ 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಇಂದು ಎಲ್ಲ ಪ್ರೊಸೀಜರ್ ಮುಗಿಸಿ ಬಿಡುಗಡೆಗೊಂಡಿದ್ದಾರೆ.

ನೆಚ್ಚಿನ ಶಾಸಕನ ಬಿಡುಗಡೆಯಿಂದ ಚಂದ್ರು ಲಮಾಣಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಚಂದ್ರು ಲಮಾಣಿ ಕ್ಷೇತ್ರದಿಂದ ಅಭಿಮಾನಿಗಳು ಆಗಮಿಸಿದ್ದರು. ಬಿಡುಗಡೆಯಾಗುತ್ತಿದ್ದಂತೆ ಚಂದ್ರು ಲಮಾಣಿ ಚೆಕ್ ಪೋಸ್ಟ್ ಬಳಿಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದಿದ್ದಾರೆ.


Spread the love

About Laxminews 24x7

Check Also

ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ

Spread the loveಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ