ಸದ್ಯ ಎಲ್ಲವೂ ಆನ್ಲೈನ್ಮಯವಾಗಿದೆ. ಒಂದು ಕ್ಲಿಕ್ ಸಾಕು ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಷ್ಟೇ ಏಕೆ ಮನೆ ಬಾಗಿಲಿಗೆ ತಂದು ತಲುಪಿಸುವ ವ್ಯವಸ್ಥೆಯೂ ಇದೆ. ಅದರಂತೆ ಇಲ್ಲೊಬ್ಬರು ದಂಪತಿ ಆನ್ಲೈನ್ ಮೂಲಕ ಭಾರೀ ಮೊತ್ತಕ್ಕೆ ಸವನ್ನಾ ಬೆಕ್ಕಿನ ಮರಿಯನ್ನು ಆರ್ಡರ್ ಮಾಡಿದ್ದಾರೆ. ಆದರೆ ಬಂದಿರುವ ಆರ್ಡರ್ ತೆರೆದು ನೋಡಿದಾಗ ಶಾಕ್ ಆಗಿದ್ದಾರೆ.
ಫ್ರಾನ್ಸ್ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್ಲೈನ್ನಲ್ಲಿ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆಯ ಸವನ್ನಾ ಬೆಕ್ಕಿನ ಮರಿಯನ್ನು ಬುಕ್ ಮಾಡಿದ್ದಾರೆ. ಹಣವನ್ನು ನೀಡಿದ್ದಾರೆ. ಆದರೆ ಸ್ವಲ್ಪ ದಿನಗಳ ಬಳಿಕ ಆರ್ಡರ್ ಮನೆ ಬಾಗಿಲಿಗೆ ತಲುಪಿದೆ. ಬಂದಿರುವ ಆರ್ಡರ್ ಅನ್ನು ತೆಗೆದು ನೋಡಿದಾಗ ದಂಪತಿ ಶಾಕ್ ಆಗಿದ್ದಾರೆ.
ಬೆಕ್ಕಿನ ಮರಿ ಬದಲು ಸುಮಾತ್ರನ್ ಹುಲಿಮರಿಯನ್ನು ಕಳುಹಿಸಿಕೊಡಲಾಗಿತ್ತು. ಈ ವಿಚಾರ ತಿಳಿದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಮಾತ್ರನ್ ಹುಲಿಮರಿ
ಸುಮಾತ್ರನ್ ಹುಲಿಮರಿಯನ್ನು ಮನೆಯಲ್ಲಿ ಖಾಸಗಿಯಾಗಿ ಸಾಕುವುದನ್ನು ವಿಷೇಧಿಸಲಾಗಿದೆ, ಮಾತ್ರವಲ್ಲದೆ, ಸರಿಯಾದ ದಾಖಲೆಗಳಿಲ್ಲದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವ ಹಾಗಿಲ್ಲ. ದಂಪತಿಗಳು ನೀಡಿದ ದೂರಿನ ಅನ್ವಯ ಸುಮಾತ್ರನ್ ಹುಲಿಮರಿಯನ್ನು ಡೆಲಿವರಿ ಮಾಡಿದ ಸಂಸ್ಥೆಯ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.