ಬೆಳಗಾವಿ- ಬೆಂಗಳೂರಿನಲ್ಲಿ ಕರ್ನಾಟಕ ಬಂದ್..ಬಂದ್..ಬಂದ್ ಎಂದು ಘೋಷಣೆ ಮಾಡಿದ ವಾಟಾಳ್ ನಾಗರಾಜ್ ಶುಕ್ರವಾರ ಬೆಳಗಾವಿಗೆ ಬರುತ್ತಿದ್ದಾರೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿರಿಯ ಕನ್ನಡಪರ ಹೋರಣಾಟಗಾರ, ವಾಟಾಳ್ ಇಂದು ಬೆಳಿಗ್ಗೆ 11-30 ಗಂಟೆಗೆ ಬೆಳಗಾವಿಯ ಸುವರ್ಷ ಸೌಧದ ಎದುರು,ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದಾರೆವಾಟಾಳ್ ನಾಗರಾಜ್ ಅವರ ಜೊತೆ ಪ್ರವೀಣ ಶೆಟ್ಟಿ,ಶಿವರಾಮೇಗೌಡ ಸೇರಿದಂತೆ ಬೆಂಗಳೂರಿನ ಅನೇಕ ಕನ್ನಡಪರ …
Read More »ಒನ್ ನೇಷನ್, ಒನ್ ಎಲೆಕ್ಷನ್: ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಒನ್ ನೇಷನ್, ಒನ್ ಎಲೆಕ್ಷನ್ ಬಗ್ಗೆ ಮಾತನಾಡಿದ್ದು, ಎಲ್ಲ ಚುನಾವಣೆಗಳಿಗೂ ಒಂದೇ ಮತದಾರರ ಪಟ್ಟಿ ಇರಬೇಕು. ಇದರಿಂದ ಆಗಾಗ್ಗೆ ನಡೆಯುವ ಮತದಾನದಿಂದಾಗಿ ಪ್ರತಿ ಕೆಲ ತಿಂಗಳಿಗೊಮ್ಮೆ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣಾ ನೀತಿ ಸಂಹಿತೆಯ ಅಡ್ಡಿಯನ್ನು ತಡೆಯಬೇಕು ಎಂದು ಹೇಳಿದ್ದಾರೆ. ಅಖಿಲ ಭಾರತ ಅಧಿಕಾರಿಗಳ 80ನೇ ಸಮಾವೇಶದ ಅಂತಿಮ ದಿನವಾದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಒಂದು …
Read More »ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕ್ರಮ ಕೈಗೊಳ್ಳಲು ಕೋವಿಡ್ ಸಾಂಕ್ರಾಮಿಕ ಕಾರಣವೆಂದಾದಲ್ಲಿ ಇತ್ತೀಚೆಗೆ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು ಹೇಗೆ ರೈತರ ರ್ಯಾಲಿ ನಡೆಸಿದ್ದರು ಎಂದು ಪ್ರಶ್ನಿಸಿದ್ದಾರೆ.
ಹೊಸದಿಲ್ಲಿ : ಗುರುಗ್ರಾಮದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಹರ್ಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ವಶಪಡಿಸಿಕೊಂಡ ಬೆನ್ನಲ್ಲೇ ಯಾದವ್ ಅವರು ಮಹತ್ವದ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕ್ರಮ ಕೈಗೊಳ್ಳಲು ಕೋವಿಡ್ ಸಾಂಕ್ರಾಮಿಕ ಕಾರಣವೆಂದಾದಲ್ಲಿ ಇತ್ತೀಚೆಗೆ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು ಹೇಗೆ ರೈತರ ರ್ಯಾಲಿ ನಡೆಸಿದ್ದರು ಎಂದು ಪ್ರಶ್ನಿಸಿದ್ದಾರೆ. “ಇದೊಂದು ವಿಚಿತ್ರ ಸಾಂಕ್ರಾಮಿಕ,” ಎಂದು ಹರ್ಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ …
Read More »ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ
ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ. ಕಳೆದು ಹೋದ ಘಟನೆಗಳ ಜೊತೆ ವಾಸ್ತವವನ್ನು ತಿಳಿಸಲು ಬರುತ್ತಿರುವ ಈ ಚಿತ್ರದ ಹೆಸರು ‘ಗಡಿಯಾರ’. ಪ್ರಬಿಕ್ ಮೊಗವೀರ್ ನಿರ್ದೇಶನದ ‘ಗಡಿಯಾರ’ ಸಿನಿಮಾ ಕೋವಿಡ್ ಅನ್ಲಾಕ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ಇದೇ ವಾರ ನವೆಂಬರ್ 27ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಲಾಕ್ಡೌನ್ ಬಳಿಕ ಚಿತ್ರದ ತುಣುಕುಗಳ ಮೂಲಕ ಸದ್ದು ಮಾಡುತ್ತಿದ್ದ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಗರಿಗೆದರಿದೆ. …
Read More »ಮರಾಠ ಅಭಿವೃದ್ಧಿ ನಿಗಮ ರಚನೆ ರಾಜಕೀಯ ಪ್ರೇರಿತ,:ಕರವೇ ಪ್ರತಿಭಟನೆ ನಿರ್ಧಾರ
ಬೆಂಗಳೂರು, ನ.26- ಮರಾಠ ಅಭಿವೃದ್ಧಿ ನಿಗಮ ರಚನೆ ರಾಜಕೀಯ ಪ್ರೇರಿತ, ಸರ್ಕಾರದ ದುಡುಕಿನ ನಿರ್ಧಾರ ಹಾಗೂ ಅಸಾಂವಿಧಾನಿಕ ತೀರ್ಮಾನವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ವಿರೋಸುತ್ತದೆ ಎಂದು ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ವಿರೋಸಿ ಕರ್ನಾಟಕ ಬಂದ್ಗೆ ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಕ್ಷಣಾ ವೇದಿಕೆ ರಾಜ್ಯ ಪದಾಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಂದ್ಗೆ ಬೆಂಬಲ ನೀಡುವುದಾಗಿ …
Read More »ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಲೈಸೆನ್ಸ್ ರದ್ದು: ಎಂ.ಜಿ.ಹಿರೇಮಠ ಎಚ್ಚರಿಕೆ
ಬೆಳಗಾವಿ: ದಂಡ ವಿಧಿಸಿದ ಬಳಿಕವೂ ನಿಯಮಾವಳಿ ಮೀರಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಲೈಸೆನ್ಸ್ ರದ್ದು ಮಾಡುವುದರ ಜತೆಗೆ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಕೋಟ್ಪಾ ಕಾಯ್ದೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು …
Read More »ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಹಾಡಹಗಲೇ ನಡುಬೀದಿಯಲ್ಲೇ ಇರಾನಿ ಗ್ಯಾಂಗ್ನ ಕಳ್ಳರ ಹಲ್ಲೆ
ಧಾರವಾಡ: ಕಳ್ಳರು ತಪ್ಪಿಸಿಕೊಂಡು ಹೋಗುವಾಗ ಪೊಲೀಸರು ಅವರನ್ನು ಹೊಡೆಯುವುದು ಸಾಮಾನ್ಯ. ಆದರೆ ತಮ್ಮನ್ನು ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಹಾಡಹಗಲೇ ನಡುಬೀದಿಯಲ್ಲೇ ಇರಾನಿ ಗ್ಯಾಂಗ್ನ ಕಳ್ಳರು ಹಲ್ಲೆ ಮಾಡಿ, ರಾಜಾರೋಷವಾಗಿ ತಪ್ಪಿಸಿಕೊಂಡು ಹೋಗಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ. ಇದು ಪೊಲೀಸರು ಮತ್ತು ಕಳ್ಳರ ಮಧ್ಯೆ ನಡೆದ ಫೈಟಿಂಗ್ ಅಂದರೆ ನೀವು ನಂಬಲೇಬೇಕು. ಬೆಂಗಳೂರಿನ ಪೊಲೀಸರಿಗೆ ಸಂಗಮ್ ವೃತ್ತದಲ್ಲಿ ನಡುಬೀದಿಯಲ್ಲಿ ಹೊಡೆದು ಧಾರವಾಡದ ಇರಾನಿ ಗ್ಯಾಂಗ್ನ ನಟೋರಿಯಸ್ ಕಳ್ಳರು …
Read More »ಪ್ರಕೃತಿದತ್ತವಾದ ಬೆಟ್ಟವನ್ನ ಒಡೆದು ಲೇಔಟ್ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ
ರಾಯಚೂರು: ನಗರದಲ್ಲಿ ಪ್ರಕೃತಿದತ್ತವಾದ ಬೆಟ್ಟವನ್ನ ಒಡೆದು ಲೇಔಟ್ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. ದೊಡ್ಡ ದೊಡ್ಡ ಬಂಡೆಗಳ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಗ್ರೀನ್ ಝೋನ್ ನಲ್ಲಿರುವ ಬೆಟ್ಟವನ್ನು ಹಗಲು ರಾತ್ರಿ ನಿರಂತರ ನೆಲಸಮ ಮಾಡಲಾಗುತ್ತಿದೆ ಅಂತ ನಿವಾಸಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ನಗರದ ಮಧ್ಯದಲ್ಲೇ ಇರುವ ಇಲ್ಲಿನ ವಿದ್ಯಾನಗರ, ಸಾವಿತ್ರಿ ಕಾಲೋನಿ, ಲಕ್ಷ್ಮಿಪುರಂ ಲೇಔಟ್ಗೆ ಹೊಂದಿಕೊಂಡಿರುವ ಬೆಟ್ಟವನ್ನ ನಿರಂತರವಾಗಿ ಸ್ಫೋಟಿಸಲಾಗುತ್ತಿದೆ. ರಾಯಚೂರು ನಗರದ …
Read More »3 ಕೋಟಿಗೂ ಅಧಿಕ ದೇಣಿಗೆ ಕೇವಲ 10 ದಿನದಲ್ಲಿ ಶಿರಡಿ ಸಾಯಿಬಾಬಾಗೆ
ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಮುಚ್ಚಿದ್ದ ಶಿರಡಿ ಸಾಯಿಬಾಬಾ ಮಂದಿರ ಮತ್ತೆ ಓಪನ್ ಆಗಿದೆ. ಸದ್ಯ ಸಾಯಿಬಾಬಾ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಮಂಗಳವಾರದವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು. ವಿಶ್ವದಾದ್ಯಂತ ಭಕ್ತರು 3.09 ಕೋಟಿ ರೂ., 2,85,629 ರೂ. ಮೌಲ್ಯದ 64 ಗ್ರಾಂ ಚಿನ್ನದ ಜೊತೆಗೆ 93,000 ರೂ. ಮೌಲ್ಯದ 2.8 ಕೆ.ಜಿ ಬೆಳ್ಳಿಯನ್ನು ದಾನ ಮಾಡಿದ್ದಾರೆ. ಆನ್ಲೈನ್ ಮೂಲಕ ದೇವರ ದರ್ಶನಕ್ಕೆ ಬುಕ್ ಮಾಡಲಾಗುತ್ತಿದೆ. ನವೆಂಬರ್ …
Read More »ಅಹ್ಮದ್ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸತೀಶ್ ಜಾರಕಿಹೊಳಿ ಅವರು
ಬೆಳಗಾವಿ : ಕೋವಿಡ್ ಸೋಂಕಿನಿಂದ ಇತ್ತಿಚೇಗೆ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು. ಅಹ್ಮದ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಮೌನಾಚರಣೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್, ಮುಂಚೂಣಿ ಘಟಕ ಅಧ್ಯಕ್ಷರು, ಕಾಂಗ್ರೆಸ್ …
Read More »