Breaking News

Uncategorized

ಅಮಿತ್ ಶಾ ಅವರ್ ಬಗ್ಗೆ ಲಕ್ಷ್ಮಣ್ ಸವದಿ ಹೇಳಿದ್ದೇನು ನೋಡಿ..?

ನಸೇವಕ ಸಮಾವೇಶ ಬಳಿಕ ಕಾರ್ಯಕರ್ತರೊಂದಿಗೆ ಬಿಜೆಪಿ ಚಾಣಕ್ಯನ ಮಿಟಿಂಗ್..ಡಿಸಿಎಂ ಲಕ್ಷ್ಮಣ ಸವದಿ ಜನಸೇವಕ ಸಮಾವೇಶವಕ್ಕೆ ಭಾಗಿಯಾಗಲು ಬೆಳಗಾವಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಮಾವೇಶಕ್ಕೂ ಮೊದಲು ಇತ್ತಿಚೆಗೆ ಅಗಲಿದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಅದೇ ರೀತಿ ಇತ್ತಿಚೆಗೆ ಅಗಲಿದ ಬಿಜೆಪಿ ಕಾರ್ಯಕರ್ತರಾದ ಹಿರೇಮಠ ಹಾಗೂ ರಾಜು ಚಿಕ್ಕನಗೌಡರ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ …

Read More »

ವ್ಯಕ್ತಿಗಿಂತ ಪಕ್ಷ ಮೊದಲು, ಆಶಿಸ್ತು ಸಹಿಸುವುದಿಲ್ಲ: ಶಾಸಕರಿಗೆ ಷಾ ಎಚ್ಚರಿಕೆ

ಬೆಂಗಳೂರು, ಜ.17- ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಕೂಡಲೇ ಅಶಿಸ್ತು ಮತ್ತು ಸಾರ್ವಜನಿಕವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಖಚಿತ ಎಂದು ಭಿನ್ನಮತೀಯರಿಗೆ ಕೇಂದ್ರ ಸಚಿವ ಅಮಿತ್ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ತಿಪ್ಪಾರೆಡ್ಡಿ, ಅಭಯ್ ಪಾಟೀಲ, ಎಂ.ಪಿ.ರೇಣುಕಾಚಾರ್ಯ, ಅಪ್ಪಚ್ಚುರಂಜನ್, ಸತೀಶ್ ರೆಡ್ಡಿ, ಸುನೀಲ್ ಕುಮಾರ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರ ಶಾಸಕರು ಅಸಮಾಧಾನಗೊಂಡಿರುವ ಬೆನ್ನಲ್ಲೇ ಅಮಿತ್ ಷಾ ಅವರ ಈ …

Read More »

ಬಿಜೆಪಿಯಲ್ಲಿ 20ವರ್ಷ ಡಿಂದ ದುಡಿದರು ನಮಗೆ ಕವಡೆ ಕಾಸಿನಿ ಕಿಮ್ಮತ್ತು ಇಲ್ಲಾ.: ದೀಪಾ ಕುಡಚಿ

ಮೂಲ ಬಿಜೆಪಿ ಗರನ್ನು ಕಡೆಗಣಿಸಿದ ಸಂಜಯ್ ಪಾಟೀಲ್ ವಿರುದ್ದ ಹರಿಹಾಯ್ದ ದೀಪಾ ಕುಡಚಿ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತು ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್ ವಿರುದ್ದ ಕರ್ನಾಟಕ ನೀರು ಸರಬರಾಜು ನಿರ್ದೇಶಕಿ ದೀಪಾ ಕುಡುಚಿ ಗಂಭೀರ ಆರೋಪ ಮಾಡಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ …

Read More »

ಚಲಿಸುತ್ತಿದ್ದ ಬಸ್‌ಗೆ ವಿದ್ಯುತ್ ತಂತಿ ತಗುಲಿ 6 ಮಂದಿ ಸಜೀವ ದಹನ

ನವದೆಹಲಿ, ಜ.17- ಚಲಿಸುತ್ತಿದ್ದ ಬಸ್ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದ್ದು , 6 ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ತಾನದ ಜೊಲೊರೇ ಜಿಲ್ಲೆಯಲ್ಲಿ ನಡೆದಿದೆ. ಮಹೇಶ್‍ಪುರ ಗ್ರಾಮದ ಬಳಿ ಶನಿವಾರ ರಾತ್ರಿ ದುರ್ಘಟನೆ ನಡೆದಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಚಾಲಕ ದಾರಿ ತಪ್ಪಿದ್ದು, ಹಳ್ಳಿಯ ರಸ್ತೆಯಲ್ಲಿ ಬಸ್ ಚಾಲನೆ ಮಾಡಿದ್ದಾನೆ. ಹೊಸ ದಾರಿಯಲ್ಲಿ ವಿದ್ಯುತ್ ತಂತಿ ಇರುವ ಬಗ್ಗೆ ಮಾಹಿತಿ ಇಲ್ಲದೆ ಅವಘಡ ಸಂಭವಿಸಿದೆ. ನೇತಾಡುತ್ತಿದ್ದ ವಿದ್ಯುತ್ ತಂತಿ …

Read More »

ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ

ಬೆಳಗಾವಿ: ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಸ್ವಾಗತಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ, ಮಹೇಶ್ …

Read More »

BIG NEWS : ಇಂದು ಸಂಜೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ?

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಚರ್ಚೆ ನಡೆಸಿ ನೂತನ ಸಚಿವರಿಗೆ ಇಂದು ಸಂಜೆಯೇ ಖಾತೆ ಹಂಚಿಕೆ ಮಾಡಲು ಸಿಎಂ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅಮಿತ್ ಶಾ ಅವರು ದೆಹಲಿಗೆ ವಾಪಸ್ಸಾಗಲಿದ್ದು, ನಂತರ ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬುದು ತೀರ್ಮಾನವಾಗಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಯಡಿಯೂರಪ್ಪ ಕೆಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. …

Read More »

ಪತ್ನಿಯ ಅಶ್ಲೀಲ, ಫೋಟೋ ವಿಡಿಯೋ ತೆಗೆದು ಕಿರುಕುಳ

ಬೆಂಗಳೂರು: ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಕಿರುಕುಳ ನೀಡಿ ಬೆದರಿಕೆ ಹಾಕುತ್ತಿದ್ದ ಗಂಡನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಫ್ರೆಜರ್ ಟೌನ್ ನಿವಾಸಿಯಾಗಿರುವ 39 ವರ್ಷದ ಮಹಿಳೆ ದೂರು ನೀಡಿದ್ದು, ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 2019 ರಲ್ಲಿ ದಂಪತಿಗೆ ಮದುವೆಯಾಗಿದ್ದು ಆರಂಭದಲ್ಲಿ ಅನ್ಯೋನ್ಯವಾಗಿದ್ದ ಪತಿರಾಯ ನಂತರದಲ್ಲಿ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹಲ್ಲೆ ಮಾಡುತ್ತಿದ್ದ ಆರೋಪಿ ಪತ್ನಿ ಅಕ್ರಮ ಸಂಬಂಧ …

Read More »

ತೆರೆಮೇಲೆ ಬರಲು ಸಜ್ಜಾದ ‘ಇನ್ಸ್ ಪೆಕ್ಟರ್ ವಿಕ್ರಂ’

ಶ್ರೀ ನರಸಿಂಹ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದಲ್ಲಿ ಭಾವನಾ ರಾವ್ ನಾಯಕಿಯಾಗಿ ನಟಿಸಿದ್ದು, ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಲ್ಲಿ ಎ.ಆರ್. ವಿಖ್ಯಾತ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

Read More »

ಜುಲೈ ಅಥವಾ ಆಗಸ್ಟ್‌ನಲ್ಲಿ ಚಾರ್ಲಿ ದರ್ಶನ ಗ್ಯಾರೆಂಟಿ

ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ನಟ ರಕ್ಷಿತ್‌ ಶೆಟ್ಟಿ, “777 ಚಾರ್ಲಿ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆ “ಸಪ್ತಸಾಗರದಾಚೆ ಎಲ್ಲೋ’, “ಪುಣ್ಯಕೋಟಿ’ ಹೀಗೆ ಮೂರ್‍ನಾಲ್ಕು ಚಿತ್ರಗಳು ರಕ್ಷಿತ್‌ ಶೆಟ್ಟಿ ಕೈಯಲ್ಲಿದೆ. ಸದ್ಯಕ್ಕೆ ರಕ್ಷಿತ್‌ ಶೆಟ್ಟಿ ಗಮನ “777 ಚಾರ್ಲಿ’ಯ ಕಡೆಗಿರುವುದರಿಂದ, ಸುಮಾರು ಒಂದೂವರೆ ವರ್ಷದಿಂದ ರಕ್ಷಿತ್‌ ಶೆಟ್ಟಿ ಆಯಂಡ್‌ ಟೀಮ್‌ “777 ಚಾರ್ಲಿ’ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಹಗಲಿರುಳು “777 ಚಾರ್ಲಿ’ಯ ಕೆಲಸಗಳು ನಡೆಯುತ್ತಿದ್ದರೂ, ಈ ಚಿತ್ರ ತೆರೆಗೆ ಯಾವಾಗ …

Read More »

ಗದಗ ಜಿಲ್ಲೆಯಲ್ಲಿ ವಿಚಿತ್ರ ರೋಗ ಬಾಧೆ, ಕಾಯಿಲೆಯಿಂದ ಮಲಗಿರುವ ರೋಗಿಗಳು; ಆತಂಕಗೊಂಡ ಗ್ರಾಮಸ್ಥರು

ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಿಗೂಢವಾದ ಕಾಯಿಲೆ ಇಲ್ಲಿನ ಜನರ ನಿದ್ದೆಗೆಡಿಸಿದೆ. ಸುಮಾರು 200ಕ್ಕೂ ಹೆಚ್ಚು ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ ಇಬ್ಬರು, ಮೂವರು ಹಾಸಿಗೆ ಹಿಡಿದಿದ್ದಾರೆ. ಕೈಕಾಲು ಬೇನೆ, ತಲೆ ಸುತ್ತು, ಪ್ರಜ್ಞಾಹೀನತೆ, ಕಣ್ಣು ಉರಿ, ಜ್ವರ ನೆಗಡಿ, ಹೊಟ್ಟೆಯಲ್ಲಿ ಸಂಕಟವಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ 10 ರಿಂದ 12 …

Read More »