ಬೆಂಗಳೂರು,ಜ.28- ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2022ರೊಳಗೆ 75 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸುವ ಗುರಿ ರಾಜ್ಯ ಸರ್ಕಾರ ಹೊಂದಿದೆ ಎಂದು ರಾಜ್ಯಪಾಲ ವಿ.ಆರ್.ವಾಲ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಇಂದಿನಿಂದ ಆರಂಭವಾದ ಪ್ರಸಕ್ತ ಸಾಲಿನ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಹಂತ-2 …
Read More »ಬ್ಯಾಂಕ್ ಖಾತೆಗೆ ಪಿಂಚಣಿ
ಬೆಂಗಳೂರು: ರಾಜ್ಯ ಸರಕಾರ “ಮನೆ ಬಾಗಿಲಿಗೇ ಮಾಸಾಶನ’ ಎಂಬ ಅಭಿಯಾನ ಆರಂಭಿಸಿದ್ದು, ಇನ್ನು ಮುಂದೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಮಾಸಾಶನಕ್ಕಾಗಿ ಕಚೇರಿಗಳಿಗೆ ಅಲೆಯಬೇಕಿಲ್ಲ! ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಯಾನ ಹಾಗೂ “ನವೋದಯ’ ಆಯಪ್ ಮತ್ತು ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ 9 ಮಾಸಿಕ ಪಿಂಚಣಿ ಯೋಜನೆ ಹಾಗೂ 3 ಏಕಕಾಲಿಕ ಸಹಾಯಧನ ನೆರವು ಯೋಜನೆ ಜಾರಿಯಲ್ಲಿದೆ. ಈಗಾಗಲೇ ಸೌಲಭ್ಯ ಪಡೆಯುತ್ತಿರುವವರ ಮಾಹಿತಿ ಮರು …
Read More »ಫೇಸ್ ಬುಕ್’ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಡಿಜಿಟಲ್ ಡೆಸ್ಕ್: 500 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನ ಡೇಟಾಬೇಸ್ ಒಳಗೊಂಡಿದೆ ಎಂದು ಸೇವೆಯ ಜಾಹೀರಾತು ನೀಡಿದ ವ್ಯಕ್ತಿಯೊಬ್ಬರು ಮದರ್ ಬೋರ್ಡ್ʼಗೆ ತಿಳಿಸಿದ್ದಾರೆ. ಇನ್ನು ಈ ದತ್ತಾಂಶವು ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಕಂಪನಿ 2019ರ ಆಗಸ್ಟ್ʼನಲ್ಲಿ ನಿಗದಿ ಮಾಡಿದ ದುರ್ಬಲತೆಗೆ ಸಂಬಂಧಿಸಿದೆ ಎಂದು ವರದಿಯಾಗಿದೆ. ವೈಸ್ ಬಾಟ್ʼನ್ನ ಪರೀಕ್ಷಿಸಿದ ಮತ್ತು ಟೆಲಿಗ್ರಾಂ ಬೋಟ್ʼನಿಂದ ಆರಂಭಿಕ ಫಲಿತಾಂಶಗಳು ರಿಡ್ ಆಕ್ಟೀವಡ್ ಆಗಿರುವುದನ್ನ ಕಂಡುಹಿಡಿಯಲಾಯಿತು. ಆದ್ರೆ, ಕ್ರೆಡಿಟ್ʼಗಳನ್ನ ಖರೀದಿಸುವ ಮೂಲಕ …
Read More »ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್ನಲ್ಲಿ ಚಿಂತನೆ
ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ವಾರ್ಷಿಕ 80 ಸಾವಿರ ರೂ. ರೂಪಾಯಿಯವರೆಗೂ ವಿನಾಯಕ ನೀಡುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ. ಸ್ಟ್ಯಾಂಡರ್ಡ್ ಡಿಡೆಕ್ಷನ್ ಮಿತಿ ಹೆಚ್ಚಳ ಮಾಡಲು ಕಳೆದ ಬಜೆಟ್ನಲ್ಲಿ ಜಾರಿಗೆ ತರಲಾಗಿದ್ದ ತೆರಿಗೆ ವ್ಯವಸ್ಥೆಗಳನ್ನು ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ. …
Read More »ಸಿನೆಮಾ ಪ್ರಿಯರಿಗೊಂದು ಸಿಹಿ ಸುದ್ದಿ.
ಹೊಸದಿಲ್ಲಿ/ಬೆಂಗಳೂರು: ಸಿನೆಮಾ ಪ್ರಿಯರಿಗೊಂದು ಸಿಹಿ ಸುದ್ದಿ. ಸಿನೆಮಾ ಹಾಲ್ಗಳಲ್ಲಿ ಶೇ. 50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವನ್ನು ತೆಗೆದುಹಾಕಿರುವ ಕೇಂದ್ರ ಸರಕಾರ ಹೆಚ್ಚಿನ ಪ್ರೇಕ್ಷಕರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಈ ಸಂಬಂಧ ಬುಧವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಿನೆಮಾ ಮಂದಿರ ಮತ್ತು ಈಜುಕೊಳಗಳ ಸಂಬಂಧ ಮಹತ್ವದ ಬದಲಾವಣೆ ಮಾಡಲಾಗಿದೆ. ಆದರೆ ಎಷ್ಟು ಮಂದಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ …
Read More »2, 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಒತ್ತು: ಜಗದೀಶ ಶೆಟ್ಟರ್
ದಾವಣಗೆರೆ: ‘ಬೆಂಗಳೂರು ಕೈಗಾರಿಕೆಗಳಿಂದ ತುಂಬಿ ಹೋಗಿದೆ. ಒಂದೇ ಕಡೆ ಎಲ್ಲ ಉದ್ಯಮಗಳು ಕೇಂದ್ರೀಕೃತಗೊಳ್ಳಬಾರದು. ಎಲ್ಲ ಜಿಲ್ಲೆಗಳೂ ಅಭಿವೃದ್ಧಿ ಹೊಂದುವಂತೆ ಆಗಬೇಕು ಎಂದು ನಿರ್ಧರಿಸಿದ್ದೇವೆ. ಅದಕ್ಕಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಕೈಗಾರಿಕೋದ್ಯಮಿಗಳ ಜತೆ ಬುಧವಾರ ಸಭೆ ನಡೆಸಿದ ಅವರು, ‘ಬೆಂಗಳೂರು-ಮುಂಬೈ ಹೆದ್ದಾರಿಯನ್ನು ಕೈಗಾರಿಕಾ ಕಾರಿಡಾರ್ ಎಂದು ಗುರುತಿಸಲಾಗಿದೆ. ಈ ಹೆದ್ದಾರಿ ಹಾದುಹೋಗುವ …
Read More »ಮಾವನ ಮೇಲಿನ ಸಿಟ್ಟಿಗೆ ಜಗತ್ತು ನೋಡದ ಮಗುವಿನ ಜೊತೆ ಮಸಣ ಸೇರಿದ್ದಾಳೆ.
ಮೈಸೂರು; ಆಕೆ ಕಳೆದ ಐದು ತಿಂಗಳ ಹಿಂದೆ ಪೊಲೀಸ್ ಹುದ್ದೆಯಲ್ಲಿದ್ದವರನ್ನು ಮದುವೆಯಾಗಿದ್ದಳು. ಜೀವನ ಪೂರ್ತಿ ಕೆಲಸದ ಭದ್ರತೆ ಇರುತ್ತೆ, ಮನೆ ಮಂದಿ ಜೊತೆ ನೆಮ್ಮದಿಯಿಂದ ಇರಬಹುದು ಎಂದು ಊಹಿಸಿಕೊಂಡಿದ್ದ ಆಕೆ ಗಂಡನ ಜೊತೆ ಸುಖವಾಗಿಯೇ ಇದ್ದಳು. ಆಕೆ ಮೂರು ತಿಂಗಳ ಗರ್ಭಿಣಿ ಸಹ ಆಗಿ ಇನ್ನೆನು ಪುಟ್ಟ ಮಗುವಿಗೆ ಜನ್ಮ ನೀಡುವವಳಿದ್ದಳು. ಆದರೆ ಆಕೆಗೆ ತಾನು ಬಯಸಿದ ಒಂದು ಸುಖ ಸಿಗಲೇ ಇಲ್ಲದಂತಾಗಿತ್ತು. ತನ್ನ ಹೆತ್ತವರನ್ನ ಬಿಟ್ಟ, ಗಂಡನ ಮನೆಗೆ …
Read More »ಬೆಳಗಾವಿ ಲೋಕಸಭಾ ಸ್ಥಾನಕ್ಕೆ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.: ಸತೀಶ್ ಜಾರಕಿಹೊಳಿ
ಯಾದಗಿರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ರಾಜ್ಯದಲ್ಲಿ ಯಾವುದೇ ಜನಪರ ಕಾಳಜಿ ತೊರಿ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಸಿಎಂ ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಚಿವರ ಓಲೈಕೆ ಮಾಡಲು ಖಾತೆ ಬದಲಾವಣೆ ಸರ್ಕಸ್ ನಡೆಸುತ್ತಿದ್ದಾರೆ. ಅವರಿಗೆ ಜನರ ಬಗ್ಗೆಯಾಗಲಿ, ಸರ್ಕಾರದ ಬಗ್ಗೆಯಾಗಲಿ ಕಾಳಜಿ ಇಲ್ಲ. ಅವರ ಕಾಳಜಿ ಏನಿದ್ದರೂ ಸಚಿವರ ಬಗ್ಗೆ. ಬಿಎಸ್ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ …
Read More »ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು..!H.D.K.
ಬೆಂಗಳೂರು: ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದರು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನು ಸುಪ್ರೀಂಕೋರ್ಟ್ನಲ್ಲಿರುವಾಗಲೇ ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಿಸಿ, ಬೆಳಗಾಂ ಹೆಸರು ಬದಲಾಯಿಸಲಾಗಿದೆ. ಇದು ನ್ಯಾಯಾಂಗ ನಿಂದನೆ. ನಮ್ಮ ಪ್ರದೇಶವನ್ನು ಗೆಲ್ಲುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು …
Read More »ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾಗೆ ನ್ಯಾಯಾಲಯದ ನೊಟೀಸ್
ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾಗೆ ಕೇರಳ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಆನ್ಲೈನ್ ಗೇಮ್ಗಳ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ ಜೊತೆಗೆ ಮಲಯಾಳಂ ನಟ ಅಜು ವರ್ಗೀಸ್ ಗೆ ಸಹ ನೊಟೀಸ್ ನೀಡಿದೆ. ಆರೋಪದ ಬಗ್ಗೆ ಉತ್ತರ ನೀಡುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ. ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ, ಅಜು ವರ್ಗೀಸ್ ಅವರುಗಳು ಆನ್ಲೈನ್ ರಮ್ಮಿ …
Read More »