Breaking News

Uncategorized

ಫೆ. 22ರಿಂದ 6, 7, 8ನೇ ತರಗತಿ ಆರಂಭ? ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ

ಬೆಂಗಳೂರು(ಫೆ. 16): ಮುಂದಿನ ವಾರ ಆರರಿಂದ ಎಂಟನೇ ತರಗತಿಗಳನ್ನ ಪ್ರಾರಂಭಿಸುವ ಸಾಧ್ಯತೆ ಇದೆ. ಇಂದು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಫೆ. 22ರಿಂದ ಈ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿವೆ. ಆದರೆ, ಒಂದರಿಂದ ಐದರವರೆಗಿನ ತರಗತಿಗಳು ಪ್ರಾರಂಭವಾಗುವ ಸಾಧ್ಯತೆ ಇಲ್ಲ. ಈ ಪ್ರಾಥಮಿಕ ಹಂತದ ತರಗತಿಗಳನ್ನ ಸದ್ಯಕ್ಕೆ ಆರಂಭಿಸುವುದು ಬೇಡ ಎಂದು ತಜ್ಞರು ಈ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ಧಾರೆ. ಆದರೆ, ಐದರವರೆಗಿನ …

Read More »

SHOCKING: ದುಡುಕಿನ ನಿರ್ಧಾರ ಕೈಗೊಂಡ ಮತ್ತೊಬ್ಬ ನಟ ಆತ್ಮಹತ್ಯೆ

ಮುಂಬೈ: ‘ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಅಭಿನಯಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರೊಂದಿಗೆ ಸಹನಟರಾಗಿದ್ದ ಸಂದೀಪ್ ನಹಾರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸಂದೀಪ್ ನಹಾರ್ ಮುಂಬೈನ ತಮ್ಮ ನಿವಾಸದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಗೊರೆಗಾಂವ್ ವೆಸ್ಟ್ ಎಸ್‌ಆರ್ವಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ …

Read More »

ದಿಯಾ ಮಿರ್ಜಾ ಗೆ ಎರಡನೇ ಮದುವೆ: ವರ ಯಾರು ಗೊತ್ತೆ?

2001 ರಲ್ಲಿ ಬಿಡುಗಡೆ ಆದ ‘ರೆಹನಾ ಹೇ ತೇರಿ ದಿಲ್‌ ಮೇ’ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ದಿಯಾ ಮಿರ್ಜಾ ಆ ನಂತರ ಹಲವು ವರ್ಷ ಬಾಲಿವುಡ್‌ನ ಖ್ಯಾತ ನಟಿಯಾಗಿ ಮೆರೆದರು. ಇದೀಗ ಸಹನಟಿಯಾಗಿ, ನಿರ್ಮಾಪಕಿಯಾಗಿ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದಿಯಾ ಮಿರ್ಜಾ, ಮೊದಲ ಮದುವೆಯಿಂದ 2019 ರಲ್ಲಿ ವಿಚ್ಛೇಧನ ಪಡೆದಿದ್ದು, ಎರಡು ವರ್ಷದ ಒಂಟಿ ಜೀವನದ ಬಳಿಕ ಈಗ ಮತ್ತೆ ಮದುವೆ ಆಗಲು ತಯಾರಾಗಿದ್ದಾರೆ. ದಿಯಾ ಮಿರ್ಜಾ 2014 …

Read More »

ಕರ್ನಾಟಕಕ್ಕೆ ಇಂದು ಕರಾಳ ಸೋಮವಾರ: ರಾಜ್ಯದ 4 ಜಿಲ್ಲೆಗಳಲ್ಲಿ ಅವಘಡ, ಅಪಘಾತ, ದುರಂತ..

ಮನೆಗೆ ಬೆಂಕಿ ಹಚ್ಚಿ ದಂಪತಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಂದು ಹುಬ್ಬಳ್ಳಿಯ KIMS ಆಸ್ಪತ್ರೆಯಲ್ಲಿ ಪತಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಫೆ.10ರಂದು ನಡೆದಿದ್ದ ಘಟನೆ ಬಳಿಕ ಫೆ.12ರಂದು ಚಿಕಿತ್ಸೆ ಫಲಿಸದೆ ಪತ್ನಿ ರೇಖಾ ಮೃತಪಟ್ಟಿದ್ದರು. ಇದೀಗ, ಇಂದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆಕೆಯ ಪತಿಯೂ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರೆಲ್ಲರೂ ಜಾತ್ರೆಗೆ ತೆರಳಿದ್ದ ವೇಳೆ ದಂಪತಿ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ …

Read More »

ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

ಚೆನ್ನೈ: ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ‘ಟೂಲ್‌ಕಿಟ್‌’ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಮೋದಿಗೋಬ್ಯಾಕ್‌ ಟ್ರೆಂಡ್‌ ಮತ್ತೆ ಶುರುವಾಗಿದೆ. ರೈತರ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಭಾರತದ ವಿರುದ್ಧ ಮಹಾ ಸಮರ ಸಾರಿರುವ ಕೆಲವು ಕಿಡಿಗೇಡಿಗಳ ಕೃತ್ಯ ಒಂದೊಂದಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಇತ್ತ ಮೋದಿಗೋಬ್ಯಾಕ್‌ ಎಂದು ಹಲವರು ಟ್ವೀಟ್‌ ಶುರು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, …

Read More »

ರಮೇಶ ಜಾರಕಿಹೊಳಿ ಇನ್ನೂ ಬಿಜೆಪಿಯಲ್ಲಿ ಸೆಟ್ಲ್ ಆದಂತಿಲ್ಲ. ಎರಡೂ ದೋಣಿಯಲ್ಲಿ ಕಾಲಿಟ್ಟಿರುವಂತಿದೆ: ಹೆಬ್ಬಾಳಕರ್

ಬೆಳಗಾವಿ – ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರು, ದಿನಕ್ಕೆರಡು ಬಾರಿ ಅವರೊಂದಿಗೆ ಮಾತನಾಡುತ್ತೇನೆ ಎನ್ನುವ ಸಚಿವ ರಮೇಶ ಜಾರಕಿಹೊಳಿ ಇನ್ನೂ ಬಿಜೆಪಿಯಲ್ಲಿ ಸೆಟ್ಲ್ ಆದಂತಿಲ್ಲ. ಎರಡೂ ದೋಣಿಯಲ್ಲಿ ಕಾಲಿಟ್ಟಿರುವಂತಿದೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಟಾಂಗ್ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕರು ಇಂದಿಗೂ ತಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಜೊತೆ ದಿನಕ್ಕೆರಡು ಬಾರಿ ಮಾತನಾಡುತ್ತೇನೆ …

Read More »

ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಸರ್ಕಾರ ನೇಮಿಸಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಸರ್ಕಾರ ನೇಮಿಸಿದೆ. ಕೃಷಿ ಇಲಾಖೆ ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸಲು ಹಾಗೂ ಕೃಷಿಕರಲ್ಲಿ ಸ್ಫೂರ್ತಿ ತುಂಬಲು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ದರ್ಶನ್ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಕೃಷಿ ಇಲಾಖೆಯ ರಾಯಭಾರಿಯಾಗಿ ಕೆಲಸ ನಿರ್ವಹಿಸಲು ಯಾವುದೇ ಸಂಭಾವನೆ ಇಲ್ಲದೇ ದುಡಿಯುವುದಾಗಿ ದರ್ಶನ್ ಒಪ್ಪಿಕೊಂಡಿದ್ದರು. ಅಲ್ಲದೇ ಈ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು …

Read More »

ನಟ ಸುಶಾಂತ್ ಸಹೋದರಿಗೆ ಸಂಕಷ್ಟ: FIR ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಕಾರ..!

ಸುಶಾಂತ್ ಸಿಂಗ್ ರಜಪೂತ್ ಸಹೋದರಿ ವಿರುದ್ಧ ದಾಖಲಿಸಲಾಗಿದ್ದ ಎಫ್ ಐಆರ್ ರದ್ದಾತಿಗೆ ಬಾಂಬೆ ಹೈಕೋರ್ಟ್‌ ನಕಾರ ಸೂಚಿಸಿದ್ದು, ಸುಶಾಂತ್‌ ಸಹೋದರಿ ಪ್ರಿಯಾಂಕ ಸಿಂಗ್ʼಗೆ ಸಂಕಷ್ಟ ಎದುರಾಗಿದೆ. ಅಂದ್ಹಾಗೆ, ಪ್ರಿಯಾಂಕ ಸಿಂಗ್ ವಿರುದ್ಧ ಸುಶಾಂತ್‌ ಸಿಂಗ್‌ ರಜಪೂತ್ ಅವ್ರ ಗೆಳತಿ ರಿಯಾ ಚಕ್ರವರ್ತಿ ದೂರು ದಾಖಲಿಸಿದ್ದರು. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ ಐಆರ್‌ ರದ್ದುಗೊಳಿಸಲು ಬಾಂಬೆ ಒಪ್ಪಿಗೆ ಸೂಚಿಸಿಲ್ಲ.

Read More »

IOCL Recruitment 2021 : ಅರ್ಜಿ ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನಾಂಕ

ನವದೆಹಲಿ : ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (Indian Oil Corporation Limited IOCL) ತಾಂತ್ರಿಕ ಅಪ್ರೆಂಟಿಸ್ ಮತ್ತು ತಾಂತ್ರಿಕೇತರ ಟ್ರೇಡ್ ಅಪ್ರೆಂಟಿಸ್ (Non-Technical Trade Apprentice) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರ ಅಡಿಯಲ್ಲಿ ಒಟ್ಟು 505 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IOCLನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 26 ಫೆಬ್ರವರಿ 2021 ರೊಳಗೆ ಐಒಸಿಎಲ್ …

Read More »

ಕುರಿ ಕಾಯಲು ತೋಳ ಬಿಟ್ಟಂತೆ: ಎಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು ಹಂಚಿಕೆಯಲ್ಲಿ ₹ 500 ಕೋಟಿ ಮೊತ್ತದ ಅವ್ಯಹಾರ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಹೇಳುತ್ತಿರುವುದು ಕುರಿ ಕಾಯಲು ತೋಳ ಬಿಟ್ಟಂತೆ ಇದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ವಿಶ್ವನಾಥ್‌ ಈಗ ಬಿಡಿಎ …

Read More »