ಹಾವೇರಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದೆ. ಮೋಡಕವಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆ ಆಗುತ್ತಿದೆ. ತುಂತುರು ಮಳೆಗೆ ಮನೆಯ ಹಳೆಯ ಗೋಡೆಗಳು ನೆನೆದು ಬಿದ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ. ನೆರಗಲ್ ಗ್ರಾಮದ ತಿರಕಪ್ಪ ಗೋದಿ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಅರಳೇಶ್ವರ ಗ್ರಾಮದ ಗಂಗಯ್ಯ ಹಿರೇಮಠ ಹಾಗೂ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದ ರಾಜು ಪಗಡೆ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಮೂರು ಮನೆಯ ಗೋಡೆಗಳು …
Read More »ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು
ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಸಿಎಂ ನಿವಾಸ ಕಾವೇರಿಗೆ ಶಾಸಕರು ದೌಡಾಯಿಸುತ್ತಿದ್ದು, ಕಾವೇರಿ ನಿವಾಸದಲ್ಲಿ ಚರ್ಚೆ ಕಾವೇರಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಶಾಸಕ ಅರವಿಂದ್ ಬೆಲ್ಲದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಅರವಿಂದ್ ಬೆಲ್ಲದ್ ಕರೆಸಿಕೊಂಡು, ದೆಹಲಿಯ …
Read More »ಸಿ.ಪಿ ಯೋಗೇಶ್ವರ್ ಮೇಲೆ ಕಿಡಿಕಾರಿದ ಸಚಿವ ಬಿ.ಸಿ ಪಾಟೀಲ್
ಮೈಸೂರು: ‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಅಲ್ಲ. ಇಡೀ ಜಗತ್ತು ಕೊರೋನಾ ಸೋಂಕಿನಿಂದ ತತ್ತರಿಸುವ ಕಾರಣ ಕೋವಿಡ್ ನಿರ್ವಹಣೆಗೆ ಆದ್ಯತೆ ಕಲ್ಪಿಸಬೇಕು. ರಾಜಕೀಯ ಆ ಬಳಿಕ ಮಾಡೋಣ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ ಸೊಸೆ ಬಂದ ಬಳಿಕ ಆಕೆ ಮನೆ …
Read More »ರಾಹುಲ್ ಜಾರಕಿಹೊಳಿ ಅವರು KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸ್ಯಾನಿಟ್ಜರ,ಮಾಸ್ಕ ವಿತರಣೆ
ಗೋಕಾಕ: ಕೆಪಿಸಿಸಿ ಕಾರ್ಯಾಧಕ್ಷ ,ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಘಟಪ್ರಭಾ ವಿಭಾಗದ ಎಲ್ಲ KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 200 ಕ್ಕೂ ಹೆಚ್ಚು ಸ್ಯಾನಿಟ್ಜರ ಹಾಗೂ ಮಾಸ್ಕಗಳನ್ನು ವಿತರಿಸಿದರು. ಈ ಸಮಯದಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು ಕೋವಿಡ ಈಗ ತಾನೆ ಇಳಿಮುಖ ಕಾಣುತ್ತಿದೆ, ಜನರು ಧೈರ್ಯದಿಂದ ಇರಬೇಕು ಮಾಸ್ಕ ಧರಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಲ್ಲರೂ …
Read More »K.L.E. ಎಂಜಿನಿಯರಿಂಗ್ ಕಾಲೇಜಿಗೆ ₹ 1.10 ಕೋಟಿ ಅನುದಾನ
ಬೆಳಗಾವಿ: ಐಡಿಯಾ ಅಭಿವೃದ್ಧಿ, ಮೌಲ್ಯಮಾಪನ ಮತ್ತು ಪ್ರಯೋಗಾಲಯ ಸ್ಥಾಪಿಸಲು ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿಗೆ ₹ 1.10 ಕೋಟಿ ಅನುದಾನವನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮಂಜೂರು ಮಾಡಿದೆ. ‘ರಾಷ್ಟ್ರ ಮಟ್ಟದ ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 49 ಕಾಲೇಜುಗಳಿಗೆ ಮಾತ್ರ ಇಷ್ಟು ದೊಡ್ಡ ಪ್ರಮಾಣದ ಅನುದಾನ ಲಭಿಸಿದೆ. ಇದು ನಮ್ಮ ಕಾಲೇಜು ನಿರ್ವಹಿಸುವ ಗುಣಮಟ್ಟದ ಮಾನದಂಡಗಳನ್ನು ಸಾಬೀತುಪಡಿಸಿದೆ’ …
Read More »ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..!
ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 9ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ. ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ .15,35,000..ಈ ಪ್ರಕರಣವನ್ನು ಶಂಕರ್ ಗೌಡ …
Read More »ನಟ ಚೇತನ್ ವಿರುದ್ಧ ಕುಣಿಗಲ್ ಠಾಣೆಯಲ್ಲಿ ದೂರು ದಾಖಲು
ತುಮಕೂರು: ಬ್ರಾಹ್ಮಣ ಸಮುದಾಯದ ವಿರುದ್ದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಟ ಚೇತನ್ ವಿರುದ್ದ ಕುಣಿಗಲ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಚೇತನ್ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯದ ಗೌರವಕ್ಕೆ ಧಕ್ಕೆ ಉಂಟಾಗಿದೆ. ಅವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನ ಮಾಡಿದ್ದಾರೆ ಎಂದು ಶ್ರೀರಾಮ ಸೇವಾ ಮಂಡಳಿ ಹಾಗೂ ಬ್ರಾಹ್ಮಣ ಸಂಘ ದೂರು ನೀಡಿದೆ. ಕೂಡಲೆ ನಟ ಚೇತನ್ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಅಂದ್ಹಾಗೆ …
Read More »ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಬಿ.ಎಸ್ ವೈ ಹಾಗೂ 6 ಜನರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಇಡಿಗೆ ದೂರು ನೀಡಿದ್ದು, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕುಟುಂಬದ ವಿರುದ್ಧ ಪಿಎಂಎಲ್ ಎ ಅಡಿ ಪ್ರಕರಣ ದಾಖಲಿಸುವಂತೆ …
Read More »ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಅವ್ಯವಹಾರದ ಆರೋಪ
, ಜೂನ್ 14: ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಾಪಿಸಿದ ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ವಿರೋಧ ಪಕ್ಷಗಳಾದ ಸಮಾಜವಾದಿ ಹಾಗೂ ಆಮ್ ಆದ್ಮಿ ಪಕ್ಷ ಈ ಆರೋಪವನ್ನು ಮಾಡಿದ್ದು ಕಳೆದ ಮಾರ್ಚ್ ತಿಂಗಳನಲ್ಲಿ ಟ್ರಸ್ಟ್ ಈ ಅವ್ಯವಹಾರವನ್ನು ಮಾಡಿದೆ ಎಂದಿದೆ. ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಡೀಲರ್‌ಗಳಿಂದ 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಕೆಲವೇ …
Read More »ಹಾಸ್ಟೇಲಗಳಲ್ಲಿದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಮನವಿ
ವಿಜಯಪೂರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನಲ್ಲಿ ಇಂದು ಹಾಸ್ಟಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಹಾಗೂ ಕೊವಿಡ್ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಹಶಿಲ್ದಾರರವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ 2020 ಮಾರ್ಚ ತಿಂಗಳಿಂದ ಇಲ್ಲಿಯವರೆಗೆ ವೇತನವನ್ನು ಪಾವತಿಸಬೇಕು ಸರ್ಕಾರವು ಈ ನೌಕರರಿಗೆ ಲಾಕಡೌನ …
Read More »
Laxmi News 24×7