ಬೆಂಗಳೂರು : ಅನ್ಲಾಕ್ 3.0 ಕುರಿತು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಸೋಮವಾರದಿಂದಲೇ 3.0 ಅನ್ಲಾಕ್ ಪ್ರಕ್ರಿಯೆ ಸಂಪೂರ್ಣ ಜಾರಿಯಾಗಲಿದೆ ಅಂತ ಮುಖ್ಯಮಂತ್ರಿ ಬಿಎಸ್ವೈ ಹೇಳಿದಾರೆ. ಮಾಲ್ಗಳನ್ನು ಓಪನ್ ಮಾಡಲು, ಬಾರ್ ತೆರೆಯಲು ಅನುಮತಿ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ಅನ್ನು ರದ್ದುಪಡಿಸಲಾಗಿದ್ದು, ನೈಟ್ ಕರ್ಫ್ಯೂ ಮುಂದುವರೆಯಲಿದೆ ಎಂದು ಸಿಎಂ ಹೇಳಿದ್ದಾರೆ.
Read More »ತಾಯಿ-ತಂದೆಯವರ ಸ್ಮರಣಾರ್ಥ ಅರಭಾವಿ ಮಠದಲ್ಲಿ ನಿರ್ಮಿಸಿರುವ ಸಮುದಾಯ ಭವನ ಶೀಘ್ರದಲ್ಲಿಯೇ ಲೋಕರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ : ಭಕ್ತ ಸಮೂಹ ಮತ್ತು ಸಾರ್ವಜನಿಕರ ಶುಭ ಕಾರ್ಯಗಳಿಗಾಗಿ ಅನುಕೂಲ ಕಲ್ಪಿಸಿಕೊಡಲು ಅರಭಾವಿ ಮಠದ ಆವರಣದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಇಷ್ಟರಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ಇಲ್ಲಿಗೆ ಸಮೀಪದ ಅರಭಾವಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭಕ್ತರ ಅನುಕೂಲಕ್ಕೋಸ್ಕರ ಮಠದಲ್ಲಿ ಸಮುದಾಯ ಭವನ …
Read More »ಹಿರಿಯರ ಸ್ಮರಣಾರ್ಥ ಆಹಾರ ಕಿಟ್ ವಿತರಣೆ
ಘಟಪ್ರಭಾ: ದಿ.ಜಾನ್ ಆರ್.ಕಲಾರಕೊಪ್ಪ, ಹಾಗೂ ದಿ.ಎಂ.ಬಿ.ಐಹೊಳಿ ಅವರ ಸ್ಮರನಾರ್ಥ ದೈಹಿಕ ಶಿಕ್ಷಕ ಡಿ.ಜೆ.ಕಲಾರಕೊಪ್ಪ ಅವರಿಂದ ಸರ್ಕಾರಿ ಶಾಲೆಗಳ ಬಿಸಿ ಊಟ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್ಗಳನ್ನು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿತಿರಿಸಲಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಾಳಗಿ ಆಗಮಿಸಿದ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಮಲ್ಲಾಪೂರ ಪಿ.ಜಿ ಹಾಗೂ ಶಿಂದಿಕುರಬೇಟ ಸಿ.ಆರ್.ಸಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ 30 ಕ್ಕೂ ಹೆಚ್ಚು ಬಿಸಿ …
Read More »ಭಾರತೀಯ ಕ್ರೈಸ್ತರ ದಿನಾಚರಣೆ ಅಂಗವಾಗಿ ಕೋವಿಡ್ ಪೀಡಿತರಿಗೆ ಹಣ್ಣು, ಹಂಪಲು ವಿತರಣೆ
ಬೆಳಗಾವಿ : ಬೆಳಗಾವಿ ಫಾಸ್ಟರ್ಸ್ ಅಂಡ್ ಕ್ರಿಸ್ಟಿನ್ ಲೀಡರ್ಸ್ ಅಸೋಸಿಯೇಷನ್, ಶನಿವಾರ – ಭಾರತೀಯ ಕ್ರೈಸ್ತ ದಿನಾಚರಣೆ – ಅಂಗವಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಕೋವಿಡ್ 19 ನಿಯಮಗಳನ್ನು ಪಾಲಿಸಿ, ಹಣ್ಣು ಹಂಪಲವನ್ನು ವಿತರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಜೆ ಥೋಮಸ್ ನೇತೃತ್ವದಲ್ಲಿ ಕೋವಿಡ್ ಹಾಗು ಇತರ ಒಳರೋಗಿಗಳಿಗೆ ಹಣ್ಣು, ಹಾಲು, ಬಿಸ್ಕೆಟ್, ನೀರು ನೀಡಿ ಅವರು ಶೀಘ್ರ ಗುಣವಾಗಲೆಂದು ಅವರಿಗಾಗಿ ಪ್ರಾರ್ಥಿಸಲಾಯಿತು. ಬೆಳಗಾವಿ ಫಾಸ್ಟರ್ಸ್ …
Read More »ಪಕ್ಷ ಬಿಟ್ಟು ಹೋದವರು ಬೇಕಾದರೆ ಮತ್ತೆ ಪಕ್ಷ ಸೇರಲು ಅರ್ಜಿ ಹಾಕಬಹುದು: ಡಿ ಕೆ ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ ಇದೆಯೋ ಅಂತಹ ಯಾರೂ ಬೇಕಾದರೂ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋದವರು ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ಅವರೂ ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಗೆ ಅರ್ಜಿ ಹಾಕಬಹುದು. ಸ್ಥಳೀಯ ನಾಯಕರು ಒಪ್ಪಿದರೆ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದರು. ಯಾರು …
Read More »ಭಾರತೀಯ ಕ್ರೈಸ್ತ ದಿನಾಚರಣೆಯ ನಿಮಿತ್ಯ ವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ.
ಗೋಕಾಕ ಭಾರತೀಯ ಕ್ರೈಸ್ತ ದಿನಾಚರಣೆಯ ನಿಮಿತ್ಯ ವಾಗಿ ಗೋಕಾಕ ನ ಗರದಲ್ಲಿ ಇಂದು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಸತೀಶ ಜಾರಕಿಹೊಳಿ ವಹಿಸಿದರು ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಆಂಟಿನ ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಡಾಕ್ಟರ್ ಬಿ.ಹೆಚ್ ಬಾಗಲಕೋಟ ಹಾಗೂ ದಲಿತ ಮುಖಂಡರಾದ ಸತ್ಯಪ್ಪ ಕರವಾಡಿ ಹಾಜರಿದ್ದರು ಪ್ರಾಸ್ತಾವಿಕವಾಗಿ ಪಾಸ್ಟರ ವಾಯ್.ಆರ್ .ಕರಬನ್ನವರ …
Read More »ಬಿಜೆಪಿಯಲ್ಲಿ ಏನೋ ಸಮಸ್ಯೆಯಿದೆ. ಇದು ಆಡಳಿತದ ಮೇಲೂ ದುಷ್ಪರಿಣಾಮ ಬೀರುತ್ತಿದೆ: R.V ದೇಶಪಾಂಡೆ
ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹಾಗೂ ಮಾಜಿ ಸಿ.ಎಂ ಸಿದ್ದರಾಮಯ್ಯ ಕೂಡಿಕೊಂಡೇ ಹೋಗುತ್ತಿದ್ದಾರೆ. ಅವರ ನಡುವೆ ಬಿರುಕಿದೆ ಎನ್ನುವುದು ಸುಳ್ಳು, ಕೆಲ ಮಾಧ್ಯಮಗಳ ಸೃಷ್ಟಿ. ಪಕ್ಷದ ನಾಯಕರೆಲ್ಲಾ ಒಗ್ಗಟಿಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದರು. ನಗರದ ಪೂಗ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳ ಸಭೆಯಲ್ಲಿ ಪಾಲ್ಗೊಂಡು ಹಿರಿಯ ವೈದ್ಯರಾದ ಡಾ. ರಾಜಾರಾಮ ದೊಡ್ಡೂರು, ಡಾ.ಕೆ.ಬಿ.ಪವಾರ್, ಹಿರಿಯ ಪತ್ರಕರ್ತ …
Read More »ಕರ್ನಾಟಕ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುತ್ತೆ: ಜಗದೀಶ್ ಶೆಟ್ಟರ್
ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತೀ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಹೊರತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ.1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತಾ ದಾಪುಗಾಲು ಇಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಬೆಂಗಳೂರು ನಗರದಲ್ಲಿ ಲಘು …
Read More »ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿ ಹೊರತೆಗೆದ ವೈದ್ಯರು
ಕೊಪ್ಪಳ: ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೆಂತೋಪ್ಲಸ್ ಡಬ್ಬಿಯನ್ನು ಸರ್ಕಾರಿ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಎಂಬ (8) ತಿಂಗಳ ಮಗು ಆಟವಾಡುತ್ತಾ ಮೆಂತೋಪ್ಲಸ್ ಡಬ್ಬಿ ನುಂಗಿತ್ತು. ಕೂಡಲೇ ಇದನ್ನು ಅರಿತ ಮಗುವಿನ ಪೋಷಕರು, ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿನ ಗಂಟಲಿನಲ್ಲಿ ಡಬ್ಬಿ ಸಿಲುಕಿಕೊಂಡಿದೆ. ಹೀಗಾಗಿ ಉಸಿರಾಟಕ್ಕೆ …
Read More »ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯ ಬಂಧನ
ಮಂಗಳೂರು, ಜೂನ್ 30; ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಂಞಗಾಡ್ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಬಂಧಿತ ಮಹಿಳೆ. ವೈದ್ಯೆಯ ಜೊತೆಗಿದ್ದ ಇನ್ನೊರ್ವ ಆರೋಪಿ ಕಾಸರಗೋಡಿನ ಅಜ್ಮಲ್ನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿರುವ ಡಾ. ನದೀರ್ ಸೂಚನೆಯಂತೆ ವೈದ್ಯೆ ಮಿನು ರಶ್ಮಿ, ಕಾಂಞಗಾಡ್ನಿಂದ …
Read More »