ಮಹಾಸನ್ನಿದಿ ಅವರಿಂದ ಎಸ್ .ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ. ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ SSC ಕಮಿಟಿ ವತಿಯಿಂದ ಮತ್ತು ಐದನೇ ಬಾರಿಗೆ ಸಾವಳಗಿ ಪ್ರಿಮಿಯರ್ ಲೀಗ್ (SPL) ಕ್ರೀಡಾ ಪಂದ್ಯಾವಳಿಗೆ ಶ್ರೀ ಮನ್ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಅವರಿಂದ ಚಾಲನೆ ನೀಡಿ ನಂತರ ಅವರು ಮಾತನಾಡಿ, ಕ್ರೀಡೆ ಎನ್ನುವುದು ಸರ್ವಧರ್ಮ ಸಹಬಾಳ್ವೆಗೆ ಪೂರಕವಾಗಿದೆ ಕ್ರೀಡೆಯಿಂದ ದೇಶ ಹಾಗೂ ರಾಜ್ಯಗಳ ನಡುವೆ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು …
Read More »ನೀರಿನ ಕರೆಂಟ್ ಮೋಟರ(ಪಂಪಸೆಟ್) ಕಳ್ಳರ ಬಂಧನ, 5,60,000/-ರೂಪಾಯಿ ಕಿಮ್ಮತ್ತಿನ ವಸ್ತುಗಳ ವಶಕ್ಕೆ!
ಗೋಕಾಕ : ತಾಲೂಕಿನ ದುಂಡಾನಟ್ಟಿ ಗ್ರಾಮದ ಹಳ್ಳದ ದಂಡೆಯಲ್ಲಿ ಕಳ್ಳತನವಾಗಿದ್ದ ನೀರಿನ ಕರೆಂಟ್ ಮೋಟರ್ ಗಳನ್ನು ಪತ್ತೆ ಹಚ್ಚಿ, ಕಳ್ಳರನ ಬಂಧಿಸಲಾಗಿದೆ. ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ದುಂಡಾನಟ್ಟಿ ಹಳ್ಳದ ದಂಡೆಯಲ್ಲಿ ಕೂಡ್ರಿಸಿದ ಒಟ್ಟು 86500/- ರೂ. ಕಿಮ್ಮತ್ತಿನ ಮೋನೊಬ್ಲಾಕ ಸಿಆರ್‌ಐ ಕಂಪನಿಯ 5 ಎಚ್‌ಪಿ ಎರಡು ಕರೆಂಟ್ ಮೋಟರ & 10 ಎಚ್.ಪಿ ಒಂದು ಕರೆಂಟ್ ಮೋಟರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪ್ರಕರಣ ದಾಖಲಾಗಿರುತ್ತದೆ. ಸದರಿ …
Read More »ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ
26&27 December all School Of Belagavi city and Rural Taluka Holidays. ಗಾಂಧಿ ಭಾರತ ಕಾರ್ಯಕ್ರಮ: ಬೆಳಗಾವಿ ತಾಲ್ಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಬೆಳಗಾವಿ ನಗರ ಮತ್ತು ಗ್ರಾಮೀಣ ಯೋಜನೆಯ ಅಂಗನವಾಡಿ ಕೇಂದ್ರಗಳಿಗೂ ರಜೆ.
Read More »ಆ” ಪದ ಬಳಸಿಲ್ಲವೆಂದರೇ ಧರ್ಮಸ್ಥಳಕ್ಕೆ ಬಂದು “ಆಣೆ ಪ್ರಮಾಣ” ಮಾಡಿ… ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಿ.ಟಿ. ರವಿಗೆ ಸವಾಲ್…!!!??
ನೀವು “ಆ” ಪದ ಬಳಸಿಲ್ಲವೇ??? ನಿಮಗೆ ನೈತಿಕತೆ ಇದ್ರೇ ಧರ್ಮಸ್ಥಳಕ್ಕೆ ಬನ್ನಿ “ಆಣೆ ಪ್ರಮಾಣ” ಮಾಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಿ.ಟಿ. ರವಿಗೆ ಸವಾಲ್…!!!?? ಆ ಪದವನ್ನ ಬಳಸೇ ಇಲ್ಲ ಎಂದು ಸಿ.ಟಿ. ರವಿ ಅವರು ಜನರ ಕಣ್ಣಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನಿಮಗೆ ನೈತಿಕತೆ ಇದ್ರೇ ನೀವು ಸಹಕುಟುಂಬ ಬಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ಮೇಲೆ ಆಣೆ ಪ್ರಮಾಣ …
Read More »ಮತ್ತೊಂದು ಗರಿ ಮುಡಿಗೇರಿಸಿಕೊಂಡು ಹೈಟೆಕ್ ಮೋಟರ್ಸ್
ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಮತ್ತು ಗೋವಾ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರ ಪ್ರೀತಿಗೆ ಪಾತ್ರವಾದ ಹೈಟೆಕ್ ಮೋಟರ್ಸ್ ಮತ್ತು ಆಟೋ ಮೊಬೈಲ್ ಪ್ರೈವೇಟ್ ಲಿಮಿಟೆಡನ ಸೇವೆಗೆ ಮೆಚ್ಚಿ ಪಾಲಿಸಿ ಬಝಾರ್ ಹೈಟೆಕ ಮೋಟರ್ಸನೊಂದಿಗೆ ಒಪ್ಪಂದ ಮಾಡಿಕೊಂಡು ಅಶ್ಯೂರ್ಡ್ ಡಿಲಿವರಿ ಪ್ರೋಗ್ರಾಮನಡಿ ಗ್ರಾಹಕರಿಗೆ ಇನ್ನಷ್ಟು ಒಳ್ಳೆಯ ಸೇವೆಯನ್ನು ನೀಡಲೂ ಪ್ರೋತ್ಸಾಹಿಸಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಮತ್ತು ಗೋವಾ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರ ಪ್ರೀತಿಗೆ ಪಾತ್ರವಾದ ಹೈಟೆಕ್ ಮೋಟರ್ಸ್ ಮತ್ತು ಆಟೋ ಮೊಬೈಲ್ ಪ್ರೈವೇಟ್ …
Read More »ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಜೋಡಕುರಳಿ ಗ್ರಾಮ
ಚಿಕ್ಕೋಡಿ:ಗ್ರಾಮಗಳು ಅಭಿವೃದ್ಧಿಯಾಗಲೆಂದು ಸರ್ಕಾರಗಳು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತವೆ. ಆದರೆ ಗ್ರಾಮಗಳು ಮಾತ್ರ ಇನ್ನೂ ವರೆಗೂ ಅಭಿವೃದ್ಧಿ ಆಗುವ ಲಕ್ಷಣಗಳು ಕಾಣುತ್ತಿಲ್ಲ,ಇಲ್ಲೊಂದು ಗ್ರಾಮದ ಜನರು ಮೂಲಸೌಲಭ್ಯಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಆ ಗ್ರಾಮ ಯಾವುದು ಅಂತೀರಾ ಹಾಗಾದ್ರೆ ಈ ಸ್ಟೋರಿಯನ್ನು ನೋಡಿ ಸಮರ್ಪಕ ರಸ್ತೆ ಇಲ್ಲದೆ ಕಲ್ಲು ಮುಳ್ಳಿನಲ್ಲಿ ಓಡಾಡುತ್ತಿರುವ ಗ್ರಾಮಸ್ಥರು, ಸಮರ್ಪಕ ಚರಂಡಿ ಇಲ್ಲದೆ ಗಬ್ಬು ವಾಸನೆ ಹೊಡೆಯುತ್ತಿರುವ ಗ್ರಾಮ, ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸುತ್ತಿರುವ …
Read More »ಶ್ರೀ ಮಹಾಲಕ್ಷ್ಮೀ ಬ್ಯಾಂಕ್ 87 ಕೋಟಿ.ರೂ ಮರಳಿ ಗ್ರಾಹಕರ ಖಾತೆಗೆ ನುಡಿದಂತೆ ನಡೆದ ಶಾಸಕರಾದ ರಮೇಶ ಜಾರಕಿಹೊಳಿ
ಗೋಕಾಕ ಶ್ರೀ ಮಹಾಲಕ್ಷ್ಮೀ ಬ್ಯಾಂಕಿನ ಗ್ರಾಹಕರಿಗೆ ಸಿಹಿ.ಸುದ್ದಿ ಶ್ರೀ ಮಹಾಲಕ್ಷ್ಮೀ ಬ್ಯಾಂಕ್ 87 ಕೋಟಿ.ರೂ ಮರಳಿ ಗ್ರಾಹಕರ ಖಾತೆಗೆ ನುಡಿದಂತೆ ನಡೆದ ಶಾಸಕರಾದ ರಮೇಶ ಜಾರಕಿಹೊಳಿ ಗೋಕಾಕ ನಗರದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೊ ಆಪರೇಟಿವ್ ಕ್ರೆಡಿಟ್ ಬ್ಯಾಂಕ.ಲಿ ಗೋಕಾಕ ಬ್ಯಾಂಕಿನ ಎಲ್ಲಾ ಗ್ರಾಹಕರು ವಿಶೇಷವಾಗಿ ಠೇವಣಿದಾರರಿಗೆ ಸಿಹಿ ಸುದ್ದಿ.. ಗೋಕಾಕ ಮತಕ್ಷೇತ್ರದ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರ ಅವಿರತ ಪ್ರಯತ್ನದಿಂದ ಡಿ.ಐ.ಸಿ.ಜಿಸಿ ಇನ್ಸೂರೆನ್ಸ್ ಮೊತ್ತ ಒಟ್ಟು 87 …
Read More »ಶ್ವೇತಾ ಗೌಡ ಜತೆ ವರ್ತೂರ್ ಪ್ರಕಾಶ್ ಎಂಗೇಜ್ಮೆಂಟ್ಗೆ ಸಿದ್ಧತೆ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರು, (ಡಿಸೆಂಬರ್ 24): ಶ್ವೇತಾ ಗೌಡ ವಂಚನೆ ಕೇಸ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ವಿಚಾರಣೆ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ವರ್ತೂರು ಪ್ರಕಾಶ್, ಎಸಿಪಿ ಗೀತಾ ಎದುರು ವಿಚಾರಣೆ ಎದುರಿಸಿದ್ದು, ಇದೇ ವೇಳೆ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್‌ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್ ಹಿಂದಿರುಗಿಸಿದ್ದಾರೆ. ಒಟ್ಟು …
Read More »ಅಮೆರಿಕದಲ್ಲಿ ಶಿವರಾಜ್ಕುಮಾರ್ಗೆ ಶಸ್ತ್ರ ಚಿಕಿತ್ಸೆ; ದೂರವಾಣಿ ಮೂಲಕ ಮಾತಾಡಿದ ಸಿಎಂ
ನಟ ಶಿವರಾಜ್ಕುಮಾರ್ ಅವರಿಗೆ ಅಮೆರಿಕದಲ್ಲಿ ಇಂದು (ಡಿಸೆಂಬರ್ 24) ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕರು ಹಾರೈಸಿದ್ದಾರೆ. ಅವರ ಆರೋಗ್ಯಕ್ಕಾಗಿ ಹಲವು ಕಡೆಗಳಲ್ಲಿ ಹೋಮ, ಪೂಜೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಶಿವರಾಜ್ಕುಮಾರ್ ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ಕುಮಾರ್ …
Read More »ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಬೆಂಗಳೂರು, (ಡಿಸೆಂಬರ್ 24): ಎಂಎಲ್ಸಿ ಸಿ.ಟಿ.ರವಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜಭವನದ ಮೆಟ್ಟಿಲೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರನ್ನ ರಾಜ್ಯ ಸರ್ಕಾರ ನಡೆಸಿಕೊಂಡು ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಂದು (ಡಿಸೆಂಬರ್ 24) ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. …
Read More »