ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಟರ್ ಮೆನ್ ಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ವಾಟರ್ ಮೆನ್ ಗಳ ಕರ್ತ್ಯಗಳು ಹೀಗಿವೆ 1) ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕೆಲಸ ನಿರ್ವಹಿಸಲು ಹಾಗೂ ನೀರಿನ ಟ್ಯಾಂಕ್ ಭರ್ತಿಯಾದ ನಂತರ ನೀರು ಸರಬರಾಜನ್ನು ನಿಲ್ಲಿಸತಕ್ಕದ್ದು. 2) ನೀರಿನ ಮೇಲೆ ತೆರಿಗೆ ವಸೂಲಿ ಮಾಡತಕ್ಕದ್ದು ಹಾಗೂ ಬಿಲ್ ಕಲೆಕ್ಟರ್‌ಗೆ ತೆರಿಗೆ ವಸೂಲಾತಿ ವಿಷಯದಲ್ಲಿ ಸಹಕಾರ ನೀಡುವುದು. 3) ಕುಡಿಯುವ ನೀರು …
Read More »ಬೆಂಗಳೂರಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅರೆಸ್ಟ್
ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಕೇಸ್‌ನಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನನ್ನು ಎನ್‌ಐಎ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಉಗ್ರ ಅರ್ಷದ್ ಖಾನ್ ಬಂಧಿತ. ಮೋಸ್ಟ್ ವಾಂಟೆಡ್ ಶಂಕಿತ ಉಗ್ರನ ಖಾಸ ದೋಸ್ತ್ ಈತ. ಬೇಲ್ ಪಡೆದು ತಲೆಮರೆಸಿಕೊಂಡಿದ್ದ. ಈಗ ಮತ್ತೆ ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಸಿಸಿಬಿ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಈ ಹಿಂದೆ ಅರ್ಷದ್ ಖಾನ್ ಅರೆಸ್ಟ್ ಆಗಿದ್ದ. ಶಂಕೆ ಮೇರೆಗೆ ಸಿಸಿಬಿ ಬಂಧಿಸಿತ್ತು. …
Read More »ಬೇರೆ ರಾಜ್ಯದ ವಿದ್ಯಾರ್ಥಿಗಳಿಂದ ನಕಲಿ ದಾಖಲೆ ಬಳಕೆ ಸೂಕ್ತ ತನಿಖೆಗೆ ಆಗ್ರಹ
ಬೆಳಗಾವಿ:ಬೇರೆ ರಾಜ್ಯದ ಕೆಲ ವಿದ್ಯಾರ್ಥಿಗಳು ನಕಲಿ ರಹವಾಸಿ, ಜಾತಿ ಹಾಗೂ ಇತರೆ ನಕಲಿ ದಾಖಲೆಗಳನ್ನು ಸಲ್ಲಿಸಿ ನಗರದಲ್ಲಿ ಶೈಕ್ಷಣಿಕ ಪ್ರವೇಶ, ವಸತಿ ಸೌಲಭ್ಯ, ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗ ಸಹಿತ ಹಲವು ಸೌಲಭ್ಯ ಪಡೆಯುತ್ತಿದ್ದು, ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಆಗ್ರಹಿಸಿದೆ. ಈ ಸಂಬಂಧ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಡಿಸಿಪಿ ನಾರಾಯಣ ಬರಮನಿಗೆ ಸುದೀರ್ಘವಾದ ಮಾಹಿತಿವುಳ್ಳ ಮನವಿಯೊಂದನ್ನು …
Read More »ಮೇಕೆದಾಟು ಯೋಜನೆ – ವನ್ಯಜೀವಿ ಅನುಮೋದನೆಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಪ್ರಸ್ತಾವ
ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಅಗತ್ಯವಿರುವ ವನ್ಯಜೀವಿ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿದೆ. ಯೋಜನೆಗೆ 5,200 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಗೆ ಅನುಮೋದನೆ ಕೋರಿ ಕಾವೇರಿ ನೀರಾವರಿ ನಿಗಮವು ಜನವರಿ 4 ರಂದು ಪ್ರಸ್ತಾವ ಸಲ್ಲಿಸಿತ್ತು. ‘ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕಾವೇರಿ ನೀರು very water) ನಿರ್ವಹಣಾ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ವಿಸ್ತೃತ ಯೋಜನಾ ವರದಿಯನ್ನು …
Read More »ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿಯಿಂದ ಜಿಲ್ಲಾಧಿಕಾರಿಗೆ ಮನವಿ
ಬೆಳಗಾವಿ : ರಾಜ್ಯದ ವಿವಿಧ ಸರ್ಕಾರಿ, ಅನುದಾನಿತ ಕಾಲೇಜ್‌ಗಳಲ್ಲಿ ನಕಲಿ ಪಿಎಚ್‌ಡಿ ಪದವಿ ಹೊಂದಿರುವವರು ಅತಿಥಿ ಹಾಗೂ ಪೂರ್ಣ ಪ್ರಮಾಣದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕಾಲೇಜ್ ರಸ್ತೆಯಿಂದ ಪ್ರತಿಭಟನಾ ರ‌್ಯಾಲಿಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು, ಕೆಲಹೊತ್ತು ಚನ್ನಮ್ಮ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೊಹಮ್ಮದ್ …
Read More »AI Impact ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ – ಎಐ ಕ್ಷೇತ್ರ, ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ
ನವದೆಹಲಿ: ಕೃತಕ ಜಾಣ್ಮೆ ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಕರ್ನಾಟಕವು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವುದನ್ನು ಇಂಡಿಯಾ AI Impact ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಗತಿಕ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಗತಿಕ ಉದ್ಯಮ ದಿಗ್ಗಜರು, ಸಂಶೋಧಕರು ಮತ್ತು ನವೋದ್ಯಮ ಸ್ಥಾಪಕರ ಜೊತೆಗೆ ಸಚಿವರು ವ್ಯಾಪಕ ಸಮಾಲೋಚನೆ ನಡೆಸಿದರು. ಶೃಂಗಸಭೆಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕೃತಕ ಜಾಣ್ಮೆ …
Read More »ಯಾರಿಗೂ ಅನ್ಯಾಯವಾಗದು ಅಪಪ್ರಚಾರಕ್ಕೆ ಕಿವಿಗೊಡಬೇಡಿ
ಬೆಳಗಾವಿ: ‘ಬಿಡಿಸಿಸಿ ಬ್ಯಾಂಕ್ ಗ್ರಾಹಕರು ಅಪಪ್ರಚಾರಕ್ಕೆ ಕಿವಿಕೊಡಬೇಡಿ. ಬ್ಯಾಂಕನ್ನು ಚೆನ್ನಾಗಿ ನಡೆಸುತ್ತೇವೆ. ಯಾವ ರೈತರಿಗೂ, ಗ್ರಾಹಕರಿಗೂ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಿಪಿಇಡಿ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಕೊಡಲು ಉದ್ದೇಶಿಸಿರುವ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಇಟ್ಟುಕೊಂಡು ಹೋಗಬೇಕು. ಸಚಿವ ಸತೀಶ್ ಜಾರಕಿಹೊಳಿ ಹಾಗೂ …
Read More »ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ದಿಢೀರ್ ರೌಂಡ್ಸ್: ರಸ್ತೆಯಲ್ಲೇ ಕಸ ಚೆಲ್ಲಿದವರಿಗೆ ಬಿತ್ತು 5 ಸಾವಿರ ದಂಡ!
ಬೆಳಗಾವಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಾರ್ಡ್ ಸಂಖ್ಯೆ 44ಕ್ಕೆ ಸ್ವತಃ ಆಯುಕ್ತರೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆಯಲ್ಲೇ ಕಸ ಸುರಿದವರಿಗೆ ಸ್ಥಳದಲ್ಲೇ ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿಯ ವಾರ್ಡ್ ಸಂಖ್ಯೆ 44ರ ಮಾರುಕಟ್ಟೆ ಪ್ರದೇಶಕ್ಕೆ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಸ ಚೆಲ್ಲಿರುವುದನ್ನು …
Read More »SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಚಿಕ್ಕೋಡಿ ಜಿಲ್ಲೆಯನ್ನು ಪ್ರಥಮ ಸ್ಥಾನ ತರಲು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡುತ್ತಿರುವ ಡಿಡಿಪಿಐ ಸೀತಾರಾಮು ಭೇಟಿ
SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಚಿಕ್ಕೋಡಿ ಜಿಲ್ಲೆಯನ್ನು ಪ್ರಥಮ ಸ್ಥಾನ ತರಲು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡುತ್ತಿರುವ ಡಿಡಿಪಿಐ ಸೀತಾರಾಮು ಭೇಟಿ • ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಚಿಕ್ಕೋಡಿ ಸಜ್ಜು • ಮನೆ ಮನೆಗೆ ಡಿಡಿಪಿಐ ಸೀತಾರಾಮು ಭೇಟಿ • 47 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷಾ ಸ್ಫೂರ್ತಿ • ರಾಜ್ಯಕ್ಕೆ ನಂಬರ್ 1 ಪಟ್ಟಕ್ಕೇರಲು ಛಲ ಮೂರು ಬಾರಿ SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಮೊದಲನೆಯ ಸ್ಥಾನ ಪಡೆದ ಚಿಕ್ಕೋಡಿಯನ್ನು ಪ್ರಸ್ತಕ ಸಾಲಿನ …
Read More »ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯದೀಶರಾದ ಸುಮಂತ
ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯದೀಶರಾದ ಸುಮಂತ ಶಿರಸಿ ತಾಲೂಕಿನ ಹೆಗಡೆಕಟ್ಟಾ ನಿವಾಸಿಯಾಗಿರುವ ಸುಮಂತ್ ಮಂಜುನಾಥ್ ನಾಯ್ಕ್ (25) ಕಿರಿಯ ವಯಸ್ಸಿನಲ್ಲಿ 2025 ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 2 ನೇ ರ‍್ಯಾಂಕ್ ಗಳಿಸಿ ನ್ಯಾಯಾದೀಶ ರಾಗಿ ಆಯ್ಕೆಯಾಗಿರುತ್ತಾರೆ. ಈ ಪ್ರತಿಭೆ ಮೂಲತಃ ಶಿರಸಿ,ಹೆಗಡೆಕಟ್ಟಾ ನಿವಾಸಿಯಾದ ಮಂಜುನಾಥ್ ನಾಯ್ಕ್ (ಸರಕಾರಿ ಅಭಿಯೋಜಕರು ಲೋಕಾಯುಕ್ತ,ಬೆಂಗಳೂರು),ಶ್ರೀಮತಿ ಸುಜಾತಾ ನಾಯ್ಕ್ (ವಕೀಲರು) ಇವರ ಪುತ್ರರಾಗಿದ್ದಾರೆ. ಪಠ್ಯೇತರ ಚಟುವಟಿಕೆಯಲ್ಲೂ ಸೈ ಎನಿಸಿಕೊಂಡಿರುವ ಸುಮಂತ ಚೆಸ್ …
Read More »
Laxmi News 24×7