ಸ್ವತಃ ಗೂಂಡಾಗಳನ್ನು ಬಿಟ್ಟು ತನ್ನ ಮೇಲೆ ತಾನೇ ಮೊಟ್ಟೆ ಎಸೆಯುವಂತೆ ಮಾಡಿರುವ ಕಾಮುಕ ಮುನಿರತ್ನ ಜನರ ಛೀಮಾರಿಯಿಂದ ತಪ್ಪಿಸಿಕೊಳ್ಳಲು ಡ್ರಾಮ ಶುರು ಮಾಡಿದ್ದಾನೆ. ದಲಿತರನ್ನು, ಒಕ್ಕಲಿಗರನ್ನು ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ಮಾತನಾಡಿರುವ ಮುನಿರತ್ನನ ಶಾಸಕ ಸ್ಥಾನವೇ ಅಡಕತ್ತರಿಯಲ್ಲಿದೆ. ಮುನಿರತ್ನ, ಸಿ.ಟಿ.ರವಿಯಂತವರಿಗೆ ಬಿಜೆಪಿ ಬೆಂಬಲಿಸುತ್ತಿದೆ ಎನ್ನುವುದೇ ಅದರ ನಿಜಬಣ್ಣ ಬಯಲುಗೊಳಿಸಿದೆ. ಸ್ತ್ರೀಪೀಡಕರು, ಜಾತಿ ನಿಂದಕರೆಲ್ಲ ಬಿಜೆಪಿಗೆ ಪ್ರಿಯವಾಗುವುದು ಯಾಕೆ? ಶೇ.80ರಷ್ಟು ಸ್ತ್ರೀಪೀಡಕರು, ನಿಂದಕರು, ಅತ್ಯಾಚಾರಿಗಳು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಯಡಿಯೂರಪ್ಪನವರೇ ಪೋಕ್ಸೋ …
Read More »ವಿಸ್ತಾರ ನ್ಯೂಸ್ ಬೆಳಗಾವಿ ಜಿಲ್ಲಾ ವರದಿಗಾರ ಮಂಜುನಾಥ ಹುಡೇದರವರ ಸಹೋದರ, ಇಂಡಸ್ ಇಂಡ್ ಬ್ಯಾಂಕ್ ಉದ್ಯೋಗಿ ಪ್ರಮೋದ ಅಶೋಕ ಹುಡೇದ ನಿಧನ
ಬೆಳಗಾವಿ : ವಿಸ್ತಾರ ನ್ಯೂಸ್ ಬೆಳಗಾವಿ ಜಿಲ್ಲಾ ವರದಿಗಾರ ಮಂಜುನಾಥ ಹುಡೇದರವರ ಸಹೋದರ, ಇಂಡಸ್ ಇಂಡ್ ಬ್ಯಾಂಕ್ ಉದ್ಯೋಗಿ ಪ್ರಮೋದ ಅಶೋಕ ಹುಡೇದ ಅವರ ಅಕಾಲಿಕ ನಿಧನ ಪ್ರಮೋದ ಹುಡೇದ ಬುಧವಾರ ಬೆಳಗ್ಗೆ ತಮ್ಮ 26 ನೇ ವಯಸ್ಸಿನಲ್ಲಿ ನಿಪ್ಪಾಣಿಯಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ, ತಂದೆ, ತಾಯಿ, ಸಹೋದರರು, ಪತ್ನಿ ಮತ್ತು ಒಂದು ವರ್ಷದ ಚಿಕ್ಕ ಮಗುವನ್ನು ಬಿಟ್ಟು ಅವರು …
Read More »1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮ
ಬೆಳಗಾವಿ ಡಿ.25 : ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪ್ರವಾಸೊದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು. ಬೆಳಗಾವಿ ಸುವರ್ಣ ಸೌಧ ಆವರಣದಲ್ಲಿ ಬುಧವಾರ (ಡಿ.25) ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಮಹಾತ್ಮಾ …
Read More »ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಹಬ್ಬದ ವಾತಾವರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!
ಬೆಳಗಾವಿ : 100 ವರ್ಷದ ಇತಿಹಾಸವನ್ನ ಮರುಕಳಿಸುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಇಡೀ ಬೆಳಗಾವಿ ನಗರ ಸಜ್ಜಾಗಿದೆ. ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಹಬ್ಬದ ಮಾದರಿಯಲ್ಲಿ ಬೆಳಗಾವಿ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು. 1924ರಲ್ಲಿ ಗಾಂಧೀಜಿ ಅವರ …
Read More »ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ ವಂಚನೆ
ಮಂಗಳೂರು, ಡಿಸೆಂಬರ್ 25: ನಕಲಿ ಚಿನ್ನ (fake gold) ಅಡವಿಟ್ಟು ವ್ಯಕ್ತಿ ಓರ್ವ ರೂ. 2 ಕೋಟಿಗೂ ಅಧಿಕ ಸಾಲವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿತ್ತು. ಆದರೆ, ಬ್ಯಾಂಕ್ನ ಪ್ರಧಾನ ಕಚೇರಿಯಿಂದ ಪ್ರಕರಣದ ಕುರಿತಾಗಿ ಸಮಜಾಯಿಷಿ ಸಂದೇಶ ನೀಡಿದ್ದು, ಸಮಾಜ ಸೇವಾ ಸಹಕಾರಿ ಸಂಘವು ಉತ್ತಮ ಲಾಭದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದನ್ನು ಸಹಿಸಲಾಗದ ಕೆಲವರು ಸಂಘ, ಸಂಘದ ಆಡಳಿತ ಮಂಡಳಿಯ ವಿರುದ್ಧ ಇಲ್ಲಸಲ್ಲದ …
Read More »ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ* ಅವರ ಅನುದಾನದಲ್ಲಿ30 ಲಕ್ಷ ವೆಚ್ಚದ ಎರಡು ನೂತನ ಶಾಲಾ ಕೂಠಡಿಗಳ ಉದ್ಘಾಟನೆ
ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ* ಅವರ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ *ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ* ಅವರು ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸೂನಟ್ಪಿ ಗ್ರಾಮದ 30 ಲಕ್ಷ ವೆಚ್ಚದ ಎರಡು ನೂತನ ಶಾಲಾ ಕೂಠಡಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಈ ಸಂದರ್ಭದಲ್ಲಿ …
Read More »ಮಹಾಸನ್ನಿದಿ ಅವರಿಂದ ಎಸ್ .ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ. ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ SSC ಕಮಿಟಿ ವತಿಯಿಂದ ಮತ್ತು ಐದನೇ ಬಾರಿಗೆ ಸಾವಳಗಿ ಪ್ರಿಮಿಯರ್ ಲೀಗ್ (SPL) ಕ್ರೀಡಾ ಪಂದ್ಯಾವಳಿ
ಮಹಾಸನ್ನಿದಿ ಅವರಿಂದ ಎಸ್ .ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ. ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ SSC ಕಮಿಟಿ ವತಿಯಿಂದ ಮತ್ತು ಐದನೇ ಬಾರಿಗೆ ಸಾವಳಗಿ ಪ್ರಿಮಿಯರ್ ಲೀಗ್ (SPL) ಕ್ರೀಡಾ ಪಂದ್ಯಾವಳಿಗೆ ಶ್ರೀ ಮನ್ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಅವರಿಂದ ಚಾಲನೆ ನೀಡಿ ನಂತರ ಅವರು ಮಾತನಾಡಿ, ಕ್ರೀಡೆ ಎನ್ನುವುದು ಸರ್ವಧರ್ಮ ಸಹಬಾಳ್ವೆಗೆ ಪೂರಕವಾಗಿದೆ ಕ್ರೀಡೆಯಿಂದ ದೇಶ ಹಾಗೂ ರಾಜ್ಯಗಳ ನಡುವೆ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು …
Read More »ನೀರಿನ ಕರೆಂಟ್ ಮೋಟರ(ಪಂಪಸೆಟ್) ಕಳ್ಳರ ಬಂಧನ, 5,60,000/-ರೂಪಾಯಿ ಕಿಮ್ಮತ್ತಿನ ವಸ್ತುಗಳ ವಶಕ್ಕೆ!
ಗೋಕಾಕ : ತಾಲೂಕಿನ ದುಂಡಾನಟ್ಟಿ ಗ್ರಾಮದ ಹಳ್ಳದ ದಂಡೆಯಲ್ಲಿ ಕಳ್ಳತನವಾಗಿದ್ದ ನೀರಿನ ಕರೆಂಟ್ ಮೋಟರ್ ಗಳನ್ನು ಪತ್ತೆ ಹಚ್ಚಿ, ಕಳ್ಳರನ ಬಂಧಿಸಲಾಗಿದೆ. ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ದುಂಡಾನಟ್ಟಿ ಹಳ್ಳದ ದಂಡೆಯಲ್ಲಿ ಕೂಡ್ರಿಸಿದ ಒಟ್ಟು 86500/- ರೂ. ಕಿಮ್ಮತ್ತಿನ ಮೋನೊಬ್ಲಾಕ ಸಿಆರ್ಐ ಕಂಪನಿಯ 5 ಎಚ್ಪಿ ಎರಡು ಕರೆಂಟ್ ಮೋಟರ & 10 ಎಚ್.ಪಿ ಒಂದು ಕರೆಂಟ್ ಮೋಟರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪ್ರಕರಣ ದಾಖಲಾಗಿರುತ್ತದೆ. ಸದರಿ …
Read More »ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ
26&27 December all School Of Belagavi city and Rural Taluka Holidays. ಗಾಂಧಿ ಭಾರತ ಕಾರ್ಯಕ್ರಮ: ಬೆಳಗಾವಿ ತಾಲ್ಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಬೆಳಗಾವಿ ನಗರ ಮತ್ತು ಗ್ರಾಮೀಣ ಯೋಜನೆಯ ಅಂಗನವಾಡಿ ಕೇಂದ್ರಗಳಿಗೂ ರಜೆ.
Read More »ಆ” ಪದ ಬಳಸಿಲ್ಲವೆಂದರೇ ಧರ್ಮಸ್ಥಳಕ್ಕೆ ಬಂದು “ಆಣೆ ಪ್ರಮಾಣ” ಮಾಡಿ… ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಿ.ಟಿ. ರವಿಗೆ ಸವಾಲ್…!!!??
ನೀವು “ಆ” ಪದ ಬಳಸಿಲ್ಲವೇ??? ನಿಮಗೆ ನೈತಿಕತೆ ಇದ್ರೇ ಧರ್ಮಸ್ಥಳಕ್ಕೆ ಬನ್ನಿ “ಆಣೆ ಪ್ರಮಾಣ” ಮಾಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಿ.ಟಿ. ರವಿಗೆ ಸವಾಲ್…!!!?? ಆ ಪದವನ್ನ ಬಳಸೇ ಇಲ್ಲ ಎಂದು ಸಿ.ಟಿ. ರವಿ ಅವರು ಜನರ ಕಣ್ಣಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನಿಮಗೆ ನೈತಿಕತೆ ಇದ್ರೇ ನೀವು ಸಹಕುಟುಂಬ ಬಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ಮೇಲೆ ಆಣೆ ಪ್ರಮಾಣ …
Read More »