Breaking News

Uncategorized

ಘಟಪ್ರಭಾ : ಬೈಕ್ ಕಳುವು ಆರೋಪಿ ಅರೆಸ್ಟ್

ಘಟಪ್ರಭಾ: ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಆರೋಪಿಯೊಬ್ಬನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.   ಇಷ್ಟಕ್ಕೂ ಈತನ ಬಳಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರಿ ಒಂದೆರಡು ಬೈಕ್ ಗಳಲ್ಲ. ಬರೊಬ್ಬರಿ 11 ಬೈಕ್ ಗಳು !   ಪೊಲೀಸರು ಈತನನ್ನು ವಿಚಾರಣೆಗೆ ಗುರಿಪಡಿಸಿದ್ದು ಘಟಪ್ರಭಾ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read More »

ಫಾಜಿಲ್ ಹತ್ಯೆಗೆ ನೇರ ಹೊಣೆ ಸಿಎಂ ಬೊಮ್ಮಾಯಿ: ಮುನೀರ್ ಕಾಟಿಪಳ್ಳ

ಮಂಗಳೂರು: ಮುಖ್ಯಮಂತ್ರಿ ಭೇಟಿಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ನೇರ ಹೊಣೆ ಮುಖ್ಯಮಂತ್ರಿ ಬೊಮ್ಮಾಯಿ. ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಭೇಟಿಯ ಸಂದರ್ಭ ತೋರಿದ ಸಾರ್ವಜನಿಕ‌ ಹೊಣೆಗೇಡಿತನವೇ ಕೊಲೆಗಡುಕರಿಗೆ ಧೈರ್ಯ ನೀಡಿದೆ‌ ಎಂದು ಡಿವೈಎಫ್‌ಐ ರಾಜ್ತ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.   ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಸರಣಿ ಕೊಲೆಗಳಿಗೆ ಬೊಮ್ಮಾಯಿ ಸರ್ಕಾರವೇ ಕಾರಣ. ನಿರ್ಲಜ್ಜ ಕೋಮುವಾದಿ ಆಡಳಿತದ ಕರ್ನಾಟಕ ಮಾದರಿಯೊಂದನ್ನು ಬೊಮ್ಮಾಯಿ ನಿರ್ಮಿಸಿ ಬಿಟ್ಟರು. ಅವರಿಗೆ …

Read More »

ಯಕ್ಸಂಬಾ ಪಟ್ಟಣದ ಜನರ ಅನುಕೂಲಕ್ಕಾಗಿ ಉಚಿತ ಆ್ಯಂಬುಲೆನ್ಸ್ ಸೇವೆ ಬಸವಪ್ರಸಾದ

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ವಿಶೇಷ ಪ್ರಯತ್ನದಿಂದ ೨೦೧೯ – ೨೦ ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ೧೬.೫೦ ಲಕ್ಷ ರೂ ಮೊತ್ತದಲ್ಲಿ ಸುಸಜ್ಜಿತವಾದ ಜನರ ಹಿತಕ್ಕಾಗಿ ಉಚಿತ ಆಂಬುಲೆನ್ಸ್ ಸೇವೆಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಚಾಲನೆಯನ್ನು ನೀಡಿದರು. ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಮಾತನಾಡಿ, ಚಿಕ್ಕೋಡಿ …

Read More »

ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಇಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‍ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ 30 ಆರೋಪಿಗಳ ವಿರುದ್ಧ ಈ ದೋಷಾರೋಪ ಪಟ್ಟಿಯಲ್ಲಿ ಮಾಹಿತಿ ಇದೆ. ಇದು ಒಟ್ಟು 3,065 ಪುಟಗಳನ್ನು ಒಳಗೊಂಡಿದೆ. 202 ಸಾಕ್ಷ್ಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ಈ ದೋಷಾರೋಪ ಪಟ್ಟಿಯಲ್ಲಿ ಎಡಿಜಿಪಿ ಅಮೃತ್‍ಪೌಲ್ ಹೇಳಿಕೆ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಮುಂದಿನ ಚಾರ್ಜ್‍ಶೀಟ್‍ನಲ್ಲಿ …

Read More »

ಪ್ರವೀಣ್ ನೆಟ್ಟಾರು ಹತ್ಯೆ: 15ಕ್ಕೂ ಹೆಚ್ಚು ಜನರು ವಶಕ್ಕೆ, 6 ಪೊಲೀಸ್‌ ತಂಡಗಳಿಂದ ತನಿಖೆ

ಸುಳ್ಯ: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ಮೇಲ್ನೋಟಕ್ಕೆ ಹತ್ಯೆಗೆ 2-3 ಕಾರಣಗಳು ಕಂಡುಬರುತ್ತಿದೆ. ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಬೆಳ್ಳಾರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ಕಮಿಷನರ್, ಉಡುಪಿ ಪೊಲೀಸರ ಸಹಾಯ ಪಡೆದು ಈಗಾಗಲೇ ಆರು ತಂಡಗಳನ್ನು ರಚಿಸಿದ್ದೇವೆ. …

Read More »

ಪ್ರವೀಣ್ ಅಂತಿಮ ಯಾತ್ರೆ : ಸಚಿವರು, ಬಿಜೆಪಿ ನಾಯಕರ ವಿರುದ್ಧವೇ ಆಕ್ರೋಶ

ಪುತ್ತೂರು: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್‌ ನೆಟ್ಟಾರು ಅವರ ಅಂತಿಮ ಯಾತ್ರೆ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಚಿವರು ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿ ಧಿಕ್ಕಾರ ಕೂಗಿದ ಘಟನೆ ನಡೆದಿದೆ.   ಬೆಳ್ಳಾರೆಯಲ್ಲಿ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಈ ವೇಳೆ ಆಗಮಿಸಿದ ಸಚಿವರಾದ ಸುನಿಲ್ ಕುಮಾರ್ , ಎಸ್ . ಆಂಗಾರ , ಬಿಜೆಪಿ ರಾಜ್ಯಾಧ್ಯಕ್ಷ …

Read More »

ಬೆಳಗಾವಿಯಲ್ಲಿ ಉದ್ಧವ್ ಠಾಕ್ರೆ ಅವರ ಹುಟ್ಟು ಹಬ್ಬ ಆಚರಣೆ

ಬೆಳಗಾವಿಯ ಶಿವಸೇನಾ ವತಿಯಿಂದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಜನುಮ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಗಾವಿಯ ಟಿಳಕ ಚೌಕ್‍ನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹುಟ್ಟು ಹಬ್ಬವನ್ನು ಸ್ಥಳೀಯ ಹಿರಿಯ ನಾಗರಿಕ ಮಹಾದೇವ ಅವರ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿ, ಉದ್ಧವ್ ಠಾಕ್ರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಬೆಳಗಾವಿಯ ಶಿವಸೇನಾ …

Read More »

ಅತ್ಯಾಚಾರ ಬೆದರಿಕೆ ಪ್ರಕರಣ ದಾಖಲಿಸಿದ ರಾಜಕುಮಾರ್ ವಿರುದ್ಧ 10 ಕೇಸು ಹಾಕಿದ ಯುವತಿ

ಬೆಳಗಾವಿ: ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ, ಚನ್ನಪಟ್ಟಣ ಮೂಲದ ಯುವತಿ ಸೋಮವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ಇಲ್ಲಿನ ಎಪಿಎಂಸಿ ಪೊಲೀಸ್‌ ಠಾಣೆಗೆ ಹಾಜರಾದ ಯುವತಿಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು.   ‘ರಾಜಕುಮಾರ ನನ್ನನ್ನು ಯಾಮಾರಿಸಿ ಮದುವೆಯಾಗಿದ್ದಾರೆ. ಆದರೆ, ಈಗ ನನ್ನ ವಿರುದ್ಧವೇ ‘ಸುಳ್ಳು ಅತ್ಯಾಚಾರದ ಬೆದರಿಕೆ ಹಾಗೂ ಹಣ ಕೇಳುತ್ತಿದ್ದೇನೆ’ …

Read More »

HEALTH TIP ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ ಈ ವಸ್ತುಗಳು

ಹಲ್ಲಿನ ಸಮಸ್ಯೆಗಳಿಗೆ ಮನೆಮದ್ದು: ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದು. ಸಾಮಾನ್ಯವಾಗಿ ಅತಿಯಾದ ಸಿಹಿ ಪದಾರ್ಥಗಳ ಸೇವನೆ, ಚಾಕೊಲೇಟ್ ಸೇವನೆಯಿಂದ ಹಲ್ಲುಗಳಲ್ಲಿ ಹುಳುಕು ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಕಾರಣ ಏನೇ ಇರಲಿ ಹಲ್ಲಿನ ಸಮಸ್ಯೆಗಳಿಗೆ ಮನೆಯಲ್ಲಿ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿ ಪರಿಹಾರ ಪಡೆಯಬಹುದು. ಇಂದು ಅಂತಹ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ …

Read More »

ಜಮೀರ್ ಅಹ್ಮದ್‍ಖಾನ್ ಸಿಎಂ ಆಗ್ತಾರೆ – ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳಿಂದ ಭವಿಷ್ಯ

ಬೆಳಗಾವಿ: ಜಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಮುಂಬರುವ ದಿನಗಳಲ್ಲಿ ಸಿಎಂ ಆಗುತ್ತಾರೆ ಎಂದು ಶ್ರೀ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿದ್ದು, ಶಂಕರ ಪಾಟೀಲ್ ಅವರಿಂದ ದರ್ಗಾ ಅಭಿವೃದ್ಧಿಯಾಗಿದೆ. ಬೆಂಗಳೂರಿನಿಂದ ದರ್ಗಾಕ್ಕೆ …

Read More »