ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪೊಲೀಸ್ ಬೆಂಗಾವಲು ವಾಹನದ ಚಾಲಕ (ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ) ಶರಣಪ್ಪ (33) ಅವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಬಾಪೂಜಿನಗರದ ಬಾಡಿಗೆ ಮನೆಯಲ್ಲಿ ಶರಣಪ್ಪ ಅವರು ಪತ್ನಿ ಶೈಲಶ್ರೀ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ನೆಲೆಸಿದ್ದರು. ಶೈಲಶ್ರೀ ಅವರು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. …
Read More »ಮಳೆಯಿಂದ ಬೆಳೆ ಹಾನಿ ಹಿನ್ನೆಲೆ ಇವತ್ತೇ ಪರಿಹಾರದ ಡಿಡಿ ಜೊತೆ ಚರ್ಚೆ:ರಾಜು ಕಾಗೆ
ಚಿಕ್ಕೋಡಿ : ಮಳೆಯಿಂದ ಬೆಳೆ ಹಾನಿ ಹಿನ್ನೆಲೆ. ಬೆಳಗಾವಿ, ಕಲಬುರ್ಗಿ,ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬಿಜೆಪಿ ನೀಯೋಗ ಭೇಟಿ. ಸರ್ಕಾರ ರೈತರ ಸಮಸ್ಯೆ ಸ್ಪಂದಿಸುತ್ತಿಲ್ಲ.ಎಂಬ ಆರ್ ಅಶೋಕ ಹೇಳಿಕೆ ವಿಚಾರ. ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ. ವಿರೋಧಪಕ್ಷದವರು ನಮ್ಮನ್ನ ಎಚ್ಚರಿಸುವ ಕೆಲಸ ಮಾಡುತ್ತಿರಾರೆ. ವೀಕ್ಷಣೆ ಬಂದು ಚಾ ಚೋಡಾ ತಿಂದು ಹೋಗಬೇಕಾ ಏನಾದ್ರೂ ಒಂದು ಹೇಳಿಕೆಯನ್ನು ನೀಡಿರುತ್ತಾರೆ. ಇವತ್ತೇ ಪರಿಹಾರದ ಡಿಡಿ ಜೊತೆ ಚರ್ಚೆ ನಡೆಸಲಾಗಿದೆ. ಪರಿಹಾರನ್ನ ಆದೆಷ್ಟು ಬೇಗ …
Read More »ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ…
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ… – ಸಾಂಗ್ಲಿ ಜಿಲ್ಲೆಯ ಮೀರಜ್‌ನ 16 ವರ್ಷದ ಬಾಲಕನೊಬ್ಬ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದ. ಈ ಘಟನೆಯಿಂದಾಗಿ ಮಿರಜ್‌ನ ಶಾಸ್ತ್ರಿ ಚೌಕ್‌ನಲ್ಲಿ ಜನಸಮೂಹ ಜಮಾಯಿಸಿತು. ಇದರ ಮದ್ಯ ರಾಜಕೀಯ ನಾಯಕರ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ಭಾವನೆಗಳಿಗೆ ಧಕ್ಕೆ ತಂದ ಹುಡುಗನ ಮನೆಗೆ ಕೆಲವರು ಮೆರವಣಿಗೆ ನಡೆಸಿದ್ದರು. ಪೊಲೀಸರು ಗುಂಪುಗರ್ಷಣೆ ಚದುರಿಸಲು ಧಾವಿಸಿದರು ಮತ್ತು ಸಮುದಾಯವು …
Read More »ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಇನ್ನೂ ಸಿಕ್ಕಿಲ್ಲ ಬದಲಿ ನಿವೇಶನ
ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಪಾಡು ಹೇಳತೀರದಾಗಿದೆ. ಭೂಮಿ ನೀಡಿದ ರೈತರಿಗೆ ಹಣ ನೀಡಿ, ಕುಟುಂಬಕ್ಕೊಂದು ನಿವೇಶನ ನೀಡುವ ಕುರಿತು ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ ಕಾಮಗಾರಿ ಮುಕ್ತಾಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ, ಎರಡು ವರ್ಷವಾದರೂ ಕೆಹೆಚ್ಬಿಯಿಂದ ರೈತರಿಗೆ ಒಂದು ನಿವೇಶನವೂ ಸಿಕ್ಕಿಲ್ಲ. ಜಿಲ್ಲಾಡಳಿತ ನಿವೇಶನ ನೀಡದೇ ಹೋದಾಗ ರೈತರು ವಿಮಾನ ನಿಲ್ದಾಣದ ಉದ್ಘಾಟನೆಗೂ ಮುನ್ನ ಧರಣಿ ಕೈಗೊಂಡಿದ್ದರು. ಇದರಿಂದ ಎಚ್ಚೆತ್ತ ಅಂದಿನ …
Read More »ಬಿಗ್ಬಾಸ್ ಸ್ಪರ್ಧಾಳುಗಳು ಈಗಲ್ ಟನ್ ರೆಸಾರ್ಟ್ಗೆ
ರಾಮನಗರ: ಬಿಗ್ಬಾಸ್ ಕನ್ನಡ ಸೀಸನ್ – 12ರ ಶೋ ಆರಂಭವಾದ ಎರಡೇ ವಾರದಲ್ಲಿ ದೊಡ್ಡನೆಗೆ ಬೀಗ ಮುದ್ರೆ ಬಿದ್ದಿದೆ. ಬಿಗ್ಬಾಸ್ ಸ್ಪರ್ಧಾಳನ್ನು ಈಗಲ್ ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಬಿಗ್ ಬಾಸ್ ಮನೆಯಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆರೋಪದಡಿ ಬಿಡದಿಯ ಬಳಿಯ ಜಾಲಿವುಡ್ ಸ್ಟುಡಿಯೋ & ಅಡ್ವೆಂಚರ್ಸ್ ಪಾರ್ಕ್ ಬಂದ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ನಿತ್ಯ ಜಲಕ್ರೀಡೆಗೆ 2.50 ಲಕ್ಷ ಲೀಟರ್ ನೀರು …
Read More »ಬೆಳಗಾವಿಯಲ್ಲಿ ಕಲ್ಲು ತೂರಾಟ ಘಟನೆಗೆ ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯ ಕಾರಣ: ಬಸವರಾಜ ಬೊಮ್ಮಾಯಿ
ಹಾವೇರಿ: ಬೆಳಗಾವಿಯಲ್ಲಿ ಕಲ್ಲು ತೂರಾಟ ಘಟನೆಗೆ ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ, ಹಿಂಸೆ ಮಾಡಬೇಕು ಅನ್ನೋದು ಒಂದು ವರ್ಗದ ಹುನ್ನಾರ. ಅದಕ್ಕೆ ಕೆಲವು ಶಕ್ತಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು. ಉತ್ತರಪ್ರದೇಶ ರಾಜ್ಯದಲ್ಲಿ ಈ ರೀತಿ ಇತ್ತು. ದಾವಣಗೆರೆ ಘಟನೆ ನಡೆದ ನಂತರ ಕರ್ನಾಟಕದಲ್ಲಿ ನಿಯಂತ್ರಣ ಮಾಡಬೇಕು ಅನ್ನೋ …
Read More »ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನಿರ್ಮಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಉಪಕರಣಗಳನ್ನು, ಜೊತೆಗೆ ಬೆಳಗಾವಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಿಸಲಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಹಿರೇಬಾಗೇವಾಡಿ ಹೊಸ ಆವರಣದಲ್ಲಿ …
Read More »ಶಿರೋಡಾ ಸಮುದ್ರ ಕಡಲ ಕಿನಾರೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಲೋಂಡಾ ಗ್ರಾಮದ ಕುಟುಂಬವೊಂದರ ಎಂಟು ಜನ ನೀರು ಪಾಲ
ಪಕ್ಕದ ಮಹಾರಾಷ್ಟ್ರದ ಶಿರೋಡಾ ಸಮುದ್ರ ಕಡಲ ಕಿನಾರೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಲೋಂಡಾ ಗ್ರಾಮದ ಕುಟುಂಬವೊಂದರ ಎಂಟು ಜನ ನೀರು ಪಾಲಾದ ಘಟನೆ ನಡೆದಿದೆ. ದಸರಾ ರಜೆಗೆಂದು 8 ಜನರ ತಂಡ ಪ್ರವಾಸಕ್ಕೆ ತೆರಳಿತ್ತು ಎಂಟು ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಈಗಾಗಲೇ ಮೂವರು ಶವವಾಗಿ ಪತ್ತೆಯಾಗಿದ್ದರೆ, ಓರ್ವ ಮಹಿಳೆ ಸಾವಿನ ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಫರಿನ್ ಇರ್ಫಾನ್ ಕಿತ್ತೂರ (34), ಇಬಾದ್ ಕಿತ್ತೂರ (13) ಅಳ್ನಾವರ …
Read More »ಬೆಳಗಾವಿಗೆ ಸಿಎಂ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ: ಆರ್. ಅಶೋಕ್ ಲೇವಡಿ
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಬರುವ ಮುನ್ನಾ ದಿನವೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜಿಲ್ಲೆಯ ವಿವಿಧ ಕಡೆ ಬೆಳೆ ಹಾನಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ, ರೈತರ ಸಮಸ್ಯೆ ಆಲಿಸಿದ ಅವರು, ರೈತರ ಸಂಕಷ್ಟ ಆಲಿಸಲು ಬಾರದೇಬೆಳಗಾವಿಗೆ ಬಿರಿಯಾನಿ ತಿನ್ನಲು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಆರೋಪಿಸಿದರು. ಬೈಲಹೊಂಗಲ ತಾಲೂಕಿನ ನೇಸರಗಿ, ನಾಗನೂರ ಮತ್ತು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ರೈತರ ಜಮೀನುಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ …
Read More »ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ
ಶಿವಮೊಗ್ಗ: ಮಗಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್ನಲ್ಲಿ ನಡೆದಿದೆ. ಮೆಗ್ಗಾನ್ ಬೋಧನಾಸ್ಪತ್ರೆಯ ಲ್ಯಾಬ್ನ ಟೆಕ್ನಿಷಿಯನ್ ರಾಮಣ್ಣ ಎಂಬವರ ಪತ್ನಿ ಶೃತಿ(38) ತನ್ನ 11 ವರ್ಷದ ಮಗಳು ಪೂರ್ವಿಕಾಳ ತಲೆಗೆ ಹಲ್ಲೆ ಮಾಡಿ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪತಿ ರಾಮಣ್ಣ ಕಳೆದ ರಾತ್ರಿ ನೈಟ್ ಡ್ಯೂಟಿಗೆಂದು ಆಸ್ಪತ್ರೆ ಹೋಗಿದ್ದರು. ಡ್ಯೂಟಿ ಮುಗಿಸಿಕೊಂಡು ಬಂದಾಗ ಮನೆಯ ಬಾಗಿಲು ತೆಗೆಯದೇ ಇದ್ದುದರಿಂದ ಹಿಂಬಾಗಿಲು ಒಡೆದು ಒಳಗೆ …
Read More »