Breaking News

Uncategorized

ಹುಕ್ಕೇರಿ, ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಇಲ್ಲ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿಲ್ಲ. ವಿಧಾನಸಭಾ ಚುನಾವಣೆಗೆ ಏಳು ತಿಂಗಳುಗಳು ಬಾಕಿ ಇರುವುದರಿಂದ ಉಪಚುನಾವಣೆ ಘೋಷಣೆ ಮಾಡಿಲ್ಲ ಎಂದು ಹೇಳಲಾಗಿದೆ.   ಬೆಂಗಳೂರು : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ. ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ” ಸಾರ್ವತ್ರಿಕ …

Read More »

ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಿ

ಬೆಳಗಾವಿ : ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಸೈಕಲ್‌ ರ್‍ಯಾಲಿ ನಡೆಸಿದ ಸಾರಿಗೆ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೂಟದ ಅಧ್ಯಕ್ಷ ಆರ್‌. …

Read More »

ಹವಾಮಾನ ಪ್ರತಿಕೂಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

ನವದೆಹಲಿ: ರಾಷ್ಟ್ರದ ರಾಜಧಾನಿಯ ಹವಾಮಾನ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಗಾಳಿಯ ಗುಣಮಟ್ಟ ಅಪಾಯಕಾರಿ ಹಂತ ತಲುಪಿರುವ ಹಿನ್ನೆಲೆಯಲ್ಲಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪ್ರಸ್ತುತ ದೆಹಲಿಯ ಹವಾಮಾನ ಸಿಗರೇಟ್ ಹೊಗೆಗಿಂತ ಮಾರಕವಾಗಿದೆ ಎಂದು ಏಮ್ಸ್ ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ತಂಬಾಕಿನ ಹೊಗೆಯಷ್ಟೇ ಅಪಾಯಕಾರಿಯಾಗಿರುವ ಈ ಹವೆ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ವಿಶ್ವದ ಅತ್ಯಂತ ಮಾಲಿನ್ಯ …

Read More »

1.89 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಕಾಮಗಾರಿಗೆ ಗುದ್ದಲಿ ಪೂಜೆ ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ನಾಗನೂರ ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಾಗನೂರ ಪಟ್ಟಣದ ಹೊರವಲಯದ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು 1.89 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ(ಹಂತ-4)ಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.   ನಾಗನೂರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಕಷ್ಟು …

Read More »

ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಪ್ರಭಾಕರ ಕೋರೆ

ಚಿಕ್ಕೋಡಿ(ನ.05): ಅಖಂಡ ಕರ್ನಾಟಕವಾಗಬೇಕೆಂದು ಕನಸು ಕಂಡವರು ಉತ್ತರ ಕರ್ನಾಟಕದ ಜನ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕ ಹೆಚ್ಚು ಅನ್ಯಾಯಕ್ಕೆ ಒಳಗಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಅವರು ಬುಧವಾರ ತಾಲೂಕಿನ ಚಿಂಚಣಿ ಗ್ರಾಮದ ಗಡಿ ಕನ್ನಡಿಗರ ಬಳಗದಿಂದ ಶ್ರೀಅಲ್ಲಮಪ್ರಭು ಸಿದ್ದಸಂಸ್ಥಾನಮಠದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡರತ್ನ ಡಾ.ಪ್ರಭಾಕರ ಕೋರೆ ಹಾಗೂ ನನ್ನ ಸಂಗೀತ ವ್ಯಾಸಂಗ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, …

Read More »

ರಿಷಬ್ – ರಜನಿಕಾಂತ್ ಭೇಟಿಯಾದಾಗ ‘ಕಾಂತಾರ’ ಬಗ್ಗೆ ಚರ್ಚಿಸಿದ್ದು ಕನ್ನಡದಲ್ಲಾ, ತಮಿಳಿನಲ್ಲಾ?

ಕಾಂತಾರ ಸದ್ಯ ವಿಶ್ವದಾದ್ಯಂತ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಈ ಚಿತ್ರ ಈ ಪರಿ ಗೆಲ್ಲಲಿದೆ ಎಂದು ಯಾರೂ ಊಹಿಸಿರಲಿಲ್ಲ. ಸ್ವತಃ ಕಾಂತಾರ ಚಿತ್ರತಂಡ ಕೂಡ ಈ ಚಿತ್ರ ಇಷ್ಟರ ಮಟ್ಟಿಗೆ ಚಿತ್ರ ಜನರಿಗೆ ಇಷ್ಟವಾಗಲಿದೆ ಎಂದು ಊಹಿಸಿರಲಿಲ್ಲ. ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಬೇಕು ಎಂಬ ಕೂಗು ಹೆಚ್ಚಾದ ಬಳಿಕ ಹೊಂಬಾಳೆ ಫಿಲ್ಮ್ಸ್ …

Read More »

ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ‌ ವಿದ್ಯಾರ್ಥಿಗಳ ಕಾರುಬಾರು, ತನಿಖೆಗೆ ಆದೇಶ: ನೂರಾರು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ!

ಪದವಿಗೆ ದಾಖಲಾಗಲು‌ ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಎಸ್​ಎಸ್​ಎಲ್‌ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲನೆ ವೇಳೆ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ. ಕೋಲಾರ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ನಕಲಿ ವಿದ್ಯಾರ್ಥಿಗಳ ಕಾರುಬಾರು ಹೆಚ್ಚಾಗಿದೆ. ಆ ಮೂಲಕ ನಕಲಿ ಜಾಲವೊಂದು ಉತ್ತರ ವಿಶ್ವವಿದ್ಯಾಲಯದಲ್ಲಿ ಬೇರೂರಿದೆಯಾ ಅನ್ನೋ ಅನುಮಾನ ಇದೀಗ ಮೂಡಿದೆ. ನಕಲಿ ಅಂಕಪಟ್ಟಿಗಳನ್ನ ನೀಡಿ ಮೊದಲ ವರ್ಷದ ಪದವಿ ತರಗತಿಗಳಿಗೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ನಕಲಿ ಆಟ …

Read More »

ಅರಣ್ಯ ಇಲಾಖೆ ಕಾರ್ಯಾಚರಣೆ: ಸೆರೆಸಿಕ್ಕ ಕತ್ತೆ ಕಿರುಬ

ಚಿಕ್ಕೋಡಿ: ಇಂದು ಬೆಳಿಗ್ಗೆ 07 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿ‌ ಪಟ್ಟಣದ ಹೊರವಲಯದಲ್ಲಿ ಇರುವ ಶಿವಯೋಗಿ‌ ನಗರದ, ಕುಮಠಳ್ಳಿ ಫಾರ್ಮಹೌಸ್ ನಲ್ಲಿ ಕತ್ತೆ ಕಿರುಬ ಒಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿತ್ತು, ಕತ್ತೆ ಕಿರುಬವನ್ನ ದೂರದಿಂದ ನೋಡಿದ ಸಾರ್ವಜನಿಕರು ಚಿರತೆ ಬಂದಿದೆ ಎಂದು ವದಂತಿ ಹಬ್ಬಿಸಿದ್ದು, ಅಥಣಿ ಪ್ರಾದೇಶಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಿಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾದರು. ಬೆಳಗಾವಿಯಲ್ಲಿ ಚಿರತೆ ಕಾರ್ಯಾಚರಣೆ ವಿಫಲಗೊಳ್ಳುತ್ತಿದ್ದಂತೆ …

Read More »

ಪೊಲೀಸರ ಹಿತಕಾಯಲು ಬದ್ಧ: ಅಲೋಕ್‌ ಕುಮಾರ್

ಶಿವಮೊಗ್ಗ: ‘ಪೊಲೀಸ್ ಸಿಬ್ಬಂದಿ ಆರೋಗ್ಯವಾಗಿದ್ದರೆ ಮತ್ತು ಮನೆಯಲ್ಲಿ ನೆಮ್ಮದಿ ಇದ್ದರೆ ಇಲಾಖೆ ಸಶಕ್ತವಾಗಿರುತ್ತದೆ. ಆಗ ಸಾರ್ವಜನಿಕರಿಗೂ ಒಳ್ಳೆಯ ಸೇವೆ ಸಿಗಲಿದೆ. ಹೀಗಾಗಿ ಸಿಬ್ಬಂದಿಯ ಹಿತ ಕಾಯಲು ಇಲಾಖೆ ಬದ್ಧವಾಗಿದೆ’ ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಇಲ್ಲಿನ ಡಿಎಆರ್ ಮೈದಾನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರ ಜೊತೆ ಸಭೆ ನಡೆಸಿ ಅವರ ಯೋಗಕ್ಷೇಮ ಆಲಿಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   ‘ಪೊಲೀಸರು ಕರ್ತವ್ಯದ ಮೇಲೆ ಹಲವು …

Read More »

ಶಾಸಕ ರೇಣುಕಾಚಾರ್ಯ ತಮ್ಮನ ಮಗನ ಸಾವು ಪ್ರಕರಣಕ್ಕೆ ಮೆಗಾ ಟ್ವಿಸ್ಟ್:‌ ಅ. 30 ರಂದು ಆತನಿಗೆ ಒಂದೇ ನಂಬರ್‌ನಿಂದ 10 ಸಲ ಕರೆ!

ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಚಂದ್ರಶೇಖರ್‌ ನದ್ದ ಅಪಘಾತವಾಗಿಲ್ಲ, ಅದೊಂದು ಯೋಜಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿರುವ ಹಿನ್ನೆಲೆ ಪ್ರಕಣ ದಾಖಲಿಸಿಕೊಂಡಿರುವ ಹೊನ್ನಾಳಿ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಚಂದ್ರಶೇಖರ್‌ ನಾಪತ್ತೆಯಾದ ದಿನ. ಅ. 30 ರಂದು ಆತನ ಮೊಬೈಲ್‌ ಗೆ ಒಂದೇ ನಂಬರ್‌ ನಿಂದ 10ಕ್ಕೂ ಹೆಚ್ಚು ಸಲ ಕರೆ ಬಂದಿದೆ ಎಂದು ತಿಳಿದುಬಂದಿದೆ. …

Read More »