ಮೈಸೂರು ಸೆ 1:ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನೀಯವಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್) ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ “ವಜ್ರ ಮಹೋತ್ಸವ ಕಾರ್ಯಕ್ರಮ”ದಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ …
Read More »ಹುಕ್ಕೇರಿ : ಆರೋಗ್ಯಕರ ಆಹಾರ ಸೇವನೆಯಿಂದ ಸಂತೋಷದ ಜೀವನ ನಡೆಸ ಬಹುದು – ನ್ಯಾಯಾಧೀಶ ರಾಜಣ್ಣಾ.
ಹುಕ್ಕೇರಿ : ಆರೋಗ್ಯಕರ ಆಹಾರ ಸೇವನೆಯಿಂದ ಸಂತೋಷದ ಜೀವನ ನಡೆಸ ಬಹುದು – ನ್ಯಾಯಾಧೀಶ ರಾಜಣ್ಣಾ. ಆರೋಗ್ಯಕರ ಆಹಾರದಿಂದ ಸಂತೋಷದ ಜೀವನ ನಡೆಸಬಹುದು ಎಂದು ಹುಕ್ಕೇರಿ ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು. ಇಂದು ಹುಕ್ಕೇರಿ ನಗರದಲ್ಲಿ ವಿಶ್ವ ಪೌಷ್ಟಿಕ ಆಹಾರ ದಿನಾಚಾರಣೆ ಅಂಗವಾಗಿ ಕಾನೂನು ಸೇವಾ ಸಮಿತಿ ,ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ …
Read More »ಕುಕ್ಕೆ ದೇವಳದಲ್ಲಿ ಅದ್ಧೂರಿಯಾಗಿ ನೆರವೇರಿದ ಹೊಸ್ತಾರೋಗಣೆ
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಭಾನುವಾರ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತ ಮಹಾಭಿಷೇಕವನ್ನು ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ತೆನೆ ಮೆರವಣಿಗೆ: ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ …
Read More »ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್ ಜಾರಕಿಹೊಳಿ
ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್ ಜಾರಕಿಹೊಳಿ ಯಮಕಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸ್ಥಳೀಯವಾಗಿ ನಿಮ್ಮ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಹುಕ್ಕೇರಿ ತಾಲೂಕಿನ ಆನಂದಪೂರ ಗ್ರಾಮದಲ್ಲಿ ಸತೀಶ್ ಜಾರಕಿಹೊಳಿ ನೇಕಾರ ಕಾಲೋನಿ, ಬನಶಂಕರಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನು ಜವಳಿ ಖಾತೆ …
Read More »ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ*
*ಡಿಸಿಆರ್ ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ-ಸಿಎಂ ಸೂಚನೆ* *ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಆಗಸ್ಟ್ 30: ರಾಜ್ಯದಲ್ಲಿ ಜಾತಿವ್ಯವಸ್ಥೆಯಿದ್ದು, ಅನೇಕ ದುರ್ಬಲವರ್ಗದವರು ಜಾತಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರಾಜಭವನದ್ಲಿ ನಡೆದ , ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ …
Read More »ಹಾವೇರಿ: ರಿಪೇರಿಯಾಗದ ಜಲ ಶುದ್ಧೀಕರಣ ಘಟಕ; ರೋಗಗಳಿಗೆ ತುತ್ತಾಗುತ್ತಿರುವ ಜನ
ಹಾವೇರಿ: ಜಲ ಶುದ್ಧೀಕರಣ ಘಟಕದ ರಿಪೇರಿ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಬಗ್ಗೆ ನಗರಸಭೆಯು ಸೂಚನೆ ನೀಡಿತ್ತು. ಅಲ್ಲದೆ, ಇದೇ 13ರಿಂದ 17ರ ವರೆಗೆ ನದಿಯ ನೀರನ್ನು ಶುದ್ದೀಕರಣಗೊಳಿಸದೆ, ನೇರವಾಗಿ ಪೂರೈಕೆ ಮಾಡುವ ಕಾರಣ ಅದನ್ನು ಕುಡಿಯಲು ಬಳಿಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಂದಿಗೂ ನಗರಸಭೆಯು ಜಲ ಶುದ್ಧೀಕರಣ ಘಟಕದ ರಿಪೇರಿ ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ, ಶುದ್ಧೀಕರಣಗೊಳ್ಳದ ನೀರು ಬಳಸಿ, ಹಲವು ರೋಗಗಳನ್ನು ಅನುಭವಿಸುವಂತಾಗಿದೆ ಎಂದು ಹಾವೇರಿ ನಗರದ ನಿವಾಸಿಗಳು …
Read More »ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,
ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ, ಅಂದಾಜು ₹43.67 ಕೋಟಿ ವೆಚ್ಚದಲ್ಲಿ, ಕೃಷ್ಣಾ ನದಿ ಮೂಲದಿಂದ ಕಾಗವಾಡ, ಶೇಡಬಾಳ ಮತ್ತು ಉಗಾರ ಖುರ್ದ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 2ನೇ ಹಂತದ ಮಹತ್ವಾಕಾಂಕ್ಷಿ ಕಾಮಗಾರಿಯ ಭೂಮಿಪೂಜೆಯನ್ನು …
Read More »ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ???
ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ??? ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ??? ಮಳೆಯಲ್ಲಿ ಪರಿತಪಿಸುತ್ತಿರುವ ಜನರುಕೂಡಲೇ ದುರಸ್ಥಿ ಮಾಡಬೇಕೆಂದು ಆಗ್ರಹ ಬೆಳಗಾವಿಯ ತಹಶೀಲ್ದಾರರ ಕಾರ್ಯಾಲಯ ಭಾರಿ ಮಳೆಗೆ ಸೋರುತ್ತಿದ್ದು, ಮಳೆ ನೀರಿನಲ್ಲೇ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಂಚರಿಸುವ ಪ್ರಸಂಗ ಎದುರಾಗಿದ್ದು, ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದೆಲ್ಲ ಹೇಳುತ್ತಾರೆ. ಆದರೇ, ಮಳೆಗಾಲದಲ್ಲಿ ಬೆಳಗಾವಿ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ …
Read More »ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ
ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ ಪರ್ವತದ ಮೇಲೆ ಸ್ನಾನಕ್ಕೆ ಸಿದ್ಧಳಾಗುತ್ತಿದ್ದಳು. ಅವಳು ತೊಂದರೆಗೊಳಗಾಗಲು ಬಯಸದ ಕಾರಣ, ತನ್ನ ಪತಿ ಶಿವನ ವೃಷಭ ನಂದಿಗೆ ಬಾಗಿಲನ್ನು ಕಾಯಲು ಮತ್ತು ಯಾರನ್ನೂ ಹಾದುಹೋಗಲು ಬಿಡದಂತೆ ಹೇಳಿದಳು. ಪಾರ್ವತಿಯ ಆಸೆಗಳನ್ನು ಈಡೇರಿಸುವ ಉದ್ದೇಶದಿಂದ ನಂದಿ ನಿಷ್ಠೆಯಿಂದ ತನ್ನ ಸ್ಥಾನವನ್ನು ವಹಿಸಿಕೊಂಡಳು. ಆದರೆ, ಶಿವ ಮನೆಗೆ ಬಂದು ಸ್ವಾಭಾವಿಕವಾಗಿ ಒಳಗೆ ಬರಲು ಬಯಸಿದಾಗ, ನಂದಿ …
Read More »ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.
ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ ಬಂದಂತೆ ಕೇಬಲ್ ವೈಯರ್ ನಿಂದ ಹೊಡೆದು ಅವರ ಮನೆ ಯಲ್ಲಿ ಕುಡಿ ಹಾಕಿದ್ದು. ಬಸಪ್ಪ ನ ಹೆಂಡತಿಯನ್ನು ಬೀದಿಗೆ ತಂದು ಮನಸಿಗೆ ಬಂದ ಹಾಗೆ ಆಕೆ ಯನ್ನು ಎಳದಾಡಿ ತಲೆ ಕೆಳಗೆ ಮಾಡಿ ಅವಮಾನಿಸಿ ಹೊಡೆದ್ದರು. ಲಕ್ಷ್ಮಣ ಎಂಬಾತನಿಂದ ಹಲ್ಲೆ ನಡೆಸಲಾಗಿದೆ.ಬಸಪ್ಪ ನ ಕುಟುಂಬ ಬಿಡಸಲು ಬಂದ ವ್ಯಕ್ತಿ ಗಳ ಮೇಲೆ ಕೂಡ …
Read More »