ಬೆಳಗಾವಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ಗುರುಶಾಂತೇಶ್ವರ ಕಲ್ಯಾಣ ಪ್ರತಿಷ್ಠಾನ ಹಿರೇಮಠ ಹುಕ್ಕೇರಿ, ಚಿರಾಯು ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಯೋಗ ಶಿಬಿರ ಹಾಗೂ ಆರೋಗ್ಯ ಸಲಹಾ ಕಾರ್ಯಕ್ರಮ ಶುಕ್ರವಾರದಿಂದ ಐದು ದಿನಗಳ ಕಾಲ ನಡೆಯಲಿದೆ. ಜೂ.17 ರಿಂದ 21 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಡಾ. ಪದ್ಮನಾಭ ದರ್ಬಾರೆ ಅವರು …
Read More »ಭರಮಾಪುರಕ್ಕೆ ಬೆಳಕು ನೀಡಿದ ಶಾಸಕ ಸತೀಶ್ ಜಾರಕಿಹೊಳಿ
ಹುಕ್ಕೇರಿ: ಕಳೆದ ಎಂಟು ವರ್ಷಗಳ ಸತತ ಪ್ರಯತ್ನದಿಂದ ಇಂದು ಭರಮಾಪುರ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರಕಿದ್ದು ಸಂತಸ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಭರಮಾಪುರ ಗ್ರಾಮದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಿದ್ಯುತೀಕರಣ ಮತ್ತು ಬೆಳಕು ಯೋಜನೆಯಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕೆಲವರಿಗೆ ವಿದ್ಯುತ್ ದೊರಕಿದ್ದು, ಇನ್ನೂ …
Read More »ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ- ನಲಪಾಡ್
ಬೆಂಗಳೂರು: ರಾಹುಲ್ ಗಾಂಧಿ ಅತ್ಯಾಚಾರ ಮಾಡ್ತಿದ್ದಾರೆ ಎಂದು ಕರ್ನಾಟಕ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗಂಭೀರ ಆರೋಪ ಮಾಡಿದ್ದಾರೆ. ಇ.ಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿ ಕಾಂಗ್ರೆಸ್ ನಾಯಕರು ಬೃಹತ್ ಜಾಥಾವನ್ನು ನಗರದಲ್ಲಿ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ ನಲಪಾಡ್, ರಾಹುಲ್ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ. ಅತ್ಯಾಚಾರ ಎಂದರೇ ರೇಪ್ ಅಲ್ಲ ದೌರ್ಜನ್ಯ. ನಮ್ಮ ಮಾಜಿ ಅಧ್ಯಕ್ಷರ ಮೇಲೆ ದೌರ್ಜನ್ಯ …
Read More »ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿ
ಹೈದರಾಬಾದ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆಗೊಳಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ದೆಹಲಿ, ಹೈದರಾಬಾದ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿಯೊಬ್ಬರು ಪೊಲೀಸ್ ಸಿಬ್ಬಂದಿ ಕಾಲರ್ ಹಿಡಿದ ಘಟನೆ ನಡೆದಿದೆ. ಇಂದು ಹೈದರಾಬಾದ್ ನಲ್ಲಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ …
Read More »ಅಗ್ನಿಪಥ್ ಯೋಜನೆಗೆ ವಿರೋಧ; ರೈಲಿಗೆ ಬೆಂಕಿ ಹಚ್ಚಿ ಯುವಕರ ಆಕ್ರೋಶ
ಪಾಟ್ನಾ: ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಅಗ್ನಿಪಥ್ ಯೋಜನೆಗೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆ ವಿರುದ್ಧ ಪ್ರತಿಭಟನೆಗಿಳಿದಿರುವ ಯುವಕರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸೇನೆಗೆ ಸೇರುವ ಉದ್ದೇಶದಿಂದ ಪರೀಕ್ಷೆ ಬರೆದು ನೇಮಕವಾಗಿದ್ದ ಹಾಗೂ ತರಬೇತಿ ಪಡೆದು ನೇಮಕಾತಿಗಾಗಿ ಕಾಯುತ್ತಿದ್ದ ಯುವಕರಿಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಶಾಕ್ ನೀಡಿದ್ದು, ವಯೋಮಿತಿ ಸಡಿಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬಿಹಾರ ಮುಜಾಫರ್ …
Read More »ಗದಗ : DC ಕಚೇರಿಯಲ್ಲೇ ಶೂಟ್ ಮಾಡಿಕೊಂಡು ಕಾನ್ ಸ್ಟೆಬಲ್ ಆತ್ಮಹತ್ಯೆ
ಗದಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಹೆಡ್ ಕಾನ್ಸ್ ಟೇಬಲ್ ಓರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಡಿಸಿ ಕಚೇರಿಯಲ್ಲಿ ನಡೆದಿದೆ. ಡಿಎಆರ್ ಮುಖ್ಯಪೇದೆ ಕೆ.ಎಸ್.ಕೊಪ್ಪದ ಆತ್ಮಹತ್ಯೆಗೆ ಶರಣಾದವರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಕೊಪ್ಪದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಭದ್ರತಾ ಕೊಠಡಿಯಲ್ಲಿ ಗುಂಡು ಹಾರಿಸಿಕೊಂಡು ಕೊಪ್ಪದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More »ರಾಹುಲ್ ಗಾಂಧಿಗೆ ಸಮನ್ಸ್ ರಾಜಕೀಯ ಪ್ರೇರಿತ: ಸತೀಶ್ ಜಾರಕಿಹೊಳಿ ಆರೋಪ
ಗೋಕಾಕ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮುಂದೆ ಸಾಕಷ್ಟು ಕೇಸ್‌ಗಳಿವೆ. ಆದರೆ ಉದ್ದೇಶಪೂರಕವಾಗಿ ರಾಹುಲ್ ಗಾಂಧಿಯವರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ಇಡಿ, ಸಿಬಿಐನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಕೇಸ್ ಗಳಿದ್ದು, ಅವುಗಳನ್ನು ಮಾತ್ರ ಕೇಂದ್ರ …
Read More »SSLC ಪರೀಕ್ಷೆಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿನಿ ; ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ.!
ಗೋಕಾಕ ಎನ್ ಎಸ್ ಎಫ್ ಅತಿಥಿಗೃಹದಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಕೆ ಎಂ ಎಫ್ ರಾಜ್ಯ ಅಧ್ಯಕ್ಷರು ಸನ್ಮಾನ್ಯ ಶ್ರೀ ಬಾಲಚಂದ್ರ .ಲ. ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ಪ್ರೌಢಶಾಲೆ ಕೌಜಲಗಿ ಈ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮೀ ತಳವಾರ ಇವಳ ಮರುಮೌಲ್ಯಮಾಪನ ಫಲಿತಾಂಶ ಬಂದಿದ್ದು, ಆಂಗ್ಲ ಭಾಷೆ ಹಾಗೂ ವಿಜ್ಞಾನ ವಿಷಯಲ್ಲಿ 100 ಅಂಕ ಗಳಿಸುವುದುರೊಂದಿಗೆ ಒಟ್ಟು *625* ಅಂಕ ಗಳಿಸಿ ವಲಯ ಹಾಗೂ ರಾಜ್ಯಕ್ಕೆ …
Read More »ಗಂಡ ಹೊಡೆದ ಏಟಿಗೆ ಪ್ರಜ್ಞೆ ತಪ್ಪಿದ ಹೆಂಡತಿ ; ಸತ್ತಳೆಂದು ಆತ್ಮಹತ್ಯೆ ಮಾಡಿಕೊಂಡ ಗಂಡ.!
ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ (Naganur) ಪಟ್ಟಣದಲ್ಲಿ ತಾನು ಹೊಡೆದ ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಪತಿಯೂ (husband) ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ (suicide) ಮಾಡಿಕೊಂಡ ಯುವಕನನ್ನು ನಾಗನೂರು ಪಟ್ಟಣದ ಅರಣ್ಯಸಿದ್ದೇಶ್ವರ ತೋಟದ ನಿವಾಸಿ ಮಹಾಂತೇಶ ಸಿದ್ದಪ್ಪ ಗೂಡೆನ್ನವರ ಎಂದು ಗುರುತಿಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಾಂತೇಶ, ಬುಧವಾರ ಹೆಂಡತಿಯೊಡನೆ ಜಗಳವಾಡಿದ್ದಾನೆ. …
Read More »ಗಾಂಜಾ ಮಾರಾಟ: ಬೆಳಗಾವಿಯಲ್ಲಿ ಮತ್ತೆ ಮೂವರ ಬಂಧನ
ಬೆಳಗಾವಿ – ಇಲ್ಲಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಪಾಟೀಲ ನೇತೃತ್ವದ ತಂಡ ಅಶೋಕನಗರ ಇಎಸ್‌ಐ ಆಸ್ಪತ್ರೆಯ ಸಮೀಪ ದಾಳಿ ಮಾಡಿ, ಗಾಂಜಾ ಮಾರಾಟ ಮಾಡುತ್ತಿದ್ದ, ೧) ಸರ್ಫರಾಜ ಸಜರ ಮುಲ್ಲಾ, (೩೫) ಸಾ: ನ್ಯೂ ಗಾಂಧಿನಗರ ಬೆಳಗಾವಿ. ೨) ಜಾಫರ ಹುಸೇನಸಾಬ ಸೊಲ್ಲಾಪೂರ, (೨೪) ಸಾ: ವಡ್ಡರವಾಡಿ ಬೆಳಗಾವಿ, ೩) ನರೇಶ …
Read More »