Breaking News

ರಾಜ್ಯ

ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ. ಲಿಂಗಾಯತ ಶಾಸಕರ ಸೀಕ್ರೆಟ್ ಮೀಟಿಂಗ್..

ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ..? ತಡರಾತ್ರಿ ಪಂಚಮಸಾಲಿ ಲಿಂಗಾಯತ ಶಾಸಕರ ಸೀಕ್ರೆಟ್ ಮೀಟಿಂಗ್.. ಬೆಂಗಳೂರು, ಫೆ.19-ಪಂಚಮಸಾಲಿ ಲಿಂಗಾಯತ ಸಮುದಾಯದ ಬಿಜೆಪಿ ಶಾಸಕರಿಂದ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ.ಪಂಚಮಸಾಲಿ ಲಿಂಗಾಯತ ಸಮುದಾಯದ ಬಿಜೆಪಿ ಶಾಸಕರಿಂದ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕರಡಿ ಸಂಗಣ್ಣ, ನಿಂಬಣ್ಣವರ್, ಮಹೇಶ್ ಕುಮಟಳ್ಳಿ, ಮೋಹನ್ ಲಿಂಬಿಕಾಯಿ ಹಾಗೂ ಮುರುಗೇಶ್ ನಿರಾಣಿ ಭಾಗವಹಿಸಿದ್ದರು. ನಿನ್ನೆ ರಾತ್ರಿ ಅವರ ನೇತೃತ್ವದಲ್ಲಿ …

Read More »

ಪಾಕಿಸ್ತಾನ ಪರ ಘೋಷಣೆ ಕೂಗಿದ ನಗರದ ಕೆಎಲïಇ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಹುಬ್ಬಳ್ಳಿ,ಫೆ,18- ಪಾಕಿಸ್ತಾನ್ ಪರ ಘೊಷಣೆ ಕೂಗಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹಿ ಕೃತ್ಯದ ಪ್ರಕರಣವನ್ನು ಹು-ಧಾ ಪೊಲೀಸ್ ಕಮಿಷನರೇಟ್‍ರವರು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ.ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಿಂದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ, ಆರೋಪಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವವರೆಗೆ ಪೊಲೀಸ್ ಕಮಿಷನರೇಟ್ ಚುರುಕಿನಿಂದಲೇ ಕೆಲಸ ಮಾಡಿತ್ತು. ಗುರುತರ ಆರೋಪದ ಪ್ರಕರಣದಲ್ಲಿ ಆರೋಪಿತರಿಂದ ಪೊಲೀಸ್ ಠಾಣೆಯಲ್ಲೇ ಬಾಂಡ್ ಪಡೆದು ಬಿಟ್ಟು ಕಳುಹಿಸಿದ್ದು ಭಾನುವಾರ …

Read More »

ಕನ್ನಡ ಸಿನಿಮಾವಾಗಲಿದೆ ಕಂಬಳ ವೀರ ಶ್ರೀನಿವಾಸ್ ಜೀವನ ಚರಿತ್ರೆ

ಕಂಬಳ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಂಗಳೂರು: ಕಂಬಳ ವೀರ ಶ್ರೀನಿವಾಸ್ ಗೌಡ ಅವರು ವಿಶ್ವದಾದ್ಯಂತ ಭಾರೀ ಸುದ್ದಿಯಾಗುತ್ತಿದ್ದಂತೆ ಸಿನಿಮಾ ಕ್ಷೇತ್ರ ಕೂಡ ಕಂಬಳ ಕ್ಷೇತ್ರದ ದಾಖಲೆಯನ್ನು ಮೂಲ ವಿಷಯವನ್ನಾಗಿ ಇಟ್ಟುಕೊಂಡು ಕನ್ನಡ ಸಿನಿಮಾ ತಯಾರಿಸಲ ನಿರ್ಮಾಪಕರೊಬ್ಬರು ಮುಂದಾಗಿದೆ. ಮಂಗಳೂರು ಸಮೀಪ ಐಕಳದಲ್ಲಿ ಫೆಬ್ರವರಿ 2ರಂದು ನಡೆದ ಕಂಬಳದಲ್ಲಿ ಮೂಡಬಿದ್ರೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ್ ಗೌಡ ಅವರು ದಾಖಲೆ ಬರೆದು ವಿಶ್ವದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಾಗಿಸಿ ಕಥೆ ತಯಾರಾಗಲಿದೆ. ಕರಾವಳಿ …

Read More »

ತವರು ಜಿಲ್ಲೆಯಲ್ಲಿ ಬಿಗ್‍ಬಾಸ್ ವಿನ್ನರ್ ಶೈನ್‍ಗೆ ಅದ್ಧೂರಿ ಸ್ವಾಗತ

ಉಡುಪಿ: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್‍ಶೆಟ್ಟಿ ಗೆದ್ದ ನಂತರ ತವರು ಜಿಲ್ಲೆ ಉಡುಪಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಶೈನ್ ಶೆಟ್ಟಿ ಬಿಗ್‍ಬಾಸ್ ಗೆದ್ದ ಬಳಿ ಮೊದಲ ಬಾರಿಗೆ ಉಡುಪಿಗೆ ಮಂಗಳವಾರ ಆಗಮಿಸಿದ್ದರು. ಹೀಗಾಗಿ ಶೈನ್ ಶೆಟ್ಟಿಯನ್ನು ನಗರದ ಜೋಡುಕಟ್ಟೆಯಿಂದ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗಿತ್ತು. ಶೈನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಅಭಿಮಾನಿಗಳು ಮುಗಿಬಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ …

Read More »

ಶಾಸಕಿಯೊಬ್ಬರ ಸಹೋದರನಿಗೆ ನಕಲಿ ಪ್ರ-ಪತ್ರ ನೀಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ CEO ಆದೇಶ.

ಶಾಸಕಿಯೊಬ್ಬರ ಸಹೋದರನಿಗೆ ನಕಲಿ ಪ್ರ-ಪತ್ರ ನೀಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ CEO ಆದೇಶ..! ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿಗೆ ಮೋದಗಾ ಗ್ರಾಮದ ಸುಳ್ಳು ರಹವಾಸಿ ಪ್ರಮಾಣ ಪತ್ರ ನೀಡಿದ ಗ್ರಾಮ ಪಂಚಾಯತಿ ಸದಸ್ಯ ಬಾಬು ಕಾಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೋದಗಾ ಗ್ರಾಮ ಪಂಚಾಯತಿಯ ಪಿಡಿಓಗೆ ಆದೇಶ ನೀಡಿದ್ದಾರೆ. ಚನ್ನರಾಜ ಹಟ್ಟಿಹೊಳಿ ಮೋದಗಾ ಗ್ರಾಮದ …

Read More »

ನಾನು ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗಲೇ ಹೇಳಿದಂತೆ ಜನತೆ ಹರಿಸುವುದು ಮತ್ತು ರಾಜ್ಯ ರೈತರ ಕಣ್ಣೀರು ಒರೆಸುವುದೇ ನನ್ನ ಆದ್ಯತೆಯಾಗಿದೆ

ಜಂಟಿ ಅಧಿವೇಶದಲ್ಲಿ ರಾಜ್ಯಪಾಲರ ಭಾಷಣ ಬಳಿಕ ನೀರಾವರಿ ಇಲಾಖೆ ಬಗ್ಗೆ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ಬೆಂಗಳೂರು: ರಾಜ್ಯದ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 4050 ಕೋಟಿ ರೂ.ಗಳ ಮೀಸಲಿಡಲಾಗುತ್ತಿದೆ. ಈ ವಿಷಯವಾಗಿ ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಜಂಟಿ ಸದನ ಉದ್ದೇಶಿಸಿ ರಾಜ್ಯಾಪಾಲರು ಭಾಷಣ ಮಾಡಿದ ಬಳಿಕ ಜಲಸಂಪನ್ಮೂಲ ಇಲಾಖೆ …

Read More »

ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ…………… ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದಿದ್ದಾರೆ ಎಂದು ಟಾಲಿವುಡ್ ನಟ ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ. ನಿತಿನ್ ಮತ್ತು ರಶ್ಮಿಕಾ ಅಭಿನಯದ ‘ಭೀಷ್ಮ’ ಸಿನಿಮಾ ಫೆ.21 ರಂದು ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ನಿತಿನ್ ಮತ್ತು ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಂದರೆ ಪ್ರೇಮಿಗಳ ದಿನಾಚರಣೆಯಂದು ಇಬ್ಬರೂ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ನಿತಿನ್, ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ನಿತಿನ್ …

Read More »

ರಾಜ್ಯಪಾಲರ ಭಾಷಣದ ಹೈಲೈಟ್ಸ್ ಇಲ್ಲಿದೆ

ಬೆಂಗಳೂರು, ಫೆ.17-ದೇಶದಲ್ಲೇ ಆರ್ಥಿಕ ಸಂಪನ್ಮೂಲಗಳ ವೃದ್ಧಿಗಾಗಿ ಆರ್ಥಿಕ ಕ್ರೋಢೀಕರಣದ ಮಾರ್ಗನಕ್ಷೆಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ನಿಗದಿಪಡಿಸಲಾದ ಆರ್ಥಿಕ ಮತ್ತು ಸಾಲ ಕ್ರೋಢೀಕರಣದ ಗುರಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಾಧಿಸಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯಸರ್ಕಾರಕ್ಕೆ ಬಹುಪರಾಕ್ ಹೇಳಿದ್ದಾರೆ. ತಮ್ಮ 20 ಪುಟಗಳ ಭಾಷಣದಲ್ಲಿ ರಾಜ್ಯಪಾಲರು ಹಿಂದಿನ ಮೈತ್ರಿ ಸರ್ಕಾರ ಕೈಗೊಂಡಿದ್ದ ಕಾರ್ಯಕ್ರಮಗಳು ಹಾಗೂ ಈಗಿನ ಬಿಜೆಪಿ ಸರ್ಕಾರದ ಹೊಸ ಯೋಜನೆಗಳು ಸೇರಿದಂತೆ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಗ್ಗೆ …

Read More »

ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ. ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ …

Read More »

ರೈತರ ಜಮೀನುಗಳಿಗೆ ಭೇಟಿ ನೀಡಿ ಉದ್ಯೋಗಖಾತ್ರಿ ಯೋಜನೆಯ ವಿವಿಧ ಪ್ರಯೋಜನಗಳ ಕುರಿತು ಮನವರಿಕೆ ಮೂಡಿಸುವ ಕಾರ್ಯ ನಡೆಸಿದ್ದಾರೆ.

ಬಾಗಲಕೋಟೆ: ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗಂಗೂಬಾಯಿ ಮಾನಕರ್ ರೈತರ ಜಮೀನುಗಳಿಗೆ ಭೇಟಿ ನೀಡಿ ಉದ್ಯೋಗಖಾತ್ರಿ ಯೋಜನೆಯ ವಿವಿಧ ಪ್ರಯೋಜನಗಳ ಕುರಿತು ಮನವರಿಕೆ ಮೂಡಿಸುವ ಕಾರ್ಯ ನಡೆಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಕೇವಲ ಗ್ರಾಮದಲ್ಲಿ ರಸ್ತೆ, ಕೆರೆ, ಸೇತುವೆ ನಿರ್ಮಾಣ ಮಾಡುವುದಕ್ಕೆ ಅಷ್ಟೇ ಸಿಮೀತವಲ್ಲ. ರೈತರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವುದಕ್ಕೂ ಬಳಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಂಗೂಬಾಯಿ …

Read More »