Breaking News

ರಾಜ್ಯ

ತಡರಾತ್ರಿ ಡಾಬಾಗೆ ನುಗ್ಗಿ ಮೂವರ ಬರ್ಬರ ಹತ್ಯೆ

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಪಟ್ಟಣ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ತ್ರಿಬಲ್​ ಮರ್ಡರ್​ನಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಮೂಡಿದೆ. ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಕೊಲೆಯಾದವರು ಎಂದು ಗುರುತಿಸಲಾಗಿದೆ. ಈ ಮೂವರು ಸಂಬಂಧಿಕರಾಗಿದ್ದು, ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಪಟ್ಟಣ ಗ್ರಾಮದ ಬಳಿ ಇರುವ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇವರನ್ನು …

Read More »

ಭರ್ತಿಯತ್ತ KRS ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ

ಮಂಡ್ಯ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯವು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹೀಗಾಗಿ, ಡ್ಯಾಂನಿಂದ ಯಾವುದೇ ಸಮಯದಲ್ಲಿ ಹೆಚ್ಚಿನ ನೀರು ಬಿಡುಗಡೆಯಾಗುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಕೆಆರ್‌ಎಸ್​ನಿಂದ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ: ಕೆಆರ್‌ಎಸ್‌ ಜಲಾಶಯ ಭರ್ತಿಯಂಚು ತಲುಪಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಯಾವುದೇ ಸಂದರ್ಭದಲ್ಲೂ ಹೆಚ್ಚಿಸಬಹುದು. ಹೀಗಾಗಿ, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಜನರಿಗೆ ಕಾವೇರಿ ನೀರಾವರಿ ನಿಗಮ …

Read More »

ಖಾನಾಪೂರ ತಾಲೂಕಿನ ಮಂತುರ್ಗಾ ಗ್ರಾಮದ ಹಾಲಾತ್ರಿ ಹಳ್ಳದ ಸೇತುವೆ ಮಳೆಯ ಅಬ್ಬರಕ್ಕೆ ಮುಳುಗುವ ಸಂಭವ

ಮುಳುಗುವ ಭೀತಿಯಲ್ಲಿ ಮಂತುರ್ಗಾ-ಹಾಲಾತ್ರಿ ಸೇತುವೆ ಖಾನಾಪೂರ ತಾಲೂಕಿನ ಮಂತುರ್ಗಾ ಗ್ರಾಮದ ಹಾಲಾತ್ರಿ ಹಳ್ಳದ ಸೇತುವೆ ಮಳೆಯ ಅಬ್ಬರಕ್ಕೆ ಮುಳುಗುವ ಸಂಭವ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಖಾನಾಪೂರ ಪೋಲಿಸ್ ಠಾಣೆಯ ಪಿಎಸ್ಐ ಎಮ್.ಬಿ.ಬಿರಾದಾರ ಮತ್ತು ಸಿದ್ರಾಮ ಹಸಾರೆ ಅವರು ಪರಿಶೀಲನೆ ನಡೆಸಿದರು. ಈ ಸೇತುವೆ ಮೇಲೆ ಬಹು ಪ್ರಮಾಣದಲ್ಲಿ ವಾಹನ ಸಂಚಾರ ನಡೆಯುತ್ತದೆ ಈಗಾಗಲೇ ಮಳೆಯ ಪ್ರಮಾಣ ಹೆಚ್ಚು ಇದ್ದು ರಾತ್ರಿ ಸೇತುವೆ ಮೇಲೆ ನೀರು ಬಂದು ರಸ್ತೆ ಸ್ಥಗಿತಕೊಳ್ಳುವ ಸಾದ್ಯತೆ …

Read More »

ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ  ರೈತರು ತಮ್ಮ ಜಮೀನಿಗಳಿಗೆ ಹೋಗಲು ದಾರಿ ಬಿಡಿಸಿಕೊಡಲು ಆಗ್ರಹಿಸಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ದೇವರಹಿಪ್ಪರಗಿ ತಾಳಿಕೋಟಿ ಮುಖ್ಯ ರಸ್ತೆ ಬಂದು ಮಾಡಿ ಪ್ರತಿಭಟನೆ ನಡೆಸಿದರು. ದೇವರ ಹಿಪ್ಪರಗಿ ತಾಲೂಕಿನ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ತಮ್ಮ ಜಮೀನಿಗಳಿಗೆ ಈಗ ಕೆಲ ಬಲಾಡ್ಯರು ದಾರಿಯನ್ನು …

Read More »

ವಿಪಕ್ಷಗಳಿಗೆ ನೆರವಾಗುವಂತೆ ಮಾತನಾಡಲು ನಾನು ಅವರ ಬಂಧು ಅಲ್ಲ:ರಾಜು ಕಾಗೆ

ಬೆಂಗಳೂರು: “ನಾನು ಸಿಎಂ ಮೇಲೆ, ಮಂತ್ರಿಗಳ ಮೇಲೆ ಆರೋಪ ಮಾಡಿಲ್ಲ. ಈ ವ್ಯವಸ್ಥೆಯ ಬಗ್ಗೆ ಆರೋಪ ಮಾಡಿದ್ದೇನೆ. ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ನಾನು ಮಾಡಿದ ಆರೋಪಕ್ಕೆ ಈಗಲೂ ಬದ್ಧ” ಎಂದು ಕಾಂಗ್ರೆಸ್​ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ. ಶಾಸಕರ ಭವದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ವ್ಯವಸ್ಥೆ ಸುಧಾರಣೆ ಆಗಬೇಕು. ನಮ್ಮ ಸರ್ಕಾರದ ಆಡಳಿತ ಚುರುಕಾಗಬೇಕು. ನನ್ನ ಕ್ಷೇತ್ರದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ ಮಾಡಲು ಅವಕಾಶ …

Read More »

ಬೆಳಗಾವಿ ವಾಹನಗಳಿಗೆ ಗೋವಾದಲ್ಲಿ ವಿನಾಕಾರಣ ತೊಂದರೆ ನೀಡದಿರಲು ಗೋವಾ ಸಿಎಂ ಆದೇಶ ಸಿಎಂ ಸಾವಂತ್’ಗೆ ಧನ್ಯವಾದ ಸಲ್ಲಿಸಿದ ಮಾಜಿ ಶಾಸಕ ಅನಿಲ ಬೆನಕೆ

ಬೆಳಗಾವಿ ವಾಹನಗಳಿಗೆ ಗೋವಾದಲ್ಲಿ ವಿನಾಕಾರಣ ತೊಂದರೆ ನೀಡದಿರಲು ಗೋವಾ ಸಿಎಂ ಆದೇಶ ಸಿಎಂ ಸಾವಂತ್’ಗೆ ಧನ್ಯವಾದ ಸಲ್ಲಿಸಿದ ಮಾಜಿ ಶಾಸಕ ಅನಿಲ ಬೆನಕೆ ಬೆಳಗಾವಿ ಸೇರಿದಂತೆ ಪರ ರಾಜ್ಯದಿಂದ ಗೋವಾ ರಾಜ್ಯಕ್ಕೆ ಆಗಮಿಸುವ ವಾಹನಗಳಿಗೆ ವಿನಾಕಾರಣ ತೊಂದರೆ ನೀಡಬಾರದೆಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಪೊಲೀಸರಿಗೆ ನಿರ್ದೇಶನ ಜಾರಿ ಮಾಡಿದ್ದು, ತಮ್ಮ ಮನವಿಗೆ ಸ್ಪಂದಿಸಿ ಆದೇಶ ನೀಡಿದ ಹಿನ್ನೆಲೆ ಮಾಜಿ ಶಾಸಕ ಅನಿಲ ಬೆನಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬೆಳಗಾವಿ ಸೇರಿದಂತೆ …

Read More »

ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು

ಯಾದಗಿರಿ, ಜೂನ್​ 25: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆಯುತ್ತಾ ಬಂದಿದೆ. ಆದರೂ ದೇಶದಲ್ಲಿ ಇನ್ನು ಕೂಡ ಅನಿಷ್ಟ ಪದ್ಧತಿಗಳು ಜೀವಂತ ಇದೆ. ಕಾನೂನು ಇದರೂ ದಲಿತರ (Dalits) ಮೇಲೆ ಇನ್ನು ಕೂಡ ದೌರ್ಜನ್ಯಗಳು ನಡೆಯುತ್ತಿವೆ. ಇಂತಹದೇ ಒಂದು ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ನಡೆದಿದ್ದು, ಸವರ್ಣೀಯರ (upper caste) ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ದಲಿತರಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಜಿಲ್ಲೆಯ ಚಿನ್ನಕಾರ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ …

Read More »

ಪಾದಚಾರಿ ಮಹಿಳೆಯರಿಗೆ ಹಿಂಬದಿಯಿಂದ ಕಾರು ಡಿಕ್ಕಿ

ದೇವನಹಳ್ಳಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ತಿಮ್ಮಕ್ಕ(60), ಯಶೋಧಾ(33) ಮೃತಪಟ್ಟ ದುರ್ದೈವಿಗಳು. ಬೊಮ್ಮವಾರ ಗ್ರಾಮದ ಇಬ್ಬರು ಮಹಿಳೆಯರು ಜಾನುವಾರುಗಳಿಗೆ ಹುಲ್ಲು ತರಲು ಹೋಗಿದ್ದ ವೇಳೆ ಘಟನೆ ನಡೆದಿದೆ. ರಸ್ತೆ ಎಡ ಭಾಗದದಲ್ಲಿ ನಡೆಯುತ್ತಿದ್ದ ವೇಳೆ ವೇಗವಾಗಿ ಹಿಂಬದಿಯಿಂದ ಬಂದ ಕಾರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ …

Read More »

ಹೋರಾಟ ಮಾಡಿದವರು ನಿರುದ್ಯೋಗಿಗಳು: ಬಿಜೆಪಿ ಹೋರಾಟಗಾರರ ವಿರುದ್ಧ ಗುಡುಗಿದ ಶಾಸಕ ಬಸವರಾಜ್ ಶಿವಗಂಗಾ

ದಾವಣಗೆರೆ : ನಿನ್ನೆ ಹೋರಾಟ ಮಾಡಿದವರು ನಿರುದ್ಯೋಗಿಗಳು ಎಂದು ಬಿಜೆಪಿ ಹೋರಾಟಗಾರರ ವಿರುದ್ಧ ಶಾಸಕ ಬಸವರಾಜ್ ಶಿವಗಂಗಾ ಗುಡುಗಿದ್ದಾರೆ. ಭದ್ರಾ ಬಲದಂಡೆ ಸೀಳಿ ಅವೈಜ್ಞಾನಿಕ ಕಾಮಗಾರಿ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಯಾವ ವಿಚಾರಕ್ಕೆ ಎಲ್ಲಿ ಹೋಗಿ ಪ್ರತಿಭಟನೆ ಮಾಡ್ಬೇಕು ಅಂತಾ ಅವರಿಗೆ ಗೊತ್ತಿಲ್ಲ. ಅವರ ಸರ್ಕಾರದಲ್ಲಿ ಕಾಮಗಾರಿಗೆ 2022ರಲ್ಲಿ ಅನುಮತಿ ನೀಡಲಾಗಿದೆ. ಕೆಲಸವಿಲ್ಲದ ಕಾರಣಕ್ಕೆ ನಿರುದ್ಯೋಗಿಗಳು ಪ್ರತಿಭಟನೆ ಮಾಡಿದ್ದಾರೆ. ನಾನು ಅಧಿಕಾರಿಗಳ ಜೊತೆ ಅದನ್ನು ಚರ್ಚೆ ಮಾಡುತ್ತೇನೆ. ಆ ಕಾಮಗಾರಿಯಿಂದ …

Read More »

ಕೇಂದ್ರ ವಿತ್ತ ಸಚಿವೆ – ಸಿಎಂ ಭೇಟಿ; ಬೆಳವಣಿಗೆಗೆ ಪೂರಕವಾಗಿರುವ ವಿಧಾನ ಅನುಸರಿಸಲು 16ನೇ ಹಣಕಾಸು ಆಯೋಗಕ್ಕೆ ಸೂಚಿಸುವಂತೆ ಸಿಎಂ ಮನವಿ

ನವದೆಹಲಿ/ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16ನೇ ಹಣಕಾಸು ಆಯೋಗಕಕ್ಕೆ ಪ್ರತಿಪಾದಿಸುವಂತೆ ವಿನಂತಿಸಿದರು. 15ನೇ ಹಣಕಾಸು ಆಯೋಗ ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ …

Read More »