Breaking News

ರಾಜ್ಯ

ನಟಿ ಶಿಲ್ಪಾ ಶೆಟ್ಟಿ ಪತಿ, ರಾಜ್ ಕುಂದ್ರ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್; ಪೂನಂ

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದ ಬಳಿಕ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಹೇಳಿಕೆ ವೈರಲ್ ಆಗುತ್ತಿದೆ. 2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ, ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ ವೈರಲ್ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಬ್ಲೂ ಫಿಲ್ಮ್ ದಂಧೆಯ ಹಿಂದೆ ಬಿದ್ದಿದ್ದ ಮುಂಬೈ …

Read More »

ಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿ

ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಪ್ರದರ್ಶನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗಿದ್ದು, ಪ್ರಕರಣ ಸಂಬಂಧ ಹಲವು ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಿವೆ. ನಟಿ ಸಾಗರಿಕಾ ಸುಮನ್ ಮಾತನಾಡಿ, ”ರಾಜ್ ಕುಂದ್ರಾ, ಬೆತ್ತಲೆಯಾಗಿ ಆಡಿಷನ್ ನೀಡುವಂತೆ ಕೇಳಿದ್ದ” ಎಂದಿದ್ದಾರೆ. ”2020ರ ಆಗಸ್ಟ್‌ನಲ್ಲಿ ನನಗೆ ವೆಬ್ ಸರಣಿಯೊಂದರಲ್ಲಿ ನಟಿಸಲು ಅವಕಾಶ ಬಂತು. ರಾಜ್ ಕುಂದ್ರಾ ಸಂಸ್ಥೆಯ ವ್ಯವಸ್ಥಾಪಕ ಉಮೇಶ್ ಕಾಮತ್ ನನಗೆ ಕರೆ ಮಾಡಿದರು. ನನಗೆ ವಿಡಿಯೋ ಕಾಲ್‌ನಲ್ಲಿ …

Read More »

ಐವರು ನಿರ್ದೇಶಕರ ಒಂದು ಸಿನಿಮಾ ‘ಆದ್ದರಿಂದ’

ಒಟಿಟಿ ಸಮಯದಲ್ಲಿ ಅಂಥಾಲಜಿ ಸಿನಿಮಾಗಳು ಜನಪ್ರಿಯಗೊಳ್ಳುತ್ತಿವೆ. ಯಾವುದಾದರೂ ಒಂದು ವಿಷಯ ಆಧರಿಸಿ ಕೆಲವು ನಿರ್ದೇಶಕರು ಸೇರಿ ಅರ್ಧ ಗಂಟೆಯ ಸಿನಿಮಾ ಮಾಡುತ್ತಾರೆ. ಅದನ್ನು ಒಂದರಹಿಂದೊಂದರಂತೆ ಜೋಡಿಸಿ 2 ಅಥವಾ ಮೂರು ಗಂಟೆಯ ಸಿನಿಮಾ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನಗಳು ಈಗಾಗಲೇ ಆಗಿವೆ. ಇದೀಗ ಇಂಥಹುದೇ ಮತ್ತೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದುವೇ ‘ಆದ್ದರಿಂದ’. ಐದು ಜನ ಕನ್ನಡದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಒಟ್ಟಾಗಿ ಸಿನಿಮಾ ನಿರ್ದೇಶಕನ …

Read More »

ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2ನೇ ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಮೊದಲ ಸಿನಿಮಾ ತಂಡ ಇದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇದೀಗ ಹ್ಯಾಟ್ರಿಕ್ ಹೀರೋ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು, ಶಿವಣ್ಣ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ-2’ ಸಿನಿಮಾ ‘ಸೆಪ್ಟಂಬರ್ 10’ರಂದು ಬಿಡುಗಡೆಯಾಗಲಿದೆ …

Read More »

ಧುಮುಕುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕರ ಹುಚ್ಚು ಸಾಹಸ

ಕಲಬುರಗಿ: ಮುಂಗಾರಿನ ಅಬ್ಬರ ಮಳೆಯಿಂದ ಭೋರ್ಗರೆಯುತ್ತಿದ್ದ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಣೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಎತ್ತಿಪೋತ ಜಲಪಾತ ಬಳಿ ನಡೆದಿದೆ. ಸತತವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಗೆ ಎತ್ತಿಪೋತ ಜಲಪಾತ ಧುಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ಹೀಗೆ ಮೈದುಂಬಿ ಹರಿಯುತ್ತಿರುವ ಜಲಪಾತ ನೋಡಲು ತೆರಳಿದ್ದ ಯುವಕರಿಬ್ಬರು ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಮುಂದಾಗಿ ನೀರಿಗಿಳಿದಿದ್ದರು. ಆದರೆ ಜಲಪಾತದ ರಭಸಕ್ಕೆ …

Read More »

‘ಪರೀಕ್ಷೆ ರದ್ದು ಮಾಡಿ’ ಅಂತ ವಿಶ್ವವಿದ್ಯಾಲಯದ ಮುಂದೆಯೇ ಪ್ರತಿಭಟನೆಗೆ ಕುಳಿತ ಸ್ಟುಡೆಂಟ್ಸ್

ದಾವಣಗೆರೆ: ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ದಾವಣಗೆರೆಯ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಇತ್ತೀಚೆಗೆ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಯ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಸದ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗ್ತಿದೆ. ಆದರೆ ಯಾವುದೇ ಕ್ಲಾಸ್​ ನಡೆಸದೇ ಕೇವಲ ಎರಡು ತಿಂಗಳ ಆನ್ಲೈನ್ ಕ್ಲಾಸ್ ಮಾಡಿದ್ದು ಮತ್ತು ಎರಡು ತಿಂಗಳ ಅಂತರದಲ್ಲಿ ಎರಡು ಸೆಮ್ ಗಳ ಪರೀಕ್ಷೆ ನಡೆಸುತ್ತಿರೋದಕ್ಕೆ …

Read More »

ಪೊಲೀಸ್‌ ಮಕ್ಕಳ ಅಧ್ಯನಕ್ಕೆ ಗ್ರಂಥಾಲಯ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಹಳೇ ಸಶಸ್ತ್ರ ಮೀಸಲು ಮೈದಾನದ ಕಟ್ಟಡದಲ್ಲಿ ಪೊಲೀಸ್‌ ಸಿಬ್ಬಂದಿ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ನೂತನ ಗ್ರಂಥಾಲಯ ತೆರೆಯಲಾಗಿದೆ. ಕನ್ನಡ, ಇಂಗ್ಲೀಷ ಭಾಷೆಯಲ್ಲಿರುವ 750 ಪುಸ್ತಕಗಳು ಲಭ್ಯವಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಆರಂಭಿಸಲಾಗಿದೆ. ಐಎಎಸ್‌, ಕೆಪಿಎಸ್‌, ಪಿಡಿಒ ಸೇರಿದಂತೆ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳು ಇಲ್ಲಿವೆ. ಏಕಕಾಲದಲ್ಲಿ 25 ಮಂದಿ ಕೂತು ಅಧ್ಯಯನ ನಡೆಸಲು ಅನುಕೂಲವಾಗುವಂತೆ …

Read More »

ಕೊಲೆ ಆರೋಪಿಯ ಮದುವೆಗೆ ಪೊಲೀಸರು ಹಾಜರ್.. ಕಡ್ಡಾಯ ರಜೆ ಶಿಕ್ಷೆ ಕೊಟ್ಟ ಎಸ್​ಪಿ

ಕೊಪ್ಪಳ: ಜಾಮೀನಿನ ಮೇಲೆ ಹೊರ ಬಂದ ಕೊಲೆ ಆರೋಪಿಯ ಮದುವೆಯಲ್ಲಿ ಭಾಗವಹಿಸಿದ ಪೊಲೀಸ್​ ಅಧಿಕಾರಿಗಳಿಗೆ ಎಸ್​ಪಿ ಕಡ್ಡಾಯ ರಜೆ ಶಿಕ್ಷೆ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.     ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ್ ನಾಯಕನ ಮಗ, ಮಹಾಂತೇಶ್ ನಾಯಕ ಕೂಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದ್ದು ಕಳೆದ ಎರಡು ದಿನಗಳ ಹಿಂದೆ ಕನಕಗಿರಿ ತಾಲೂಕಿನ, ಹುಲಿಹೈದರ್ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಈ ಮದುವೆಯಲ್ಲಿ ಗಂಗಾವತಿ ಡಿವೈಎಸ್​ಪಿ …

Read More »

ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

ನವದೆಹಲಿ: ಆಕೆ ಇನ್ನೂ ಕಾಲೇಜಿನ ಮೆಟ್ಟಿಲೇರಿದ ದಿನಗಳವು. ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿದು, ತಾನಿಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಬೇಕೆಂಬ ಆಸೆ ಆಕೆಗಿತ್ತು. ಆದರೆ, ಮನೆಯಲ್ಲಿ ಆಕೆಗೆ ಇಷ್ಟವಿಲ್ಲದಿದ್ದರೂ 18ನೇ ವಯಸ್ಸಿಗೆ ಮದುವೆ ಮಾಡಿದ್ದರು. ಆದರೆ, ಆಕೆಯ ಮನಸಿನಲ್ಲಿ ಆತನಿಗೆ ಜಾಗವಿರಲಿಲ್ಲ. ಹೀಗಾಗಿ, ತನ್ನ ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನು ಕೊಲೆ (Murder) ಮಾಡಿದ್ದ ಆಕೆ ಆತನ ಶವವನ್ನು (Dead Body) ಸುಟ್ಟು ಹಾಕಿದ್ದಳು. ಅದೆಲ್ಲ ಆಗಿ ಬರೋಬ್ಬರಿ 10 …

Read More »

ಬೆಳಗಾವಿ ಜಿಲ್ಲಾ ಪೋಲೀಸರು ಬಕ್ರೀದ್ ಹಬ್ಬದ ಮುನ್ನಾದಿನ 209 ಆಕಳು ಕರುಗಳನ್ನು ರಕ್ಷಿಸಿದ್ದಾರೆ‌

ಬೆಳಗಾವಿ- ಬಕ್ರೀದ್ ಹಬ್ಬಕ್ಕಾಗಿ ಮಾರಾಟ ಮಾಡಲು ತರಲಾಗಿದ್ದ 209 ಆಕಳು ಕರುಗಳನ್ನು ರಾಯಬಾಗ ಪೋಲೀಸರು ವಶಪಡಿಸಿಕೊಂಡಿದ್ದಾರೆ. ರಾಯಬಾಗ ಪಟ್ಟಣದ ಸಾಯಿನಗರದಲ್ಲಿರುವ ಇಮ್ತಿಯಾಜ್ ಬೇಪಾರಿ ಜಾತಿ ಬೆಪಾರಿ ಎಂಬಾತ ನಡೆಸುತ್ತಿದ್ದ ಖಾಸಾಯಿ ಖಾನೆಗೆ ಸುಮಾರು 209 ದನಗಳು (ಆಕಳುಕರುಗಳು ಹಾಗೂ ಎಮ್ಮೆಕರುಗಳು) ಗಳನ್ನು ಬಕ್ರೀದ್ ಹಬ್ಬದ ನಿಮಿತ್ಯ ಕಸಾಯಿ ಖಾನೆಗೆ ತೆಗೆದುಕೊಂಡು ಬಂದಿದ್ದನ್ನು ರಾಯಭಾಗ ಪೊಲೀಸರು ತಮ್ಮ ವಶಕ್ಕೆ ತಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಆಕಳುಕರು,ಹಾಗು ಎಮ್ಮೆಗಳನ್ನು ನಸುಕಿನ ಜಾವ ಬೆಳಗಾವಿ, ಸದಲಗಾ ಹಾಗೂ …

Read More »