Breaking News

ರಾಜ್ಯ

ಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜೊತೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್‌ ಕಟೀಲ್‌ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. …

Read More »

ಮೈಸೂರು: ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ?

ಮೈಸೂರು: ಸಂಶೋಧನ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಂತ್ರಸ್ತೆ ಹಾಗೂ ಆರೋಪಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಮಚಂದ್ರಪ್ಪ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಇವರ ಪತ್ನಿ ಇದೇ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕಿ. ಸಂತ್ರಸ್ತೆಯು ರಾಮಚಂದ್ರಪ್ಪರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದು, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ …

Read More »

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸಾರ್ವಕಾಲಿಕ 54,717ಕ್ಕೆ ಏರಿಕೆ, ನಿಫ್ಟಿ ಜಿಗಿತ

ಮುಂಬಯಿ: ಮುಂಬಯಿ ಷೇರುಪೇಟೆಯ ವಹಿವಾಟು ಸತತ ಎರಡನೇ ದಿನವಾದ ಗುರುವಾರ(ಆಗಸ್ಟ್ 05) ಕೂಡಾ 123.07 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.   ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 123.07 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 54,717.24 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 35.80 ಅಂಕ …

Read More »

ಸುಳೆಭಾವಿ ಗ್ರಾಮದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಭೇಟಿ ನೀಡಿದ ಡಾ. ಸೋನಾಲಿ ಸರ್ನೋಬತ್,

ಇಂದು 2021 ಆಗಸ್ಟ್ 7ರಂದು ಜವಳಿ ದಿನವನ್ನು ಆಚರಿಸಲು ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾದ ವತಿಯಿಂದ ಡಾ. ಸೋನಾಲಿ ಸರ್ನೋಬತ್, ಶ್ರೀಮತಿ ಜ್ಯೋತಿ ಕುಲಕರ್ಣಿ ಮತ್ತು ಶ್ರೀಮತಿ ಚೇತನಾ ಅಗಸಗೇಕರ್ ಮತ್ತು ಕಾರ್ಯಕರ್ತೆಯರು ಸುಳೆಭಾವಿ ಗ್ರಾಮದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಭೇಟಿ ನೀಡಿದರು. ಏತನ್ಮಧ್ಯೆ ಅಂಗನವಾಡಿ ಶಿಕ್ಷಕಿಯರ ಅಗಾಧವಾದ ಕೆಲಸವನ್ನು ಕಡೆಗಣಿಸಲಾಗಿದೆ. ನಾವು ಆಶಾ ಕಾರ್ಯಕರ್ತೆಯರು ಕೆಲಸ ಮಾಡುವುದನ್ನು ಮಾತ್ರ ಗಮನಿಸುತ್ತೇವೆ.ಆದರೆ ಅಂಗನವಾಡಿಯ ಶಿಕ್ಷಕಿಯಾರು ಸಹ ಶ್ರದ್ಧೆಯಿಂದ …

Read More »

ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ

ಚಂದ್ರಶೇಖರ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಕಾರಿ ಅಂಶಗಳ ಬಗ್ಗೆ ಬಳಕೆದಾರರರಿಂದ ವಿವಿಧ ದೂರುಗಳನ್ನು ಸರ್ಕಾರ ಸ್ವೀಕರಿಸಿದ್ದು, ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ, ಸದ್ಯ ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯ ಫ್ಲಾಟ್ ಫಾರಂಗಳನ್ನು ನಿರ್ಬಂಧಿಸುತ್ತಿಲ್ಲ ಎಂದು ಅವರು ಹೇಳಿದರು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ದೇಶದ ರಕ್ಷಣೆ, ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವ ವಿದೇಶಗಳೊಂದಿಗೆ ಸ್ನೇಹಪೂರ್ವಕ ಸಂಬಂಧ ಅಥವಾ ಕಾನೂನು ಹಿತದೃಷ್ಟಿಯಿಂದ ದುರುದ್ದೇಶಪೂರಿತ ಆನ್‌ಲೈನ್ …

Read More »

ದೂರವಾಣಿ ಮೂಲಕ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ : ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿರುವ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಂಡು ವರದಿ ಸಲ್ಲಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಪ್ರವಾಹ ಬಾಧಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಸಾರ್ವಜನಿಕ ದೂರುಗಳು ಬರದ ರೀತಿಯಲ್ಲಿ …

Read More »

ಟೀ ಶರ್ಟ್, ಬರ್ಮುಡಾ ಧರಿಸಿ ಮಧ್ಯರಾತ್ರಿ ಠಾಣೆಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ; ಗುರುತು ತಿಳಿಯದೇ ಸಿಬ್ಬಂದಿ ತಬ್ಬಿಬ್ಬು

ತುಮಕೂರು: ಟೀ ಶರ್ಟ್, ಬರ್ಮುಡಾ ಧರಿಸಿ ಅಪರಿಚಿತ ದೂರುದಾರರಂತೆ ಪೊಲೀಸ್ ಠಾಣೆಗೆ ತೆರಳಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್, (Tumkur SP) ಠಾಣೆಯ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಹೊರವಲಯದ ಮಹಿಳಾ ಠಾಣೆ ಪರಿಶೀಲನೆ ನಡೆಸಿದ ಅವರ ವೇಶ ಭೂಷಣ ಗಮನಿಸಿ ದೂರುದಾರ ಎಂದೇ ಠಾಣೆಯ ಸಿಬ್ಬಂದಿ ಭಾವಿಸಿದ್ದರು. ಆದರೆ ಕೆಲಹೊತ್ತಿನ ಬಳಿಕ ಟೀ ಶರ್ಟ್ ಮತ್ತು ಬರ್ಮುಡಾ ಧರಿಸಿ ಬಂದವರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಎಂದು ತಿಳಿದ ಪೊಲೀಸ್ …

Read More »

ಪತ್ನಿಗೆ ಗೌರವ ನೀಡದಿದ್ದಲ್ಲಿ ಜೈಲು – ಪತಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ದಂಪತಿ ಕಲಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪತಿಗೆ ಛೀಮಾರಿ ಹಾಕಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ. ಪತ್ನಿಗೆ ಗೌರವ ಕೊಡದೆ ಹೋದಲ್ಲಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ. ಪತಿ ವರ್ತನೆ ಮೇಲೆ ನಿಗಾ ಇಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಬಿಹಾರದ ರಾಜಧಾನಿ ಪಾಟ್ನಾದ ವ್ಯಕ್ತಿಯೊಬ್ಬನ ಅರ್ಜಿ ವಿಚಾರಣೆ ಮಾಡಿದೆ. ಈ ವೇಳೆ …

Read More »

ದಿನಗೂಲಿ ಕಾರ್ಮಿಕರೂ ತೆರಿಗೆ ಕಟ್ಟುತ್ತಾರೆ’; ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ​ ತುಂಬದ ಧನುಷ್​ಗೆ ಕೋರ್ಟ್​​ ಛೀಮಾರಿ

ತೆರಿಗೆ ತುಂಬದೇ ಐಷಾರಾಮಿ ಕಾರನ್ನು ಓಡಿಸಿದ ತಮಿಳು ನಟ ದಳಪತಿ ವಿಜಯ್​ಗೆ ಕೋರ್ಟ್​ ಛೀಮಾರಿ ಹಾಕಿತ್ತು. ಈಗ ನಟ ಧನುಷ್​ ಸರದಿ. ಅವರು ಆಮದು ಮಾಡಿಕೊಂಡ ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ ವಿನಾಯಿತಿ ನೀಡುವಂತೆ 2015ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಹಿಂಪಡೆಯಲು ಕೋರ್ಟ್​ ನಿರಾಕರಿಸಿದೆ. ಅಲ್ಲದೆ, ಧನುಷ್​ಗೆ ಈ ವಿಚಾರದಲ್ಲಿ ಕಿವಿ ಮಾತು ಕೂಡ ಹೇಳಿದೆ. 2015ರಲ್ಲಿ ಧನುಷ್​ ರೋಲ್ಸ್​ ರಾಯ್ಸ್​ ಕಾರನ್ನು ವಿದೇಶದಿಂದ ಆಮದು …

Read More »

ಜಮೀರ್ ನಿವಾಸದ ಮುಂದೆ ಬೆಂಬಲಿಗರ ಕಣ್ಣೀರು; ಶಿವಮೊಗ್ಗದಲ್ಲಿ ಪ್ರತಿಭಟನೆ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು ಒಂಬತ್ತು ಗಂಟೆಯಿಂದ ನಿರಂತರವಾಗಿ ಶೋಧ ಮುಂದುವರಿದಿದೆ. ಕಾರ್ಯಕರ್ತರು ಶಾಸಕರ ಮನೆ ಮುಂದೆ ಜಮಾಯಿಸಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಕಾಂಗ್ರೆಸ್ನವರ ಮೇಲೆ ಮಾತ್ರ ದಾಳಿ ಆಗುತ್ತಿದೆ. ಬಿಜೆಪಿ ಅವರ ಮೇಲೆ ಯಾಕೆ ಇಡಿ ದಾಳಿ ಆಗಲ್ಲ ಅಂತ ಮಹಿಳಾ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. …

Read More »