ರಾಯಬಾಗ : ಬಕ್ರೀದ್ (ಜುಲೈ 10) ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಕುರಿ, ಮೇಕೆ, ಕೋಳಿಗಳ ಸಂತೆಯಲ್ಲಿ ಈಗ ಜನಜಂಗುಳಿ ಉಂಟಾಗಿದೆ. ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಆದರೆ, ಈಗ ತರಕಾರಿ, ಕಾಳು, ಹಣ್ಣುಗಳ ಮಾರಾಟಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಕುರಿ, ಮೇಕೆಗಳು. ಪಟ್ಟಣ ಹೊರವಲಯದ ಬ್ಯಾಕುಡ ರಸ್ತೆಯಲ್ಲಿ ಈ ಕುರಿ- ಮೇಕೆ ಸಂತೆ ಸೇರು ತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಕುರಿ- ಮೇಕೆ ಮಾರಲು ಬರುತ್ತಾರೆ. …
Read More »ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಎಲ್ಲೆಂದರಲ್ಲಿ ತಗ್ಗು ,ಅಪಾಯಕ್ಕೆ ಆಹ್ವಾನ
ಬೆಳಗಾವಿ: ಮತ್ತೊಂದು ಮಳೆಗಾಲ ಬಂದರೂ ಹಳ್ಳಿಗಳ ಸಂಪರ್ಕ ರಸ್ತೆಗಳು ಮಾತ್ರ ಇನ್ನೂ ದುರಸ್ತಿ ಕಂಡಿಲ್ಲ. ಕಳೆದ ಬಾರಿಯ ಅತಿವೃಷ್ಟಿ ಹಾಗೂ ಪ್ರವಾಹ ಪ್ರಭಾವದಿಂದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಎಲ್ಲೆಂದರಲ್ಲಿ ತಗ್ಗು ಬಿದ್ದಿದ್ದವು. ಅವುಗಳಲ್ಲಿ ಕೆಲವನ್ನು ತೇಪೆ ಹಚ್ಚಿ ದುರಸ್ತಿ ಮಾಡಲಾಗಿದೆ. ಮತ್ತೆ ಕೆಲವು ಇನ್ನೂ ಹಾಗೇ ಇವೆ. ಹೀಗಾಗಿ, ಹಳ್ಳಿ ಮತ್ತು ನಗರಗಳ ಮಧ್ಯೆ ಸಂಚಾರ ಕೊಂಡಿಯಾದ ರಸ್ತೆಗಳೇ ಈಗ ಸಂಚಕಾರ ತರುವಂತಾಗಿವೆ. ಅತಿಯಾಗಿ ಮಳೆ ಬಿದ್ದ ಬೆಳಗಾವಿ ತಾಲ್ಲೂಕು, …
Read More »ಬೆಳಗಾವಿಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿರುವುದು ಕಂಡು ಗ್ರಾಮಸ್ಥರು ದಿಗ್ಭ್ರಮೆ
ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಬಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದು, ಮಂಗಳವಾರ ದೇಹ ತೇಲುತ್ತಿರುವುದು ಕಂಡು ಗ್ರಾಮಸ್ಥರು ದಿಗ್ಭ್ರಮೆಯಾಗಿದ್ದಾರೆ. ಸುಮಾರು 30 ವರ್ಷದ ಯುವಕನನ್ನು ಶಿರಚ್ಛೇದ ಮಾಡಿ ಕೊಲೆಗೈದು ರುಂಡ ಬೇರ್ಪಡಿಸಿ ದೇಹವನ್ನು ದುಷ್ಕರ್ಮಿಗಳು ಬಾವಿಯಲ್ಲಿ ಎಸೆದು ಹೋಗಿದ್ದಾರೆ. ಬೆಳಗ್ಗೆ ಹೊಲಕ್ಕೆ ಹೋದ ಗ್ರಾಮಸ್ಥರು ಇದನ್ನು ಕಂಡು ಆತಂಕಗೊಂಡಿದ್ದಾರೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ ಅಷ್ಟೇಕರ ಎಂಬವರ ಹೊಲದ ಬಾವಿಯಲ್ಲಿ ರುಂಡ ಇಲ್ಲದ …
Read More »ಸರ್ಕಾರಿ ಬ್ಯಾಂಕ್ಗಳ 2,044 ಶಾಖೆ ಬಂದ್, 13,000 ನೌಕರರು ಮನೆಗೆ ಕಾರಣ ಏನು ಗೊತ್ತಾ?
ನವದೆಹಲಿ: ಭಾರತೀಯ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ 2,044 ಶಾಖೆಗಳು ಮತ್ತು ಸುಮಾರು 13,000 ಉದ್ಯೋಗಿಗಳನ್ನು ಕಡಿತಗೊಳಿಸಿವೆ ಎಂದು ಪ್ರಮುಖ ಬ್ಯಾಂಕ್ ನೌಕರರ ಒಕ್ಕೂಟ ಭಾನುವಾರ ತಿಳಿಸಿದೆ. ಮತ್ತೊಂದೆಡೆ, 2021 ಕ್ಕೆ ಹೋಲಿಸಿದರೆ 2022 ರಲ್ಲಿ ಖಾಸಗಿ ಬ್ಯಾಂಕುಗಳ ಶಾಖೆಗಳ ಸಂಖ್ಯೆ 4,023 ರಿಂದ 34,342 ಕ್ಕೆ ಏರಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ. ಖಾಸಗಿ ಬ್ಯಾಂಕುಗಳು 2021 …
Read More »ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಸತ್ಕರಿಸುವ ಕಾರ್ಯಕ್ರಮ
ಕೆ ಎಲ್ ಇ ಸಂಸ್ಥೆಯ ಜೆ ಎನ್ ಎಮ್ ಸಿ ಆಡಿಟೋರಿಯಂ ನಲ್ಲಿ ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿಯ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಸತ್ಕರಿಸುವ ಕಾರ್ಯಕ್ರಮ ಕೋವಿಡ್-19 ಸಮಯದಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ಕೊರೋನಾ ಸೋಂಕಿತರನ್ನು ರಕ್ಷಿಸಿ, ಅವರ ಸೇವೆಯಲ್ಲಿ ನಿರತರಾದ ಎಲ್ಲ ವಾರಿಯರ್ಸ್ ಗಳ ಸೇವೆಗಳನ್ನು ಪರಿಗಣಿಸಿ, ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿ ವತಿಯಿಂದ ಸತ್ಕರಿಸಲಾಯಿತು. ನಂತರ ಬಾಹು ಕದಂ ಹಾಗೂ ಭರತ್ ಗಣೇಶಪುರೆ ಇವರ …
Read More »ಯಮಕನಮರಡಿ ಮತಕ್ಷೇತ್ರದಲ್ಲಿ ಜೀವನ ಯೋಜನೆ ಅಂಗನವಾಡಿ ಶಾಲಾ ಕೊಠಡಿಯನ್ನು ಸತೀಶ್ ಜಾರಕಿಹೊಳಿಯವರು ಉದ್ಘಾಟನೆ ಮಾಡಿದ
ದಿನಾಂಕ 04-07-2022 ರಂದು ಕಲ್ಯಾಣ ಕರ್ನಾಟಕ ಕನಸುಗಾರ ಕೆಪಿಸಿಸಿ ಕಾರ್ಯಾಧ್ಯಕ್ಷರು ಜನಪ್ರಿಯ ಯಮಕನಮರಡಿ ಶಾಸಕರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿಯವರು ಅವರ ಶಾಸಕ ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ರಾಮದುರ್ಗ (ಉಕ್ಕಡ) ಗ್ರಾಮದಲ್ಲಿ ಜಲ ಜೀವನ ಯೋಜನೆ ಒಟ್ಟು 54 ಲಕ್ಷ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ನಂತರ 16 ಲಕ್ಷದ ಅವರ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಶಾಲಾ ಕೊಠಡಿಯನ್ನು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು …
Read More »ವಿವಾಹ ನೋಂದಣಿ ವೆಬ್‌ಸೈಟ್ ಮೂಲಕ ಮೋಸ: ಖತರ್ನಾಕ್ ವ್ಯಕ್ತಿ ಬಂಧಿಸಿದ ಪೊಲೀಸರು
ರಾಮನಗರ: ವಿವಾಹ ನೋಂದಣಿ ವೆಬ್‌ಸೈಟ್‌ನಲ್ಲಿ ಬೇರೆ ಯುವಕರ ಫೋಟೊ ಹಾಕಿ, ಮದುವೆ ಮಾಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಹಣ ಲಪಟಾಯಿಸುತ್ತಿದ್ದ ನವೀನ್ ವೈ ಸಿಂಗ್ ಎಂಬುವನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾತನಾಡಿ, ಕಳೆದ ಮಾರ್ಚ್ ತಿಂಗಳಿನಲ್ಲಿ ದೀಪಾ ಎಂಬುವವರು ರಾಮನಗರದ ಸಿಇಎನ್ ಕ್ರೈಂ ಠಾಣೆಯಲ್ಲಿ ನವೀನ್ ವೈ ಸಿಂಗ್ ಎಂಬುವವನ ವಿರುದ್ಧ ದೂರು ದಾಖಲು ಮಾಡಿದ್ದರು ಎಂದು ಹೇಳಿದರು. ನವೀನ್ ವಾಟ್ಸ್ಆ್ಯಪ್ …
Read More »ಸಿದ್ದರಾಮಯ್ಯ ಭೇಟಿಯಾದ ಸಿ.ಎಂ.ಇಬ್ರಾಹಿಂ
ಬೆಂಗಳೂರು : ನಾನು ಸಿದ್ದರಾಮೋತ್ಸವಕ್ಕೆ ಹೋಗುವುದಿಲ್ಲ, ಸಿದ್ದರಾಮಯ್ಯ ಎರಡನೇ ಮದುವೆ ಆದರೆ ಹೋಗುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇಬ್ರಾಹಿಂ ಅವರು ಸೋಮವಾರ ಮಗಳ ಮದುವೆಗೆ ಆಹ್ವಾನ ನೀಡುವ ಸಲುವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿ, ಬೇರೆ ಯಾವ ವಿಚಾರವನ್ನೂ ಮಾತನಾಡಲಿಲ್ಲ, ಆಮಂತ್ರಣ ನೀಡಲು ಬಂದಿದ್ದೆ ಎಂದರು. ಸಿದ್ದರಾಮೋತ್ಸವಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ಈಗ ಬೇರೆ ಕಂಪನಿ.ಹೀಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗುವುದಿಲ್ಲ.ಕಾರ್ಯಕ್ರಮಕ್ಕೆ ಆಹ್ವಾನ …
Read More »ಪಿಎಸ್‌ಐ ಅಕ್ರಮ: ಬೀಗದ ಕೀ ಕೊಟ್ಟು ಸಿಕ್ಕಿಬಿದ್ದ ಪೌಲ್
ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯ ಒಎಂಆರ್ ಪ್ರತಿಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬೀಗದ ಕೀಯನ್ನು ತನ್ನ ಕೈಕೆಳಗಿನ ನೌಕರರಿಗೆ ನೀಡಿ, ಅವರ ಮೂಲಕವೇ ಉತ್ತರ ಪತ್ರಿಕೆಗಳನ್ನು ತಿದ್ದಿಸಿರುವ ಕೃತ್ಯದಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟ ಬೆನ್ನಲ್ಲೇ, ಸಿಐಡಿ ಪೌಲ್ ಅವರನ್ನು ಸೋಮವಾರ ಬಂಧಿಸಿದೆ. ರಾಜ್ಯದ ಇತಿಹಾಸದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಎಡಿಜಿಪಿ) ದರ್ಜೆಯ ಐಪಿಎಸ್ ಅಧಿಕಾರಿ ಅಪರಾಧ ಪ್ರಕರಣವೊಂದರಲ್ಲಿ ಬಂಧಿರಾಗಿರುವುದು ಇದೇ ಮೊದಲು. …
Read More »ಹೆಂಡತಿ ಶವ ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ: ಇಬ್ಬರ ಬಂಧನ
ಬೆಂಗಳೂರು: ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿ ಕೆರೆಯಲ್ಲಿ ಇದೇ ತಿಂಗಳ 14ರಂದು ಸೂಟ್ಕೇಸ್ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿದ್ದ 35 ವರ್ಷದ ಮಹಿಳೆ ಮಂಜುಳ ಮೃತದೇಹ ಎಂದು ತಿಳಿದು ಬಂದಿದೆ. ಹೆಂಡತಿ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ ಕಳೆದ ಎರಡು ವರ್ಷದ ಹಿಂದೆ ಈಕೆಯನ್ನು …
Read More »
Laxmi News 24×7