ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಬೆಂಗಳೂರು ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿದೆ. ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ ಎಂದು ಸಂಘವು ಜನವರಿ 28 ರಂದು ಬರೆದ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ. ವಕೀಲರ ಕೋಟಾದಡಿ ಇತ್ತೀಚೆಗೆ ಶಿಫಾರಸು ಮಾಡಲಾದ 10 ಅಭ್ಯರ್ಥಿಗಳಲ್ಲಿ ಒಬ್ಬರೂ ಒಬಿಸಿ ಅಥವಾ …
Read More »ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ
ಬೆಂಗಳೂರು: ಪ್ರಕರಣವೊಂದರಿಂದ ಕೈಬಿಡಲು 5 ಲಕ್ಷಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಕೆ.ಪಿ. ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್‌ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್‌ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್‌ಗೆ ಒಳಗಾದವರು. ಟ್ರ್ಯಾಪ್‌ಗೂ ಮುನ್ನ ಆರೋಪಿಗಳ ಬಂಧನಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದರು. ಪ್ಲಾಟ್‌ನಲ್ಲಿ ಆರೋಪಿಗಳು ಪ್ರತಿರೋಧ ತೋರಿದ್ದರು. ಪೊಲೀಸರು ಮನೆಗೆ ಬರುವ ಸಿಸಿಟಿವಿ ಹಾಗೂ ವೀಡಿಯೋ ಮಾಡಿದ್ದರು. ‘ನೋಟಿಸ್ ಕೊಡದೇ ಬಂದಿದ್ದೀರಾ, ನಾವು ಲಾಯರ್ ಬಳಿ ಮಾತನಾಡುತ್ತೇವೆ’ …
Read More »ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು: ಡಿ.ಕೆ.ಶಿವಕುಮಾರ್
ಶಿವಮೊಗ್ಗ: ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೇವೆ ಎನ್ನುವುದೇ ಸಂತೋಷ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ – 2026 ಕಾರ್ಯಕ್ರಮದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದ ಅವರು, ನಾನು ಇಂದು ಬರುವಂತೆಯೇ ಇರಲಿಲ್ಲ. ಆದರೆ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕರೆದಿದ್ದರು. ಆದರೆ ಬರಲು ಆಗಿರಲಿಲ್ಲ. ಇಂದು ಸರ್ವಧರ್ಮ ಸಭೆಗೆ ಸಂತೋಷದಿಂದ ಬಂದಿದ್ದೇನೆ ಎಂದರು. ಶ್ರಮಪಟ್ಟಾಗ ಮಾತ್ರ …
Read More »ಎತ್ತಿನಹೊಳೆ ಯೋಜನೆ ಮೇಲಿನ ಸಿಎಜಿ ವರದಿ ಮಂಡನೆ ಮಾಡಲಾಗಿದ್ದು, ಹಣಕಾಸು ಅನಿಶ್ಚಿತತೆ, ವಿಳಂಬ ಹಾಗೂ ನ್ಯೂನತೆಗಳ ಬಗ್ಗೆ ತಿಳಿಸಲಾಗಿದೆ.
ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಲ್ಲಿ 15.297 ಕೋಟಿ ರೂ.ಗಳಷ್ಟು ದೊಡ್ಡ ವೆಚ್ಚದ ಹೊರತಾಗಿಯೂ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವು ಈಡೇರಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ವಿಧಾನಸಭೆಯಲ್ಲಿ ಮಂಡಿಸಲಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಕುರಿತ ಸಿಎಜಿ ವರದಿಯು ಹಲವು ನ್ಯೂನತೆ, ದೋಷಗಳನ್ನು ಉಲ್ಲೇಖಿಸಿದೆ. ಸಮತೋಲನ ಜಲಾಶಯದ ಸ್ಥಳ ಮತ್ತು ಸಾಮರ್ಥ್ಯವನ್ನು ಅಂತಿಮಗೊಳಿಸುವಲ್ಲಿ ಅತಿಯಾದ ವಿಳಂಬ, …
Read More »ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವ ಆಗಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ
ಬೆಂಗಳೂರು: ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವವಾಗಿಲ್ಲ ಎಂದು ತಮ್ಮ ರಾಜೀನಾಮೆ ವದಂತಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ವಿಧಾನಸಭೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಕಲಾಪ ನಡೆಯುತ್ತಿರುವಾಗ ವಿಚಾರ ಎತ್ತಿದ ಶಾಸಕ ಸುನೀಲ್ ಕುಮಾರ್, ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ಬರ್ತಿದೆ. ಸದನದಲ್ಲೇ ಸಚಿವ ಜಾರ್ಜ್ ಇದ್ದಾರೆ. ಸಿಎಂ ಮಗನ ಹಸ್ತಕ್ಷೇಪ ಜಾಸ್ತಿ ಆಗಿದೆ ಅಂತ ರಾಜೀನಾಮೆ ಕೊಟ್ಟಿದ್ದಾರೆ ಅಂತ ಬರ್ತಿದೆ, ಜಾರ್ಜ್ ಅವರು ಸ್ಪಷ್ಟನೆ ಕೊಡಿ …
Read More »ಬಳ್ಳಾರಿ ನಗರದ ಬೀದಿ ಬೀದಿಯಲ್ಲೂ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿದ್ದಾರೆ: ಜನಾರ್ದನ ರೆಡ್ಡಿ ಕಳವಳ
ಬೆಂಗಳೂರು: ಬಳ್ಳಾರಿ ನಗರದ ಬೀದಿ ಬೀದಿಯಲ್ಲೂ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿಂದು ಬಳ್ಳಾರಿ ಫೈರಿಂಗ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣ ಇಲ್ಲಿಗೇ ಬಿಡಲ್ಲ, ಹೋರಾಟ ಮಾಡ್ತೀನಿ. ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಗರದ ವಾರ್ಡ್ ವಾರ್ಡ್ಗಳಲ್ಲಿ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿ ಹೋಗಿದ್ದಾರೆ. ಎಲ್ಲದ್ದಕ್ಕೂ ಅಕ್ರಮವಾಗಿ ಸುಲಭವಾಗಿ ಹಣಗಳಿಸ್ತಿರೋದೇ ಕಾರಣ. ಜನಾರ್ದನ ರೆಡ್ಡಿ ಕುಟುಂಬ ಅಂತ್ಯ ಮಾಡಲು …
Read More »17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ
ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ನಡೆದ ಚಲನಚಿತ್ರೋತ್ಸವವನ್ನು ದೀಪ ಬೆಳಗುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಇದೇ ವೇಳೆ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರು ಥೀಮ್ ಬಿಡುಗಡೆ ಮಾಡಿದರು. `ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎಂಬ ಧ್ಯೇಯ ವಾಕ್ಯದೊಂದಿಗೆ ಚಿತ್ರೋತ್ಸವ ಪ್ರಾರಂಭವಾಗಿದೆ. ನಾಳೆಯಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದ್ದು, ಫೆ.6ರವರೆಗೆ 65 ದೇಶಗಳ 225 ಚಿತ್ರಗಳು ಪ್ರದರ್ಶನವಾಗಲಿವೆ. …
Read More »ಜಿ ರಾಮ್ ಜಿ ಕಾಯ್ದೆ ಮೂಲಕ ಮಹಾತ್ಮ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ: ಡಿಕೆಶಿ
ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜಿ ರಾಮ್ ಜಿ ನೂತನ ಕಾಯ್ದೆ ಮೂಲಕ ಮಹಾತ್ಮ ಗಾಂಧಿ ಹಾಗೂ ಕಾರ್ಮಿಕರ ಬದುಕನ್ನು ಸಾಯಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಜಿಲ್ಲೆಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳ ಜೊತೆ ಮನರೇಗಾ ವಿಚಾರದ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿ ಮನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ವಿಚಾರದಲ್ಲಿ ಕಾಯ್ದೆಗಳನ್ನು ಯಾವ ರೀತಿ ಹಿಂಪಡೆದರೋ ಅದೇ ರೀತಿ ಇದನ್ನು ಹಿಂಪಡೆಯಬೇಕು. 6-7 ಸಾವಿರ ಕೋಟಿ …
Read More »ಕರ್ನಾಟಕ ಪೊಲೀಸರಿಗೆ ರಜೆ ಭಾಗ್ಯ – ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ
ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ಸದಾ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ರಾಜ್ಯ ಪೊಲೀಸ್ ಸಿಬ್ಬಂದಿಗೆ ರಾಜ್ಯ ಪೊಲೀಸ್ ಇಲಾಖೆ ಕುಟುಂಬದೊಂದಿಗೆ ಸಂತಸದ ಸಮಯ ಕಳೆಯಲು ರಜೆ ಭಾಗ್ಯ ಕಲ್ಪಿಸಿದೆ. ಹೌದು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು …
Read More »ಸರ್ಕಾರದಿಂದ ಮಹತ್ವದ ಆದೇಶ: ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ, ನೌಕರರು ಸ್ವಯಂ …
Read More »
Laxmi News 24×7