Breaking News

ರಾಜ್ಯ

ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ

ಬೆಂಗಳೂರು: ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ ತೋರಿದ ಕೂಡಿಗೆಹಳ್ಳಿ ಠಾಣೆ ಪೊಲೀಸ್ ಇನಸ್ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದೆ. ರಾಜಣ್ಣ ಅಮಾನತುಗೊಂಡವ. ಪ್ರಕರಣವೊಂದರ ಸಂಬಂಧ ದೂರು ನೀಡಲು ಠಾಣೆಗೆ ಬಂದಿದ್ದ ಯುವತಿಯ ಮೊಬೈಲ್ ಸಂಖ್ಯೆ ಪಡೆದಿದ್ದ ರಾಜಣ್ಣ, ನಂತರ ಆಕೆಯೊಂದಿಗೆ ಅಸಭ್ಯ ಚಾಟಿಂಗ್ ಮಾಡಿದ್ದ. ಇನ್ನೊಮ್ಮೆ ಠಾಣೆಗೆ ಕರೆಸಿ ಡ್ರೈ ಫ್ರುಟ್ ಬಾಕ್ಸ್ ನೀಡಿ ತನ್ನ ರೂಮ್ ಗೆ ಬರುವಂತೆ ಕರೆದಿದ್ದ. ರಾಜಣ್ಣನ ವರ್ತನೆಯಿಂದ ಬೇಸತ್ತ ಯುವತಿ ದಾಖಲೆಗಳ ಸಮೇತ ಹಿರಿಯ …

Read More »

ಪೀರನವಾಡಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ 2.89 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತದೆ.

ಬೆಳಗಾವಿ: ಇಲ್ಲಿನ ಪೀರನವಾಡಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ 2.89 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತದೆ. ಚೆಕ್ ಪೋಸ್ಟ್ ಮೂಲಕ ಹೋಗುತ್ತಿದ್ದ ಇಂಡಿಕಾ ವಾಹನವನ್ನು ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡದ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ನಗದು ಹಣವನ್ನು ಖಜಾನೆಯಲ್ಲಿ ಜಮಾ ಮಾಡಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More »

ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

ರಾಮದುರ್ಗ: ಹಲಗತ್ತಿ ಗ್ರಾಮದಲ್ಲಿ ಯುಗಾದಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಗ್ರಾಮದ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ಮಾರ್ಚ್‌ 27ರಂದು ಅದ್ಧೂರಿಯಾಗಿ ಜರುಗಲಿದೆ. ಮಾರ್ಚ್‌ 22ರಂದು ಓಕುಳಿ ಹೊಂಡ ಪೂಜೆ ನೆರವೇರುವುದು. ನಂತರ ಮೂರು ದಿನ ಬಣ್ಣದ ಓಕುಳಿ ವೈಭವದಿಂದ ನೆರವೇರಲಿದೆ.   ಮಲಪ್ರಭೆ ನದಿ ದಡದಲ್ಲಿರುವ ಹಲಗತ್ತಿ ಸುಂದರ ತಾಣ. ಬಸವಣ್ಣನ ಹರಕೆ ತೀರಿಸಲು ಸುತ್ತಲಿನ ಜನ ಭಕ್ತಿ ಭಾವದಿಂದ ಆಗಮಿಸುತ್ತಾರೆ. ಹೆಣ್ಣುಮಕ್ಕಳು ಗಂಡನ ಮನೆಯಿಂದ ಯುಗಾದಿ ಹಬ್ಬಕ್ಕೆಂದು ತವರಿಗೆ …

Read More »

ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಳೆದ ಭಾನುವಾರದಂದು ಸಿದ್ಧೇಶ್ವರ ಸ್ವಾಮಿಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ …

Read More »

24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

ಬೆಂಗಳೂರು: ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಡುವಂತೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆಯು ವಿಫಲವಾಗಿದ್ದು, ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬಳಿ ಚಾಲಕರು ಹಾಗೂ ನಿರ್ವಾಹಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು.   ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ, ಕರೆ ನೀಡಲಾಗಿರುವ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಮಂಗಳವಾರ ರಾತ್ರಿಯೇ ಚಾಲನೆ ದೊರೆಯಿತು. ಸರ್ಕಾರವು ಶೇ 15ರಷ್ಟು ವೇತನ ಹೆಚ್ಚಳಕ್ಕೆ …

Read More »

₹40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ, ಕಾನ್‌ಸ್ಟೆಬಲ್‌ ಬಂಧನ

ರಾಣೆಬೆನ್ನೂರು: ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿನ ಅಶೋಕನಗರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್‌ಸ್ಟೆಬಲ್‌ ಸಚಿನ್‌ ಓಲೇಕಾರ ಸಿಕ್ಕಿಬಿದ್ದವರು. ಇವರ ಜೊತೆಗೆ ಉಡುಪಿ ಟಿಸ್ಟಾಲ್‌ ಮಾಲೀಕ ಸಂತೋಷ್‌ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದೂರುದಾರ ಸಿದ್ಧೇಶ್ವರ ನಗರದ ಅಫ್ರೋಜ್‌ ಅಹ್ಮದ್‌ ನೂರ ಅಹ್ಮದ್‌ಸಾಬ್‌ ಊದಗಟ್ಟಿ ಅವರಿಗೆ …

Read More »

ಪೊಲೀಸರ ಮೇಲೇ ಹಲ್ಲೆಗೆ ಮುಂದಾದ ದರೋಡೆಕೋರರು

ಬೀದರ್: ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ದರೋಡೆಕೋರರು ಹಲ್ಲೆ ಮಾಡಲು ಮುಂದಾಗಿದ್ದು, ಬಳಿಕ ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್​ ಗುಂಡು ಹಾರಿಸಬೇಕಾದ ಪ್ರಸಂಗ ಎದುರಾಗಿತ್ತು. ಬೀದರ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.   ಇಲ್ಲಿನ ಮೈಕೂರ್​ನ ರಿಂಗ್​ರೋಡ್​ನಲ್ಲಿ ಈ ಘಟನೆ ನಡೆದಿದೆ. ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರನ್ನು ತಮಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದ ಸಂದರ್ಭದಲ್ಲಿ ಈ ಹಲ್ಲೆಯತ್ನ ನಡೆದಿದೆ.   ಇಬ್ಬರು ದರೋಡೆಕೋರರು …

Read More »

ಯುಗಾದಿ.. ಅರ್ಥ ಆಚರಣೆ ವಿಶ್ಲೇಷಣೆ

ಭಾರತೀಯ ಸಂಸ್ಕೃತಿಯೇ ಹಾಗೆ! ಜೀವನವನ್ನು, ಮನುಷ್ಯನನ್ನು, ಜೀವನಕ್ರಮವನ್ನು, ಜೀವನಕ್ಕೆ ಆಶ್ರಯ, ಪುಷ್ಟಿ, ತುಷ್ಟಿಗಳನ್ನು ನೀಡುವ ಭೂಮಿ, ನೀರು, ಆಕಾಶ, ಗಾಳಿಗಳನ್ನು, ಇದಕ್ಕೆ ಆಧಾರವಾಗಿ ನಿಲ್ಲುವ ದೇಶ, ಮಾತಾಪಿತೃಗಳು, ಗುರುಹಿರಿಯರು, ರಾಜ, ಪಶುಪಕ್ಷಿಗಳನ್ನು ದೈವೀಕರಿಸಿ ಉದಾತ್ತೀಕರಿಸಿ ಇವುಗಳೆಡೆಗೆ ಉತ್ಸಾಹ, ಹುಮ್ಮಸ್ಸುಗಳು ಪ್ರತಿನಿತ್ಯವೂ ಧುಮ್ಮಿಕ್ಕುವಂತೆ ಇದು ಮಾಡುವುದರ ಪರಿಯನ್ನು ನೋಡಿಯೇ ತಿಳಿಯಬೇಕು. ವೇದಗಳಲ್ಲಿ ಬರುವ ಈ ಜೀವನೋತ್ಸಾಹ ಮತ್ತೆಲ್ಲಿ ಕಾಣಲಾದೀತು! ಪಶ್ಯೇಮ ಶರದಃ ಶತಂ| ಜೀವೇಮ ಶರದಃ ಶತಂ | ಶೃಣುಯಾಮ ಶರದಃ …

Read More »

ಬೆಳಗಾವಿಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ

ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬುಧವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 125 – 150 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು. ಇದರಲ್ಲಿ ಬೆಳಗಾವಿ ಜಿಲ್ಲೆಯ 12-14 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯ 2 -4 ಕಡೆಗಳಲ್ಲಿ ಅಚ್ಛರಿಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ. ಬೆಳಗಾವಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ ಇಲ್ಲಿದೆ: ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ …

Read More »

ಸಿಆರ್‌ಪಿಎಫ್‌ನಲ್ಲಿ 9,212 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಮೆಟ್ರಿಕುಲೇಷನ್ ಅಥವಾ 10 ನೇ ತರಗತಿ ಮುಗಿಸಿ ವಿವಿಧ ಕೌಶಲ್ಯ ಹೊಂದಿರುವವರಿಗೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನೇಮಕಾತಿಗೆ ಚಾಲನೆ ನೀಡಲಾಗಿದೆ. ಸಿಆರ್‌ಪಿಎಫ್‌ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ‘ಟೆಕ್ನಿಷಿಯನ್’ ಹಾಗೂ ‘ಟ್ರೇಡ್ಸ್‌ಮನ್’ ಕಾನ್‌ಸ್ಟೆಬಲ್ ಎಂಬ ಒಟ್ಟು 9,212 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇದರಲ್ಲಿ 9,105 ಹುದ್ದೆಗಳು -ಪುರುಷರಿಗೆ ಹಾಗೂ 107 ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಹುದ್ದೆಗಳು ರಾಜ್ಯವಾರು ಹಂಚಿಕೆಯಾಗಿದ್ದು ಇದೇ ಮಾರ್ಚ್ 27 ರಿಂದ www.crpf.gov.in …

Read More »