Breaking News

ರಾಜ್ಯ

ಯಾರಿಗೆ ಯಾವ ಖಾತೆ? ಸಂಪೂರ್ಣ ವಿವರ..

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲ 34 ಜನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಸಿದ್ದರಾಮಯ್ಯ ನಿರೀಕ್ಷೆಯಂತೆ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆಗಳನ್ನು ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಸಚಿವರುರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ: ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಹಿರಿಯ ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಹಲವರು ಬೇಡಿಕೆ ಇಟ್ಟಿದ್ದರೂ ಸಹ ಅಂತಿಮವಾಗಿ ಅದನ್ನು ಡಿ.ಕೆ.ಶಿವಕುಮಾರ್ …

Read More »

ಅಥಣಿ ಸಬ್ ರಿಜಿಸ್ಟ್ರಾರ್​ ಕಚೇರಿಯಲ್ಲಿ ಲಂಚ ಆರೋಪ; ಅಧಿಕಾರಿಗೆ ತರಾಟೆ

ಚಿಕ್ಕೋಡಿ (ಬೆಳಗಾವಿ): ಪ್ರತಿಯೊಂದು ಕೆಲಸಕ್ಕೂ ರೈತರು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಬರುವ ಜನಸಾಮಾನ್ಯರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ರೈತರು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಂದು ನಡೆಯಿತು. ಸಬ್ ರಿಜಿಸ್ಟ್ರಾರ್ ಅವರು ಕಚೇರಿಗೆ ಬರುವ ರೈತರಿಂದ ಹೆಚ್ಚುವರಿ ಹಣ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೈತರು ಆಕ್ರೋಶ ಹೊರಹಾಕಿದರು. ಪ್ರತಿ ನೋಂದಣಿಗೂ 15 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿದೆ. …

Read More »

ಸಾಮಾನ್ಯ ಪಾಸ್‌ಪೋರ್ಟ್​ಗೆ ಅನುಮತಿ… ನಾಳೆ ಸಂಜೆ ಅಮೆರಿಕಕ್ಕೆ ರಾಹುಲ್ ಗಾಂಧಿ ಪಯಣ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಸಾಮಾನ್ಯ ಪಾಸ್​ಪೋರ್ಟ್​ ಸ್ವೀಕರಿಸಿದ್ದಾರೆ. ಶುಕ್ರವಾರ ದೆಹಲಿಯ ನ್ಯಾಯಾಲಯವು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿ ಮೂರು ವರ್ಷಗಳ ಅವಧಿಗೆ ಪಾಸ್‌ಪೋರ್ಟ್​ಗೆ ಒಪ್ಪಿಗೆ ನೀಡಿತ್ತು. ರಾಹುಲ್​ ಗಾಂಧಿ ಹತ್ತು ವರ್ಷಗಳ ಅವಧಿಯ ಪಾಸ್​ಪೋರ್ಟ್​ಗೆ ಮನವಿ ಮಾಡಿದ್ದರು. ಆದರೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮೂರು ವರ್ಷದ ಅವಧಿಗೆ ಪಾಸ್​ಪೋರ್ಟ್ ಲಭ್ಯವಾದ ಹಿನ್ನೆಲೆ ಸೋಮವಾರ ಸಂಜೆ ರಾಹುಲ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ …

Read More »

ಬಿರುಬಿಸಿಲಿಗೆ 10 ಸಾವಿರ ಎಕರೆಗೂ ಹೆಚ್ಚು ಕಬ್ಬು ನಾಶ

ಕಾಗವಾಡ: ತಾಲ್ಲೂಕಿನ ಉತ್ತರ ಭಾಗದಲ್ಲಿ ಹಳ್ಳಿಗಳಲ್ಲಿ ಬೇಸಿಗೆಯಿಂದ ನೀರಿನ ಅಭಾವ ಉಂಟಾಗಿ, ಹಲವು ಬೆಳೆಗಳು ಒಣಗುತ್ತಿವೆ. ಅದರಲ್ಲೂ ಸಾಕಷ್ಟು ಕಬ್ಬು ಬೆಳೆಗಾರರು ಕೈ ಸುಟ್ಟುಕೊಳ್ಳುವ ಆತಂಕ ಎದುರಾಗಿದೆ.   ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಹಳ್ಳಿಗಳಾದ ಕಿರಣಗಿ, ಸಂಬರಗಿ, ಕಲ್ಲೂತಿ, ಪಾಂಡೇಗಾಂವ, ಜಂಬಗಿ… ಹಲವು ಗ್ರಾಮಗಳಲ್ಲಿ ಬೆಳೆದ ಕಬ್ಬಿನ ಬೆಳೆ ನೀರು ಇಲ್ಲದೆ ನಾಶವಾಗಿದೆ. ರೈತರಿಗೆ ಆತಂಕ ಎದುರಾಗಿದೆ. ಈ ಎಲ್ಲ ಗ್ರಾಮಗಳು ಸೇರಿ ಸಂದಾಜು 40 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ರೈತರು …

Read More »

ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ: ಹೊಸ ಸರ್ಕಾರದತ್ತ ನಿರೀಕ್ಷೆಯ ನೋಟ

ಬೆಳಗಾವಿ: ದಶಕದ ಹಿಂದೆ ಉದ್ಘಾಟನೆಯಾದ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಲ್ಲಿರುವ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ವಿಚಾರವಾಗಿ, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ನಿಲುವು ತಳೆಯಲಿದೆ ಎಂಬ ಜಿಜ್ಞಾಸೆ ಈಗ ಗಡಿಭಾಗದ ಕನ್ನಡಿಗರಲ್ಲಿ ಉಂಟಾಗಿದೆ.   2013ರಲ್ಲಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಸಕಾರಾತ್ಮಕ ನಿಲುವು ತಳೆಯಲಿಲ್ಲ ಎಂಬುದು ಗಡಿ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅವರನ್ನು ಐದು …

Read More »

ಉದ್ಯೋಗ ಅರಸಿ ವಲಸೆ ಹೋಗುವವರ ಸಮಸ್ಯೆ ನೀಗಿಸುರುವರೇ ಶಾಸಕ ಮಹಾಂತೇಶ ಕೌಜಲಗಿ?

ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹೆಸರಲ್ಲೇ ಒಂದು ಐತಿಹಾಸಿಕ, ಕ್ರಾಂತಿಕಾರಕ ಶಕ್ತಿ ಅಡಗಿದೆ. ಎರಡನೇ ಬಾರಿ ಆಯ್ಕೆಯಾದ ಶಾಸಕ ಮಹಾಂತೇಶ ಕೌಜಲಗಿ ಅವರು ಹಳೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ಕ್ಷೇತ್ರದ ಜನರ ಹೊಸ ನಿರೀಕ್ಷೆಗಳನ್ನು ಈಡೇರಿಸುವ ಸವಾಲು ಎದುರಿಸಬೇಕಾಗಿದೆ.‌ ಈ ಕ್ಷೇತ್ರದಲ್ಲಿ ಅವರ ಎರಡೂ ಗೆಲುವುಗಳಿಗೆ ಅವರಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರ ಒಳಜಗಳವೇ ಕಾರಣ ಎಂಬುದು ಈಗ ಜನಜನಿತ. ಈ ಅವಕಾಶವು ಮಹಾಂತೇಶ ಅವರಿಗೆ ಎರಡು ಬಾರಿ ಒಲಿದಿದೆ. ಆದರೆ, ಇದು …

Read More »

ರಾಯಬಾಗ: ಹಣ ಕೇಳಿದ ಅಧಿಕಾರಿ ವಿರುದ್ಧ ಪ್ರತಿಭಟನೆ

ರಾಯಬಾಗ: ‘ಭ್ರಷ್ಟರೇ ಅಧಿಕಾರ ಬಿಟ್ಟು ತೊಲಗಿ, ಇಲ್ಲವೇ ಬಡ ಜನರ ಕೆಲಸಗಳನ್ನು ಮಾಡಿ ಕೊಡಿ’ ಎಂದು ತಾಲ್ಲೂಕಿನ ಬಸ್ತವಾಡ ಗ್ರಾಮದ ರೈತ ಅನಿಲ ಕಾಂಬಳೆ ಶುಕ್ರವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.   ತಮ್ಮ ಜಮೀನು ಸರ್ವೆ ಮಾಡಲು ರಾಯಬಾಗ ಸರ್ವೇಯರ್ ಹಣದ ಬೇಡಿಕೆ ಇಟ್ಟಿದ್ದು, ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು. ತಮ್ಮ ಜಮೀನನ್ನು ಸರ್ವೆ ಮಾಡಿ ಕೊಡಿ …

Read More »

ದೇಶದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಗತವೈಭವ..

ಹೈದರಾಬಾದ್: ಭಾರತದ ಸಂಸತ್ತಿನ ಭವನ ದಶಕಗಳಿಂದ ದೇಶದ ಜನರ ಏಕತೆ, ಶಕ್ತಿ ಮತ್ತು ಸಾಮೂಹಿಕ ಇಚ್ಛೆಯ ಸಂಕೇತವಾಗಿದೆ. ಆದರೆ ಬದಲಾವಣೆ ಸಹಜ. ಅಂತೆಯೇ ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಹಳೆಯ ಸಂಸತ್ ಭವನವು ಮೂಕ ಪ್ರೇಕ್ಷಕನಾಗಲಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಗಸ್ಟ್ 15, 1947 ರಂದು ಮಧ್ಯರಾತ್ರಿ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣದ ಮೂಲಕ ಆರಂಭವಾದ ಇತಿಹಾಸಕ್ಕೆ ಇಂದು (2023ರ ಮೇ 28) ಔಪಚಾರಿಕ ವಿದಾಯ ಹೇಳಿ ಹೊಸದಕ್ಕೆ …

Read More »

ಬೆಂಗಳೂರಲ್ಲಿ ವೃದ್ಧೆಯ ಕೈಕಾಲು ಕಟ್ಟಿ ಹತ್ಯೆಗೈದು ದರೋಡೆ

ಬೆಂಗಳೂರು: ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ‌ ಮಹಾಲಕ್ಷ್ಮಿ ಲೇಔಟಿನಲ್ಲಿ ನಡೆದಿದೆ. ಕಮಲಮ್ಮ (80) ಹತ್ಯೆಯಾದ ವೃದ್ಧೆ. ಮೃತಳ ಪತಿ ಆರು ತಿಂಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ಮೂವರು ಮಕ್ಕಳಿದ್ದು, ಅವರು ಸಹ ಬೇರೆ ಬೇರೆ ಕಡೆ ವಾಸವಿದ್ದರಿಂದ ಕಮಲಮ್ಮ ಒಬ್ಬರೇ ವಾಸವಿದ್ದರು. ನಿನ್ನೆ(ಶನಿವಾರ) ಸಂಜೆ ಮನೆ ಪ್ರವೇಶಿಸಿರುವ ಹಂತಕರು‌ ವೃದ್ಧೆಯ ಕೈಕಾಲು‌ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ …

Read More »

ನೀತಿ ಆಯೋಗದ ಸಭೆ ಬಹಿಷ್ಕರಿಸಿದ 7 ಸಿಎಂಗಳು

ನವದೆಹಲಿ, ಮೇ 27- ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಗೆ ದೇಶದ ಏಳು ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದಾರೆ.ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಾಜರಾಗದಿರಲು ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೈರು ಹಾಜರಿಗೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಕೇಂದ್ರದ ಇತ್ತೀಚಿನ ಸುಗ್ರೀವಾಜ್ಞೆಗೆ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಮತ್ತು ದೇಶದಲ್ಲಿ …

Read More »