ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಜೋಗದ ಪ್ರಮುಖ ರಸ್ತೆಗಳಲ್ಲಿ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರಕ್ಕೆ ತೆರಳುವ ಮಾರ್ಗದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಎರಡು ದಿನದ ಹಿಂದೆ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆಯನ್ನು ನೋಡಿದ ಸ್ಥಳೀಯರು ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ಹಿಂದೆ ಜೋಗದ ಸುತ್ತಮುತ್ತಲಿನ ಗ್ರಾಮಗಳಾದ ಶ್ರೀಪುರ, ಬಾಳೆಗದ್ದೆ, ಕೆಮ್ಮಣ್ಣುಗಾರು ಸೇರಿದಂತೆ ಅನೇಕ ಕಡೆ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ಕಳೆದ 10 ದಿನಗಳಿಂದ …
Read More »ಧಾರವಾಡ:ಮನೆ ಮೇಲಿಂದ ಬಿದ್ದು ವೃದ್ಧೆ ಸಾವು..
ಧಾರವಾಡ: ಶುಕ್ರವಾರ ರಾತ್ರಿ ಸುರಿದ ಮಳೆ-ಗಾಳೆಯಿಂದ ಮನೆ ಮೇಲೆ ಬಿದ್ದಿದ್ದ ತೆಂಗಿನ ಮರದ ಗರಿ ತೆಗೆಯಲು ಹೋದ ವೃದ್ಧೆಯೊಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಸಪ್ತಾಪುರ 8ನೇ ಕ್ರಾಸ್‍ನಲ್ಲೇ ಈ ಘಟನೆ ನಡೆದಿದ್ದು, 65 ವರ್ಷದ ಸರೊಜಾ ಸಾಟೆ ಎಂಬವರೇ ಮೃತಪಟ್ಟವರು. ನಿನ್ನೆ ರಾತ್ರಿ ನಗರಾದ್ಯಂತ ಭಾರೀ ಗಾಳಿ ಬೀಸಿತ್ತು. ಇದರಿಂದ ಮನೆ ಇವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಾಗ ಪಕ್ಕದ ಮನೆಯ ಕಾಂಪೌಂಡ್ …
Read More »ವುಹಾನ್ ಲ್ಯಾಬ್‍ನಿಂದ ವೈರಸ್ ಹೊರಬಂದಿದ್ದು ಹೇಗೆ..? : ತನಿಖೆಗೆ ಟ್ರಂಪ್ ಚಿಂತನೆ
ವಾಷಿಂಗ್ಟನ್, ಏ.18-ವಿಶ್ವವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ವೈರಸ್‍ನ ಉಗಮ ಬಿಂದು ಚೀನಾದ ವುಹಾನ ನಗರಿಯ ಪ್ರಯೋಗಾಲಯದಿಂದ ಡೆಡ್ಲಿ ವೈರಸ್ ತಪ್ಪಿಸಿಕೊಂಡಿರುವ ವರದಿ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕು ಮತ್ತು ಸಾವು ನೋವಿನ ಬಗ್ಗೆ ಸಾಕಷ್ಟು ಸುಳ್ಳುಗಳನ್ನು ಹೇಳಿ ಜಗತ್ತಿನ ದಿಕ್ಕು ತಪ್ಪಿಸುತ್ತಿರುವ ಚೀನಾದ ಕರ್ಮಕಾಂಡಗಳು ಒಂದೊಂದೇ ಬಯಲಿಗೆ ಬರುತ್ತಿದ್ದು, ಆ ದೇಶಕ್ಕೆ …
Read More »ಅಕ್ರಮ ಬಡಾವಣೆ-ಕಟ್ಟಡಗಳ ಸಕ್ರಮಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ
ಬೆಂಗಳೂರು : ಅಕ್ರಮ ಬಡಾವಣೆ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಶುಕ್ರವಾರ ಕೈಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ಮುಕ್ತಿ ಕಾಣಿಸಿದೆ. ಅನಧಿಕೃತ ಬಡಾವಣೆ ಹಾಗೂ ಕಟ್ಟಡಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲ ಸೌಕರ್ಯ ಒದಗಿಸಿದೆ. ಆದರೂ ಯಾವುದೇ ತೆರಿಗೆ ರಾಜ್ಯದ ಬೊಕ್ಕಸಕ್ಕೆ ಬರುತ್ತಿಲ್ಲ.ರಾಜ್ಯದ ಆದಾಯ ಹೆಚ್ಚಿಸಲು …
Read More »ಕುಮಟಾ ಪಟ್ಟಣದ ವೈನ್ ಶಾಪ್‍ನಲ್ಲಿ ಕಳ್ಳತನ,43 ಸಾವಿರ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಕಾರವಾರ: ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸಹ ಬಂದ್ ಆಗಿದೆ. ಇದರಿಂದ ಮದ್ಯ ಪ್ರಿಯರಿಗಂತೂ ನುಂಗಲಾರದ ತುತ್ತಾಗಿದೆ. ಇದರಿಂದ ಮದ್ಯಕ್ಕಾಗಿ ಪಟ್ಟಣದ ವೈನ್ ಶಾಪ್ ಒಂದಕ್ಕೆ ಕಳ್ಳರು ಕನ್ನ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕುಮಟಾ ಪಟ್ಟಣದ ಎಪಿಎಂಸಿ ಬಳಿ ಇರುವ ಅಲ್ಫಾ ವೈನ್ ಶಾಪ್‍ನಲ್ಲಿ ಕಳ್ಳತನ ಮಾಡಲಾಗಿದೆ. ವೈನ್ ಶಾಪ್‍ನ ಶಟರ್ ಒಡೆದು ಕಳ್ಳತನ ಮಾಡಲಾಗಿದೆ. ಒಟ್ಟು 43,665 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಕದ್ದು …
Read More »ರಸ್ತೆಯಲ್ಲಿ ಬಂದ ಮಾಜಿ ಮೇಯರ್‌ಗೆ ಪೊಲೀಸರು ಕ್ಲಾಸ್……
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ಶಿಸ್ತಾಗಿ ಜಾರಿ ಮಾಡುತ್ತಿದ್ದಾರೆ. ಹೀಗಾಗಿ ನಿರ್ಬಂಧಿತ ರಸ್ತೆಯಲ್ಲಿ ಬಂದಿದ್ದ ಮಾಜಿ ಮೇಯರ್ ಅಯೂಬ್ ಖಾನ್‍ರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಮೈಸೂರಿನ ಉದಯಗಿರಿ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೂ ಮಾಜಿ ಮೇಯರ್ ಅಯೂಬ್ ಖಾನ್ ಮಾಸ್ಕ್ ಕೂಡ ಧರಿಸದೆ ನಿರ್ಬಂಧಿತ ರಸ್ತೆಯಲ್ಲಿ ಬರಲು ಯತ್ನಿಸಿದರು. ಈ ವೇಳೆ ಅಯೂಬ್‍ಖಾನ್‍ಗೆ ತಿಳಿ ಹೇಳಿದ ಪೊಲೀಸರು, ಮಾಸ್ಕ್ ಹಾಕಿಸಿ …
Read More »ಮೈಸೂರು:ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್ ಹಾಕಿ, ಬೆಂಕಿ ಹಚ್ಚಿದ್ರು
ಮೈಸೂರು: ಸಾಮಾನ್ಯವಾಗು ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಹೋಗುತ್ತಾರೆ. ಆದರೆ ಈಗ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಜನ ಭಯಭೀತರಾಗುತ್ತಿದ್ದಾರೆ. ನೋಟು ಮೂಲಕ ಕೊರೊನಾ ವೈರಸ್ ಹರಡಲಾಗುತ್ತಿದೆ ಎಂಬ ವದಂತಿ ಹಬ್ಬಿರುವ ಕಾರಣ ಜನ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಕಂಡು ಹೆದರುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಜನ ಬೆಂಕಿ ಇಟ್ಟಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಮೈಲಾರಿ ಹೋಟೆಲ್ ಬಳಿ ಬಿದ್ದಿದ್ದ 100ರ ಹೊಸ ನೋಟು …
Read More »ಕೊರೋನಾ ಟೆಸ್ಟ್ಗಾಗಿ ರಾಜ್ಯದಲ್ಲಿ 16 ಲ್ಯಾಬ್‌ಗಳಿಗೆ ಅನುಮತಿ ನೀಡಿದ ಐಸಿಎಂಆರ್
ಸರ್ಕಾರಿ ಲ್ಯಾಬ್‌ಗಳ ಎಲ್ಲಾ ಪ್ರೋಟೋಕಾಲ್‌ಗಳನ್ನು ಖಾಸಗಿ ಲ್ಯಾಬ್‌ಗಳು ಕೂಡಾ ಪಾಲಿಸಬೇಕು. ಸರ್ಕಾರದಿಂದ ಯಾವುದೇ ಟೆಸ್ಟಿಂಗ್ ಕಿಟ್‌ಗಳನ್ನು ನೀಡುವುದಿಲ್ಲ ಎಂದು ಖಾಸಗಿ ಲ್ಯಾಬ್‌ಗಳಿಗೆ ನಿರ್ಬಂಧ ವಿಧಿಸಿ ಅನುಮತಿ ನೀಡಿದೆ. ಬೆಂಗಳೂರು(ಏ.18): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ ಹೊಸದಾಗಿ 38 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ ದಾಖಲಾದ ಪ್ರಕರಣಗಳ ಪೈಕಿ ಇದೇ ಹೆಚ್ಚಿನ ಸಂಖ್ಯೆಯಾಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ವೈದ್ಯಕೀಯ …
Read More »ದೆಹಲಿ ಧಾರ್ಮಿಕ ಸಭೆಗೆ ತೆರಳಿದ್ದ ರಾಜ್ಯದ 47 ಜನರಿಗೆ ಕೊರೋನಾ; 485 ತಬ್ಲಿಘಿಗಳ ಸುಳಿವು ಇನ್ನೂ ನಿಗೂಢ!
ಬೆಂಗಳೂರು (ಏ. 18): ಮಾರ್ಚ್ ತಿಂಗಳ ಮಧ್ಯಂತರದಲ್ಲಿ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದಾಗಿ ದೇಶದ ಕೊರೋನಾ ಸೋಂಕಿತರ ಪ್ರಮಾಣ ದ್ವಿಗುಣಗೊಂಡಿದೆ. ಕರ್ನಾಟಕದಿಂದಲೂ ಸಾಕಷ್ಟು ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರಲ್ಲಿ ಇನ್ನೂ 485 ತಬ್ಲಿಘಿಗಳ ಮಾಹಿತಿ ನಿಗೂಢವಾಗಿದೆ. ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ವಿದೇಶೀಯರು ಕೂಡ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೂ ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಆ ಸಭೆಗೆ …
Read More »ಕಾರವಾರದಲ್ಲಿ ಮಾರಾಟವಾಗುತ್ತಿದೆ ಗೋವಾ ಎಣ್ಣೆ; ಕಾಡುಗಳ ಮೂಲಕ ನಡೆಯುತ್ತಿದೆ ಮದ್ಯ ದಂಧೆ
ಕಾರವಾರ(ಏ.18): ಒಂದನೇ ಹಂತದ ಲಾಕ್ ಡೌನ್ ಮುಗಿದು ಎರಡನೇ ಹಂತದ ಲಾಕ್ ಡೌನ್ ಘೋಷಣೆ ಆಗಿ ಈಗ ಮೂರು ದಿನ ಕಳೆದಿದೆ. ಇದರ ನಡುವೆ ಮದ್ಯದ ಅಂಗಡಿ ಆರಂಭಿಸಬೇಕೆಂದು ಸಾವಿರಾರು ಜನರ ಮನವಿ ಒಂದೆಡೆ ಆದರೆ, ಗೋವಾ- ಕಾರವಾರ ಗಡಿ ಭಾಗದಲ್ಲಿ ಮಾತ್ರ ಅವ್ಯಾಹತವಾಗಿ ಮದ್ಯ ಸಾಗಾಟ ನಡೆಯುತ್ತಿದ್ದು, ಇಲ್ಲಿ ಕುಡುಕರ ದಾಹ ತಣಿವಾಗುತ್ತಿದೆ. ಒಂದೆಡೆ ಲಾಕ್ ಡೌನ್ ಇರುವುದರಿಂದ ಅಗತ್ಯ ವಸ್ತು ಹೊರತ ಪಡಿಸಿ ಬೇರಾವದು ವಸ್ತು ಮಾರಾಟ …
Read More »
Laxmi News 24×7