Breaking News

ರಾಜಕೀಯ

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ

ನವದೆಹಲಿ,ಡಿ.30- ಸರ್ಕಾರ ತನ್ನ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೂ ರೈತರ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಕೇಂದ್ರ ರೈತರೊಂದಿಗೆ 6ನೇ ಸುತ್ತಿನ ಮಾತುಕತೆ ನಡೆಸಲು 40ಕ್ಕೂ ಹೆಚ್ಚು ರೈತ ಒಕ್ಕೂಟಗಳನ್ನು ಆಹ್ವಾನಿಸಿದೆ. ಇಂದು ದೆಹಲಿಯ ವಿಜ್ಞಾನ ಭವನಕ್ಕೆ ಎರಡು ಬಸ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ , ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆಯದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲ. ಕೇಂದ್ರ ತನ್ನ ನಿಲುವನ್ನು ಬದಲಿಸಿಕೊಳ್ಳುವುದೊಂದೆ ಮಾರ್ಗ …

Read More »

ಧರ್ಮೇಗೌಡರ ಹಠಾತ್ ನಿಧನ ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಬೆಂಗಳೂರು : ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ ಎಸ್. ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಂತಾಪ …

Read More »

ಬೆಂಗಳೂರಿನ ಮೂವರಿಗೆ ರೂಪಾಂತರ ಸೋಂಕು ದೃಢ: ಸಚಿವ ಡಾ.ಸುಧಾಕರ್ ಜ. 1 ರಿಂದ ಶಾಲಾ ಆರಂಭಕ್ಕೆ ತೊಂದರೆ ಇಲ್ಲ!!

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಪತ್ತೆಯಾದ ಮ್ಯೂಟಂಟ್​ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದ್ದು, 6 ಮಂದಿಯಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂವರಿಗೆ ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 10 ಲ್ಯಾಬ್ ಇದೆ. ಇಂಗ್ಲೆಂಡ್​ನಿಂದ ಬಂದ 1614 ಜನರ ಪೈಕಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೆನೆಟಿಕ್ ಸೀಕ್ವೆನ್ಸಿಂಗ್ ಆದ …

Read More »

ಕಸ್ತೂರಿ ರಂಗನ್ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ.: ವರದಿ ತಿರಸ್ಕರಿಸಿದ ರಾಜ್ಯಸರಕಾರ

ಬೆಂಗಳೂರು : ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಇಂದು ಸಚಿವ ಸಂಪುಟ ಉಪಸಮಿತಿಯ ಸಭೆಯನ್ನು ಸಮಿತಿ ಅಧ್ಯಕ್ಷ ಆನಂದ ಸಿಂಗ್ ಅವರ ನೇತೃತ್ವದಲ್ಲಿ ನಡೆಸಿ, ವರದಿ ಕುರಿತು ಸಮಿತಿ ಸದಸ್ಯರೊಂದಿಗೆ ವರದಿಯ ಸಾಧಕ – ಭಾದಕಗಳ ಕುರಿತು ವಿಸ್ತೃತವಾಗಿ  ಚರ್ಚಿಸಲಾಯಿತು.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಪರಿಸರ ಖಾತೆ ಸಚಿವ  ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಈ  ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಸ್ತೂರಿ ರಂಗನ್ ವರದಿಯು …

Read More »

ಬಿಜೆಪಿಯವರು 7 ವರ್ಷದಲ್ಲೇ ಮಾರಿದ್ರು: ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ಕಾಂಗ್ರೆಸ್ ಏನು ಮಾಡದಿದ್ರೆ ಸಂಸ್ಥೆಗಳನ್ನು ಹೇಗೆ ಮಾರಾಟ ಮಾಡುತಿದ್ರು?

ಗೋಕಾಕ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಅಭಿವೃದ್ದಿಗೊಳಿಸಿದ ದೇಶವನ್ನು ಬಿಜೆಪಿಯವರು ಕೇವಲ 7 ವರ್ಷದಲ್ಲಿ ಮಾರಾಟ ಮಾಡಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ ಎಲ್ ಎಲ್ಲವನ್ನು ಕಾಂಗ್ರೆಸ್ ನವರು 70ವರ್ಷಗಳ …

Read More »

ಗ್ರಾ.ಪಂ. ಚುನಾವಣೆ ಅಂತ್ಯ: 2ನೇ ಹಂತದಲ್ಲಿ ಶೇ. 80.71 ಮತದಾನ – ಡಿ. 30ಕ್ಕೆ ಫಲಿತಾಂಶ

ಬೆಂಗಳೂರು: ಕೆಲವೊಂದು ಕಡೆ ಗದ್ದಲ, ಮತದಾನ ಬಹಿಷ್ಕಾರಗಳ ಮಧ್ಯೆ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಡಿ. 22ರಂದು ಮೊದಲ ಹಂತದ ಮತದಾನವಾದರೆ ನಿನ್ನೆ ಭಾನುವಾರ 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ನಿನ್ನೆ ಶೇ. 80.71ರಷ್ಟು ಮತದಾನ ಆಗಿರುವ ಮಾಹಿತಿ ಇದೆ. ಎರಡೂ ಹಂತಗಳಲ್ಲೂ ಶೇ. 80ಕ್ಕಿಂತ ಹೆಚ್ಚು ಮತದಾನವಾದಂತಾಗಿದೆ. ನಿನ್ನೆ 2ನೇ ಹಂತದಲ್ಲಿ 39,378 ಸದಸ್ಯರ ಆಯ್ಕೆಗೆ 2,709 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ …

Read More »

ಬಿಜೆಪಿಯಿಂದ ಮಾತ್ರ ರೈತರ ಏಳ್ಗೆ ಸಾಧ್ಯ-ಸಂಸದ ಈರಣ್ಣ ಕಡಾಡಿ

ಗೋಕಾಕ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಬಿಜೆಪಿಯಿಂದ ಮಾತ್ರವೇ ರೈತರ ಏಳ್ಗೆ ಸಾಧ್ಯವೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.   ಶುಕ್ರವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ ನಿಮಿತ್ಯ ಕಿಸಾನ್ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ …

Read More »

ಗ್ರಾಪಂ. ಚುನಾವಣೆ : ಅಧಿಕಾರಕ್ಕಾಗಿ ಸವದಿ-ಕುಮಠಳ್ಳಿ ಬೆಂಬಲಿಗರ ಫೈಟ್ !

ಬೆಳಗಾವಿ : ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಕೋನಟ್ಟಿ ಗ್ರಾಪಂ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಮಹೇಶ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಅಥಣಿ ತಾಲ್ಲೂಕಿನ 149 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್ 27 ಕ್ಕೆ ಚುನಾವಣೆ ನಿಗದಿಯಾಗಿದೆ. 56 ಸದಸ್ಯರನ್ನು ಹೊಂದಿರುವ ಸಂಕೋನಟ್ಟಿ ಪಂಚಾಯಿತಿಯಲ್ಲಿ ಬಹುಮತ ಸಾಧಿಸಲು ಬಿಜೆಪಿ ಎರಡೂ ಬಣಗಳು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ. ಡಿಸಿಎಂ ಲಕ್ಷ್ಮಣ ಸವದಿ ಹಾಗೂ …

Read More »

ಅನಿಲ್ ಬೆನಕೆ ಮರಾಠಿ ಬ್ಯಾನರ್‌ಗೆ ಕಪ್ಪು ಮಸಿ..ಬ್ಯಾನರ್ ಹರಿದು ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾಂವಿ ಆಕ್ರೋಶ.

ಅನಿಲ್ ಬೆನಕೆ ಮರಾಠಿ ಬ್ಯಾನರ್‌ಗೆ ಕಪ್ಪು ಮಸಿ..ಬ್ಯಾನರ್ ಹರಿದು ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾಂವಿ ಆಕ್ರೋಶ. ಬೆಳಗಾವಿ ಆರ್‌ಟಿಒ ಸರ್ಕಲ್‌ನಲ್ಲಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮತ್ತು ತಂಡ ಅಳವಡಿಸಿದ್ದ ಮರಾಠಿ ಭಾಷೆಯ ಬ್ಯಾನರ್‌ಗೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಆಯೋಜಿಸಿರುವ ಕ್ರಿಕೆಟ್ ಟೂರ್ನಾಮೆಂಟ್ ಮಾಹಿತಿ ನೀಡುವ ಪ್ರಚಾರ ಫಲಕವನ್ನು ಆರ್‌ಟಿಒ ಸರ್ಕಲ್ ಬಳಿ ಮರಾಠಿ ಭಾಷೆಯಲ್ಲಿ ಅಳವಡಿಸಲಾಗಿದೆ. ಶಾಸಕ …

Read More »

ಅಟಲ್ ಬೀಹಾರಿ ವಾಜಪೇಯಿಗೆ ದೇಶದ ನಮನ

ನವದೆಹಲಿ,ಡಿ.25-ರಾಷ್ಟ್ರಪತಿ ರಾಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಮಾಜಿ ಪ್ರಧಾನಿ ದಿವಂಗತ ಅಟಲ್ ಬೀಹಾರಿ ವಾಜಪೇಯಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ವಾಜಪೇಯಿ ಸ್ಮರಣಾರ್ಥ ಏರ್ಪಡಿಸಿದ್ದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರುಗಳು ಕೇಸರಿ ಪಕ್ಷದಿಂದ ದೇಶದ ಮೊಟ್ಟ ಮೊದಲ ಪ್ರಧಾನಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು. ಅಜಾತಶತ್ರು ವಾಜಪೇಯಿ ಅವರನ್ನು ಕುರಿತು ರಾಷ್ಟ್ರಪತಿ ಕೋವಿಂದ್ ಅವರು, ಸದೈವ …

Read More »