ಮುಂಬೈ, ಫೆ.16 (ಪಿಟಿಐ)- ಪೂನಾ-ಮುಂಬೈ ಎಕ್ಸ್‍ಪ್ರೆಸ್‍ವೇನಲ್ಲಿ ಮುಂಜಾನೆ ಲಾರಿಯೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಖಾಪೊಲಿ ನಗರದ ಸಮೀಪ ಮತ್ತೊಂದು ವಾಹನಕ್ಕೂ ಗುದ್ದಿದ ಕಾರಣ ಸ್ಥಳದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಹಲವರಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.ನವಿ ಮುಂಬೈ ಮುನಿಸಿಪಲ್ ಕಾಪೆರ್ರೇಷನ್ (ಎನ್‍ಎಂಎಂಸಿ)ಯ ಪಶುವೈದ್ಯರು ಸೇರಿದಂತೆ ಅವರ ಕುಟುಂಬದ ಮೂವರು ಒಂದು ಕಾರಿನಲ್ಲಿ ತೆರಳುತ್ತಿದ್ದರು. ಖಾಲಾಪುರ ಟೋಲ್ ಪ್ಲಾಜಾ ಕ್ಯೂನಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ …
Read More »ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿನ ಚಕಮಕಿ
ತುಮಕೂರು, ಫೆ.16- ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆಗಳು ವರದಿಯಾಗಿವೆ. ಇಂದಿನಿಂದ ಟೋಲ್‍ಗಳಲ್ಲಿ ಫಾಸ್ಟ್‍ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯಲು ಮುಂದಾದಾಗ ಚಾಲಕರು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಜಾಸ್ ಟೋಲ್ ಸಮೀಪ ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಕೈ ಕೈ ಮಿಲಾಯಿಸಿದ್ದಾರೆ. …
Read More »ಸತೀಶ್ ಜಾರಕಿಹೊಳಿ ಅಶೋಕ್ ಪೂಜಾರಿ ಮನೆಗೆ ಧಿಡೀರ್ ಭೇಟಿ ಅಶೋಕ್ ಪೂಜಾರಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ…?
ಗೋಕಾಕ – ಬೆಳಗಾವಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ಹೊಸ ಹೆಸರು ಗಳು ಕೇಳಿ ಬರ್ತಿದೆ, ಆದ್ರೆ ಅದು ಸೋಶಿಯಲ್ ಮೀಡಿಯಾ ಹಾಗೂ ಮೈನ್ಸ್ಟ್ರೀಮ್ ಮೀಡಿಯಾದಲ್ಲಿ ವಿಷಯಗಳ ಚರ್ಚೆ ಜೋರಾಗೆ ಇದೆ. ಆದ್ರೆ ಇವತ್ತು ಸತೀಶ್ ಜಾರಕಿಹೊಳಿ ಅವರು ಅಶೋಕ್ ಪೂಜಾರಿ ಮನೆಗೆ ಭೇಟಿ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಿ ಕೊಳ್ಳಲು ಆಹ್ವಾನ ನೀಡಿದರು ಇನ್ನು ಲಿಂಗಾಯತ ಸಮುದಾಯದ ಜನರಿಗೆ ಭೇಟಿ ನೀಡಿತಮ್ಮ ಪಕ್ಷಕ್ಕೆ ಆಹ್ವಾನ ನೀಡುತ್ತೇನೆ ಪಕ್ಷ …
Read More »ಕನ್ನಡ ಬಿಗ್‌ಬಾಸ್-8ರಲ್ಲಿ ಭಾಗವಹಿಸೋ ಸೆಲೆಬ್ರಿಟಿಗಳು ಯಾರ‌್ಯಾರು? ಇಲ್ಲಿದೆ ವಿವರ.
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ 8ನೇ ಸೀಸನ್‌ನ ಪ್ರಸಾರಕ್ಕೆ ನಟ ಕಿಚ್ಚ ಸುದೀಪ್ ಅವರು ದಿನಾಂಕವನ್ನು ಈಗಾಗಲೇ ನಿಗದಿಪಡಿಸಿದ್ದು, ಅದರಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ಯಾರು ಎಂಬ ಕುರಿತು ಕುತೂಹಲ ಮೂಡಿದೆ. ಜ್ಯೋತಿಷಿಯ ವೇಷದಲ್ಲಿರುವ ಸುದೀಪ್ ಬಳಿ ನಟ ಸುದೀಪ್ ಬಂದು ಬಿಗ್‌ಬಾಸ್ ಯಾವಾಗ ಶುರುವಾಗುತ್ತೆ ಎಂದು ಕೇಳುವ, ಅದಕ್ಕೆ ಜ್ಯೋತಿಷಿ ‘ಫೆ. 28ಕ್ಕೆ’ ಎಂದು ಹೇಳುವ ಪ್ರೋಮೋ ಈಗಾಗಲೇ ಹಿಟ್ ಆಗಿದೆ. ಅದರ ಬೆನ್ನಿಗೇ ಈ ಸಲದ ಬಿಗ್‌ಬಾಸ್‌ನಲ್ಲಿ …
Read More »ಟೂಲ್‌ಕಿಟ್ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್’ ಟ್ರೆಂಡ್- ಸಂಕಷ್ಟದಲ್ಲಿ ನಟಿ
ಚೆನ್ನೈ: ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ‘ಟೂಲ್‌ಕಿಟ್’ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಮೋದಿಗೋಬ್ಯಾಕ್ ಟ್ರೆಂಡ್ ಮತ್ತೆ ಶುರುವಾಗಿದೆ. ರೈತರ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಭಾರತದ ವಿರುದ್ಧ ಮಹಾ ಸಮರ ಸಾರಿರುವ ಕೆಲವು ಕಿಡಿಗೇಡಿಗಳ ಕೃತ್ಯ ಒಂದೊಂದಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಇತ್ತ ಮೋದಿಗೋಬ್ಯಾಕ್ ಎಂದು ಹಲವರು ಟ್ವೀಟ್ ಶುರು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, …
Read More »ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲು ಸಿದ್ಧತೆ
ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದು, ಈಗಾಗಲೇ ಮುಖಂಡರ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಏನು ಹೇಳಿದರೂ ಮಾಡಲು ಸಿದ್ಧ. ಸಿದ್ದರಾಮಯ್ಯ ಹೋಗುವ ದಾರಿಯಲ್ಲಿ ನಾನು ಹೋಗುತ್ತೇನೆ. ಅವರು ಮಿಸಲಾತಿ ಹೋರಾಟಕ್ಕೆ ಹೋಗಿಲ್ಲ, ನಾನೂ ಕೂಡ ಹೋಗಿಲ್ಲ. ಸಿದ್ದರಾಮಯ್ಯ ಕೋಲಾರದಿಂದಲೇ ಅಹಿಂದ ಸಮಾವೇಶ ಆರಂಭಿಸಲಿ. ನಾನೇ 2 ಲಕ್ಷ ಜನರನ್ನು ಸೇರಿಸುತ್ತೇನೆ. ನಾನು …
Read More »ರಾಜಾಪೂರದಲ್ಲಿ 8.17 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ : ಜಲಜೀವನ ಮಿಷನ್ ಕಾಮಗಾರಿಗಾಗಿ ರಾಜಾಪೂರ, ತುಕ್ಕಾನಟ್ಟಿ, ದಂಡಾಪೂರ, ದುರದುಂಡಿ ಹಾಗೂ ಬಡಿಗವಾಡ ಗ್ರಾಮ ಪಂಚಾಯತಿಗಳಿಗೆ 8.17 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ 8.17 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ …
Read More »ಹಾವು-ಚೇಳುಗಳು ಯಡಿಯೂರಪ್ಪನವರ ಕುಟುಂಬದಲ್ಲೇ ಇದ್ದಾರೆ’: ಯತ್ನಾಳ್ ತಿರುಗೇಟು
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹರಿಹಾಯ್ದಿದ್ದಾರೆ. ಹಾವು-ಚೇಳುಗಳನ್ನು ಎದುರಿಸಿ ನಮ್ಮ ತಂದೆ ಬಂದಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸಿಎಂ ಕುರ್ಚಿಗೆ ಹೈಕಮಾಂಡ್ ನಿಂದ ಕುತ್ತು ಬಂದಾಗಲೆಲ್ಲಾ ರಾಜಕೀಯ ಸ್ಥಿರತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ಅವರ ಉದ್ದೇಶ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ನೀಡುವುದಲ್ಲ, …
Read More »ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಯಡಿಯೂರಪ್ಪ ಕುಟುಂಬದ ಸರ್ಕಾರ: ಎಚ್ ಡಿಕೆ
ಶಿವಮೊಗ್ಗ: ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಜೆಟ್ ನ ಕಾರ್ಯಕ್ರಮಗಳನ್ನು ವಿಭಜಿಸಿ ಶಿವಮೊಗ್ಗದ ನಗರದ ಅಭಿವೃದ್ದಿಗೆ ನೀಡಲಾಗಿತ್ತು. ನಾನು ಶಿವಮೊಗ್ಗದ ಕೆಲ ಪ್ರದೇಶಗಳನ್ನ ನೋಡಿದ್ದೇನೆ. ಅವುಗಳ ಅಭಿವೃದ್ಧಿ ಆಗಿಲ್ಲ. ಎರಡು ವರ್ಷದ ಬಜೆಟ್ ಹಣ ಎಲ್ಲಿ ಹೋಯಿತು. ರಾಜ್ಯದ ಜನರು ಕಟ್ಟುವ ತೆರಿಗೆ ಹಣ ದುರ್ಬಳಿಕೆ ಆಗುತ್ತಿದೆ ಎಂದರು. ರಾಜ್ಯದ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ …
Read More »ನಿಧಿ ಸಮರ್ಪಣಾ ಅಭಿಯಾನ ವೇಳೆ ಕಾರ್ಯಕರ್ತನ ಹತ್ಯೆ ಖಂಡಿಸಿ ವಿಎಚ್‍ಪಿ, ಬಜರಂಗದಳ ಪ್ರತಿಭಟನೆ
ದೆಹಲಿಯಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ವೇಳೆ ಬಜರಂಗದಳ ಕಾರ್ಯಕರ್ತನ ಮೇಲೆ 10-15 ಯುವಕರ ತಂಡವೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದು, ಕೂಡಲೇ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ದೆಹಲಿಯಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ತೆರಳಿದ್ದ ವೇಳೆ …
Read More »
Laxmi News 24×7