Breaking News

ರಾಜಕೀಯ

ಶೂಟಿಂಗ್ ನನ್ನನ್ನು ಕಾಪಾಡಿತು: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯೆ

ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಇಂದು (ಫೆಬ್ರವರಿ 18) ಡಿಸ್ಚಾರ್ಜ್ ಆಗಿ ಮನೆಗೆ ತೆರಲಿದ್ದಾರೆ. ಈ ಸಮಯದಲ್ಲಿ ರಾಘಣ್ಣ ಜೊತೆ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರು ಜೊತೆಯಲ್ಲಿದ್ದರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬಂದ ರಾಘಣ್ಣ ಮಾಧ್ಯಮದವರ ಜೊತೆ ಮಾತನಾಡಿ ಶೂಟಿಂಗ್ ನನ್ನನ್ನು ಕಾಪಾಡಿತು ಎಂದು ಹೇಳಿದ್ದಾರೆ. …

Read More »

‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು …

Read More »

ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಕಲಬುರಗಿ: ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾಪ ಸಂಸ್ಥೆ ಮುಂದಿಲ್ಲ ಎಂದು ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ದಿ.‌ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ದ ಉಚಿತ ಡಯಾಲಿಸಿಸ್ ಕೇಂದ್ರದ ವೈದ್ಯಕೀಯ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡೀಸೆಲ್ ದರ ಹೆಚ್ಚಳ ಅವಲೋಕಿಸಿದರೆ ದರ ಹೆಚ್ಚಿಸಬೇಕು. ಆದರೆ ಸಂಸ್ಥೆಯ ಬಸ್ ಗಳಲ್ಲಿ‌ ಸಂಚರಿಸುವರು ಬಡ ಹಾಗೂ ಮಧ್ಯಮ ವರ್ಗದವರಿರುತ್ತಾರೆ. ಕೊರೊನಾದಿಂದ …

Read More »

ಐಪಿಎಲ್ ಹರಾಜು 2021: 14.25 ಕೋಟಿ ರೂಗಳಿಗೆ ಆರ್ ಸಿಬಿ ಪಾಲಾದ ಗ್ಲೇನ್ ಮ್ಯಾಕ್ಸ್ ವೆಲ್, ದೆಹಲಿ ಪಾಲಾದ ಸ್ಟೀವ್ ಸ್ಮಿತ್!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಬರೊಬ್ಬರಿ 14.25 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಈ ನಿಮಿತ್ತ ಇಂದು ಆಟಗಾರರ ಹರಾಜು ಪ್ರಕ್ರಿಯೆ ಭರದಿಂದ ಸಾಗಿದೆ. ಚೆನ್ನೈನಲ್ಲಿ ಆಟಗಾರರ ಮಿನಿ …

Read More »

ಡೆತ್ ನೋಟಲ್ಲಿ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತಾ ಬರೆದಿದ್ದಾನೆ. !

ಮಂಡ್ಯ : ಡೆತ್ ನೋಟಲ್ಲಿ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತಾ ಬರೆದಿದ್ದಾನೆ. ನನಗೆ ಅಷ್ಟೊಂದು ಪರಿಚಯವಿಲ್ಲ. ಅದರೂ ನನ್ನ ಅಭಿಮಾನಿಯಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಮುಖ್ಯ. ನನಗೆ ಗೊತ್ತಿಲ್ಲದೆ ದೊಡ್ಡ ಅಭಿಮಾನಿಯಾಗಿ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾನೆ. ಅಭಿಮಾನಿ ಆಗಲಿ, ಯಾರೇ ಆಗಲಿ ಅಂತ್ಯಕ್ರಿಯೆಗೆ ಬರಬೇಕು ಅಂತಾ ಬರೆದುಕೊಂಡಿದ್ದಾನೆ. ಅಂತ್ಯಕ್ರಿಯೆಗೆ ಬಂದಿದ್ದೇನೆ ಎಂಬುದಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ತಾಲೂಕಿನ ಕೋಡಿದೊಡ್ಡಿಯಲ್ಲಿ ಅಭಿಮಾನಿ ರಾಮಕೃಷ್ಣ …

Read More »

ಸಿದ್ದರಾಮಯ್ಯ, ಕುಮಾರಸ್ವಾಮಿ ಕೋತಿಗಳ ರೀತಿ ಹೇಳಿಕೆ ಕೊಡುತ್ತಿದ್ದಾರೆ: ಈಶ್ವರಪ್ಪ

ಶಿವಮೊಗ್ಗ, ಫೆ.17: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತ ಸಿದ್ದರಾಮಯ್ಯ ಅವರು ಕೋತಿಗಳ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಜನಮಾನಸದಿಂದ ದೂರವಾಗುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆಯಾಗುತ್ತಿವೆ, ಗೋವುಗಳ ಕಳ್ಳತನ ನಡೆಯುತ್ತಿದೆ ಎಂದು ದೂರು ನೀಡಿದರೆ ಗೋರಕ್ಷರ ಮೇಲೆಯೇ ಕ್ರಮ ಜರುಗಿಸಿದರು. ಇದರ ಪರಿಣಾಮವೇ ಕಾಂಗ್ರೆಸ್ ಸರ್ಕಾರ …

Read More »

ಮೋದಿ ಶಕ್ತಿ ಕುಗ್ಗಿಸಲು RJD, ಕಾಂಗ್ರೆಸ್ ಗೆ ವಿಜಯೇಂದ್ರ ಹಣ ನೀಡಿದ್ದಾರೆ: ಯತ್ನಾಳ್ ಬಾಂಬ್

ಬೆಂಗಳೂರು: ಬಿಜೆಪಿ ವರಿಷ್ಠರು ನೀಡಿದ್ದ ಶೋಕಾಸ್ ನೋಟಿಸ್ ಗೆ 11 ಪುಟಗಳಷ್ಟು ಉತ್ತರ ನೀಡಿದ್ದೇನೆ. ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ಬಗ್ಗೆ ಬರೆದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ವಿಜಯೇಂದ್ರ ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿದ್ದಾರೆ. ಅಲ್ಲಿ ಬಿಜೆಪಿ ಸೋಲಿಸಲು ಆರ್ ಜೆಡಿ, ಕಾಂಗ್ರೆಸ್ ಗೆ …

Read More »

ಟೂಲ್‌ಕಿಟ್‌ ಪ್ರಕರಣ: ನಿಕಿತಾಗೆ ಜಾಮೀನು

ಮುಂಬೈ: ಟೂಲ್‌ಕಿಟ್‌ ಪ್ರಕರಣದ ಆರೋಪಿ, ಮುಂಬೈನ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್‌ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಮೂರು ವಾರಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದೆ. ನಿಕಿತಾ ವಿರುದ್ಧ ದೆಹಲಿ ಪೊಲೀಸರು ಜಾಮೀನುರಹಿತ ವಾರಂಟ್‌ ಪಡೆದುಕೊಂಡಿದ್ದಾರೆ. ಬಂಧನದಿಂದ ರಕ್ಷಣೆ ಪಡೆಯಲು ದೆಹಲಿಯ ನ್ಯಾಯಾಲಯಕ್ಕೆ ಹೋಗುವುದಕ್ಕಾಗಿ ಜಾಮೀನು ಮಂಜೂರು ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಾಂತನು ಮುಲುಕ್‌ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಮಂಗಳವಾರವೇ ಜಾಮೀನು ನೀಡಿದೆ. ಈ …

Read More »

ಇಂದು ಐಪಿಎಲ್‌ ಮಿನಿ ಹರಾಜು; 61 ಸ್ಥಾನಕ್ಕೆ 292 ಕ್ರಿಕೆಟಿಗರ ರೇಸ್‌

ಚೆನ್ನೈ: ಬಹು ನಿರೀಕ್ಷೆಯ 14ನೇ ಐಪಿಎಲ್‌ ಪಂದ್ಯಾವಳಿಗಾಗಿ ಗುರುವಾರ ಚೆನ್ನೈಯಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇಲ್ಲಿನ “ಐಟಿಸಿ ಗ್ರ್ಯಾಂಡ್‌ ಚೋಳ ಹೊಟೇಲ್‌’ನಲ್ಲಿ ಅಪರಾಹ್ನ ಮೂರರಿಂದ ಹರಾಜು ಆರಂಭವಾಗಲಿದ್ದು, ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್ ನಲ್ಲಿರಲಿದೆ. ಎಲ್ಲ ತಂಡಗಳು ತಮ್ಮ ಸೀಮಿತ ಮೊತ್ತದ ಚೌಕಟ್ಟಿನಲ್ಲಿ ಸ್ಟಾರ್‌ ಆಟಗಾರರನ್ನು ಖರೀದಿಸಲು ಪೈಪೋಟಿಗೆ ಇಳಿಯಲಿವೆ. 8 ಫ್ರಾಂಚೈಸಿಗಳಿಗೆ ಒಟ್ಟು 61 ಆಟಗಾರರ ಅಗತ್ಯವಿದೆ. ರೇಸ್‌ನಲ್ಲಿರುವವರು 292 ಮಂದಿ. ಇದರಲ್ಲಿ ಭಾರತದ 164, …

Read More »

ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರ ಬಂಧನ

ಅಥಣಿ – ನೀರಿನ ಪಾಳಿಗಾಗಿ ಜಗಳವಾಡಿ, ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ. ಶಂಕರ ಸದಾಶಿವ ಮಾದರ, ಸದಾಶಿವ ಸಿದ್ರಾಮ ಮಾದರ,  ಸುನೀಲ ಸದಾಶಿವ ಮಾದರ (ಸಾ|| ಎಲ್ಲರೂ ಕೊಕಟನೂರ) ಬಂಧಿತರು.  ಮಹಾದೇವ ಸಿದ್ರಾಮ ಮಾದರ (ವಯಾ 51 ವರ್ಷ ಸಾ|| ಕೊಕಟನೂರ) ಇವನು ಹಾಗೂ  ಸದಾಶಿವ ಸಿದ್ರಾಮ ಮಾದರ (ಸಾ|| ಕೊಕಟನೂರ) ಇವರಿಬ್ಬರೂ ಖಾಸ ಅಣ್ಣತಮ್ಮಂದಿರು. ಇವರ ತಂದೆ ಸಿದ್ರಾಮ ರಾಮಪ್ಪ ಮಾದರ ಇವರ …

Read More »