Breaking News

ರಾಜಕೀಯ

ನಾಯಕತ್ವ ಬದಲಾವಣೆ ವಿಚಾರ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ನಿರಾಣಿ; ಊಹಾಪೋಹ ಎಂದ ಬೊಮ್ಮಾಯಿ

ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಒಬ್ಬೊಬ್ಬರು ಸಚಿವರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಪ್ರತ್ಯೇಕ ಸಭೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚಟುವಟಿಕೆ ನಡೆಯುತ್ತಿರುವುದು ಶೇಕಡಾ ನೂರರಷ್ಟು ನಿಜ. ಕೆಲ ಸಚಿವರೇ ಪ್ರತ್ಯೇಕ ಸಭೆಯನ್ನೂ ನಡೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೊಸ ಬಾಂಬ್ …

Read More »

ಐಸಿಎಐ ಸಿಎ ಪರೀಕ್ಷೆ ಮುಂದೂಡಿಕೆ

‌ನವದೆಹಲಿ: ಮೇ 21 ಮತ್ತು 22ರಂದು ನಡೆಯಬೇಕಿದ್ದ ಐಸಿಎಐ ಸಿಎ ಮಧ್ಯಂತರ ಮತ್ತು ಅಂತಿಮ ಪರೀಕ್ಷೆಗಳು ಜೂನ್‌ 5 ರಿಂದ ನಡೆಯಲಿವೆ ಎಂದು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ತಿಳಿಸಿದೆ. ಆದ್ರೆ, ಪರೀಕ್ಷೆಗಳ ಸಮಯ ಸೇರಿದಂತೆ ವಿವರವಾದ ಅಧಿಸೂಚನೆಯನ್ನು ಇನ್ನೂ ಘೋಷಿಸಲಾಗಿಲ್ಲ. ‘ಕೋವಿಡ್-19 ಸಾಂಕ್ರಾಮಿಕ ರೋಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಅವರ ಕಷ್ಟಗಳನ್ನು ತಗ್ಗಿಸಲು, ಅಂತಿಮ ಮತ್ತು ಮಧ್ಯಂತರ ಚಾರ್ಟರ್ಡ್ ಅಕೌಂಟೆಂಟ್‌ಸ್ ಪರೀಕ್ಷೆಗಳನ್ನ ಮುಂದೂಡಲು …

Read More »

ನಾಯಕತ್ವ ಬದಲಾವಣೆ ವಿಚಾರ; ಆಪ್ತ ಸಚಿವರ ಬಳಿ ಬೇಸರ ವ್ಯಕ್ತಪಡಿಸಿದ ಸಿಎಂ ಬಿ ಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಪ್ತ ಸಚಿವರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.   ಈ ಹಿಂದೆ ಹಲವುಬಾರಿ ನಾಯಕತ್ವ ಬದಲಾವಣೆ ಬಗ್ಗೆ ಮಾತು ಕೇಳಿಬಂದರೂ ಅದಾವುದಕ್ಕೂ ಕಿವಿಗೊಡದ ಸಿಎಂ, ಈ ಬಾರಿ ಸ್ವತಃ ಬೇಸರ ವ್ಯಕ್ತಪಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ …

Read More »

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ದಾವಣಗೆರೆ: ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು‌ ಮೃತಪಟ್ಟಿದೆ ಎಂದು ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಮೃತ ಮಗುವಿನ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರಹಳ್ಳಿ ನಿವಾಸಿ ಲಕ್ಷ್ಮೀ ಮತ್ತು ತಿಮ್ಮೇಶ್ ದಂಪತಿ ಮಗು ಮೃತಪಟ್ಟಿದೆ. ಲಕ್ಷ್ಮೀಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದರು ಇರಲಿಲ್ಲ. ದಾದಿ ಸಾಕಮ್ಮ ಎಂಬುವರೇ ಹೆರಿಗೆ ಮಾಡಿಸಿದ್ದರು. ಆದರೆ ಮಗು ಬದುಕಿಲ್ಲ. ಹೆರಿಗೆ ಮಾಡಿಸುವಾಗ ದಾದಿ ಕೈಯಿಂದ …

Read More »

ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ: ಎಂ.ಬಿ.ಪಾಟೀಲ್.

ವಿಜಯಪುರ: ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ. ಆದಷ್ಟು ಬೇಗ ಲಸಿಕೆಯನ್ನು ನೀಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆ ಆತಂಕವೂ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ …

Read More »

ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ದಾವಣಗೆರೆಯಲ್ಲಿ ಸೋಂಕಿತೆ ಸಾವು

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಕ್ಸಿಜನ್ ಸಮಸ್ಯೆಯೂ ದೊಡ್ಡ ಮಟ್ಟದಾಗಿ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ಹರಿಹರ ತಾಲೂಲು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವನ್ನಪ್ಪಿದ್ದಾರೆ. ಸಾಯುವುದಕ್ಕೂ ಮುನ್ನ ಸೋಂಕಿತೆ ವಿಡಿಯೋ ಮಾಡಿದ್ದಾರೆ. ಸಾಯುವುದಕ್ಕೂ ಮುನ್ನ ಅಕ್ಸಿಜನ್ ಬರುತ್ತಿಲ್ಲ ಎಂದು ಸೋಂಕಿತ ಮಹಿಳೆ ವಿಡಿಯೋ ಮಾಡಿದ್ದಾರೆ. ಸರಿಯಾದ ಸಮಯಕ್ಕೆ …

Read More »

ಕೊರೊನಾ ಪಾಸಿಟಿವ್​ ಇದ್ದರೂ ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯ

ಮುದ್ದೇಬಿಹಾಳ: ಎಲ್ಲೆಡೆ ಕೊರೊನಾ ಮಹಾಮಾರಿ ಸೋಂಕು ಹೆಚ್ಚಾಗುತ್ತಿದ್ದು, ಮನೆ ಸದಸ್ಯರೇ ಸೋಂಕಿಗೊಳಗಾದವರನ್ನ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿ ಧೈರ್ಯ ತುಂಬಿದ್ದಾರೆ. ಕೊರೊನಾ ಪಾಸಿಟಿವ್​ ಇದ್ದರೂ ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದ್ದು, ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಒಳ್ಳೆಯ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯಕ್ಕೆ …

Read More »

ಸಿದ್ದರಾಮಯ್ಯ ಮೇಲೆ ಜಮೀರ್ ಅತಿಯಾದ ಗುರುಭಕ್ತಿ: ಹೈಕಮಾಂಡ್ ಕೆಂಗಣ್ಣು

ಬೆಂಗಳೂರು, ಮೇ 25: ಇತ್ತೀಚೆಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತೀವ್ರ ಮುಜುಗರಕ್ಕೆ ಒಳಗಾದರಾ? ಹೌದು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಜಮೀರ್ ಅಹ್ಮದ್ ತೋರುತ್ತಿರುವ ಅತಿಯಾದ ಪ್ರೀತಿ, ವಿಶ್ವಾಸವೇ ಕಾರಣ. ಒಂದು ವೇಳೆ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯನ್ನು …

Read More »

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತು..?

ಬೆಂಗಳೂರು: ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿ ಜಿಂದಾಲ್‌ ಕಂಪನಿಗೆ 3,677 ಎಕರೆ ಭೂಮಿ ಪರಭಾರೆ ಮಾಡಿರುವುದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಂಬಂಧ ಚರ್ಚೆ ನಡೆಸಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರು ಒತ್ತಡ ಹೇರಲು ಆರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ವಿಷಯದಲ್ಲಿ ಕೂಡ ಶಾಸಕರು ಒಗ್ಗೂಡುತ್ತಿರುವುದು ಪಕ್ಷದಲ್ಲಿನ ಹೊಸ ಬೆಳವಣಿಗೆಯಾಗಿದೆ. ಪಕ್ಷ ಮತ್ತು ಸರ್ಕಾರದಲ್ಲಿನ ಈ …

Read More »

ಕೋವಿಡ್‌ ಪೀಡಿತ ತಂದೆಯ ಮೃತದೇಹ ಸಾಗಾಟಕ್ಕೂ ಲಂಚದ ಹಣ: ಸಂಕಟ ಹಂಚಿಕೊಂಡ ನೃತ್ಯಪಟು

ಬೆಂಗಳೂರು: ಕೋವಿಡ್‌ ಪರೀಕ್ಷೆಯಿಂದ ಹಿಡಿದು ಮರಣ ಪ್ರಮಾಣಪತ್ರ ಪಡೆಯುವವರೆಗೆ.. ಹೆಜ್ಜೆ ಹೆಜ್ಜೆಗೂ ಸುಲಿಗೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಹೆಣ ಒಯ್ಯುವ ವಾಹನದವರೆಗೂ ಎಲ್ಲೆಡೆ ಚೆಲ್ಲಬೇಕು ದುಡ್ಡು. ಸಾಲ ಮಾಡಿ ₹ 4 ಲಕ್ಷ ಖರ್ಚು ಮಾಡಿದರೂ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕೋವಿಡ್‌ನಿಂದಾಗಿ ತಂದೆಯನ್ನು (ಮಂಜುನಾಥ ಆರಾಧ್ಯ, 52) ಕಳೆದುಕೊಂಡ ಕರುಣಾಜನಕ ಕತೆಯನ್ನು ಆನೇಕಲ್‌ನ ಚೇತನ್‌ ಆರಾಧ್ಯ ಬಿಚ್ಚಿಟ್ಟದ್ದು ಹೀಗೆ. ಮಧುಮೇಹ ಉಲ್ಬಣಗೊಂಡ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ ತಂದೆಗೆ ಕೋವಿಡ್‌ ಕಾಣಿಸಿಕೊಂಡಿದ್ದು, …

Read More »