Breaking News

ರಾಜಕೀಯ

ಆ ಲೆವಲ್ ಗೆ ಬಿಲ್ಡಪ್ ಕೊಡಲು ಅವರೇನು ಪ್ರಧಾನ ಮಂತ್ರಿನಾ.? ಅರುಣ್ ಸಿಂಗ್ ರಾಜ್ಯ ಭೇಟಿಗೆ ಯತ್ನಾಳ್ ವ್ಯಂಗ್ಯ

ಬೆಂಗಳೂರು: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದರ ಬಗ್ಗೆ ಲೇವಡಿ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರೇನು ಪ್ರಧಾನಮಂತ್ರಿನಾ? ಅಷ್ಟೊಂದು ಬಿಲ್ಡಪ್ ಕೊಡಲು? ಅವರು ಬರುವಾಗಲೇ ಗೊತ್ತಿತ್ತು ಏನ್ ಹೇಳ್ತಾರೆ ಎಂದು ಅದಕ್ಕೆ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವಾಗಲೇ ಗೊತ್ತಿತ್ತು, ನಾಯಕತ್ವ ಬದಲಾವಣೆ ವಿಚಾರವಾಗಿ ಅವರು ಏನು ಹೇಳುತ್ತಾರೆ ಎಂದು. ಗೊತ್ತಿದ್ದೇ ಅವರನ್ನು ಭೇಟಿಯಾಗಿಲ್ಲ. …

Read More »

ಬಿಎಸ್ ವೈ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ : ಸಿ ಪಿ ಯೋಗೇಶ್ವರ್

ಕೊಪ್ಪಳ: ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರು ಹೇಳಿದರು. ಕೊಪ್ಪಳದ ಅಂಜನಾದ್ರಿ ಬೆಟ್ಟದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವು ಟಾರ್ಗೇಟ್ ಮಾಡಲ್ಲ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ …

Read More »

ಯೋಗೇಶ್ವರ್-ಯತ್ನಾಳ್ ರಹಸ್ಯ ಭೇಟಿ: ಬಿಜೆಪಿಯಲ್ಲಿ ಶುರುವಾದ ತಳಮಳ

ವಿಜಯಪುರ: ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯಕ್ಕೆ ಮುಲಾಮು ಹಚ್ಚಲು ಯತ್ನಿಸಿದ್ದರು. ರಾಜ್ಯದಲ್ಲಿ ನಾಯಕತ್ವ ಬದಲಾಣೆಯಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೆ ಬಂಡಾಯ/ ಅತೃಪ್ತಿಗಳು ಇನ್ನೂ ರಾಜ್ಯ ಬಿಜೆಪಿಯಲ್ಲಿ ಮನೆಮಾಡಿದೆ ಎನ್ನಲು ಕೆಲ ದಿಢೀರ್ ಬೆಳವಣಿಗೆಗಳು ಕಂಡು ಬಂದಿವೆ. ಅತ್ತ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ದೆಹಲಿಗೆ …

Read More »

ಬಿಜೆಪಿಯ ಮೂವರಿಂದ ಅನ್ಯಾಯ : ದಿಲ್ಲಿಯಲ್ಲಿ ರಮೇಶ ಜಾರಕಿಹೊಳಿ ಹೇಳಿಕೆ

ಬೆಂಗಳೂರು : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ದಿಢೀರ್‌ ದಿಲ್ಲಿಗೆ ತೆರಳಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಸುಳಿವು ನೀಡಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಾರಕಿಹೊಳಿ, ಬಿಜೆಪಿಯ ಮೂವರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ತಮಗೆ ಅನ್ಯಾಯ ಮಾಡಿದ್ದು, ತಕ್ಕ ಪಾಠ ಕಲಿಸುತ್ತೇನೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೋಮವಾರ ರಾತ್ರಿ 2 ಗಂಟೆಗೆ ದಿಲ್ಲಿಯಿಂದ ಕರೆ ಬಂದಿತ್ತು. ಅವರ ಆಹ್ವಾನದ ಮೇರೆಗೆ ನಾನು ಬಂದಿದ್ದೇನೆ. ಯಾರನ್ನು ಭೇಟಿಯಾಗುತ್ತೇನೆ …

Read More »

ರಮೇಶ ಜಾರಕಿಹೊಳಿ ಶೀಘ್ರವೇ ಮತ್ತೆ ಸಚಿವ: ಉಮೇಶ ಕತ್ತಿ

ಬಾಗಲಕೋಟೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಳ ಸರಳ ಮನುಷ್ಯ. ಅವರ ಕ್ಯಾಸೆಟ್‌ (ಸಿಡಿ) ಕ್ರಿಯೆಟ್‌ ಮಾಡಿ ಅವರಿಗೆ ದುಃಖ ತಂದಿದ್ದಾರೆ. ಅವರು ಎರಡು ವರ್ಷ ಶಾಸಕರಾಗಿ ಇರುತ್ತಾರೆ. ಪ್ರಸಂಗ ಬಂದರೆ ಶೀಘ್ರವೇ ಸಚಿವರೂ ಆಗುತ್ತಾರೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಪ್ರಯತ್ನ ನಮ್ಮ ಸಚಿವ ಸಂಪುಟದಿಂದ ನಡೆದಿದೆ. ನಾನು, ಜಾರಕಿಹೊಳಿ ಒಂದೇ …

Read More »

ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಗೆ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು. ಬೆಡ್ ಇಲ್ಲದೆಯೇ ಬಹಳ ಜನ ಸತ್ತು ಹೋಗಿದ್ರು. ಆದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಕಾಂಗ್ರೆಸ್ ಬದುಕಿದೆ’ ಎಂಬ …

Read More »

ಊಟ ಮಾಡಿಸೋ ವೇಳೆ ತೆಂಗಿನ ಕಾಯಿ ಬಿದ್ದು 11 ತಿಂಗಳ ಮಗು ಸಾವು

ಹಾವೇರಿ: ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ ತಲೆ ಮೇಲೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ಎಂಬ ದಂಪತಿಗಳ ಮಗು ತನ್ವೀತ್ ವಾಲ್ಮೀಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ನಿನ್ನೆ ಬೆಳಗ್ಗೆ ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ತಕ್ಷಣವೇ ಮಗುವನ್ನು ಕುಟುಂಬಸ್ಥರು ದಾವಣಗೆರೆ ಖಾಸಗಿ …

Read More »

ಧಿಡೀರ್ ದೆಹಲಿಗೆ ಹಾರಿದ್ದಾರೆ ರಮೇಶ್ ಜಾರಕಿಹೊಳಿ ಅವ್ರಿಗೆ ರಾತ್ರಿ ಕರೆ ಮಾಡಿ ದ್ದಾದರು ಯಾರು…

ರಮೇಶ್ ಜಾರಕಿಹೊಳಿ ಒಂದು ಸರಕಾರವನ್ನು ಬೀಳಿಸಿ ಮತ್ತೊಂದು ಸರಕಾರ ರಚಿಸಲು ಪ್ರಮುಖ ಕಾರಣ ರಾದ ರಮೇಶ್ ಜಾರಕಿಹೊಳಿ ಪ್ರತಿದಿನ ಒಂದು ಹೊಸ ವಿಷಯ ದೊಂದಿಗೆ ಚರ್ಚೆ ಯಲ್ಲಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ ಸಡನ್ ಆಗಿ ದೆಹಲಿಗೆ ಹಾರಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದಿದ್ದ ಸಾಹುಕಾರರು ಮಧ್ಯಾಹ್ನ ಮುಖ್ಯ ಮಂತ್ರಿಗಳನ್ನಾ ಭೇಟಿ ಮಾಡಿ ದೆಹಲಿಗೆ ಹಾರಿದ್ದಾರೆ. ಹೌದು ನಿನ್ನೆ …

Read More »

ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ- ವಯೋಮಿತಿ ಹೆಚ್ಚಿಸಲು ಆಗ್ರಹ

ಧಾರವಾಡ: ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ನಿರಂತರ ಲಾಕ್‍ಡೌನ್ ಜಾರಿಗೊಳಿಸಿ, ಪೊಲೀಸ್ ನೇಮಕಾತಿಗಳನ್ನು ವಿಳಂಬ ಮಾಡಿದ್ದರಿಂದ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕುವ ವಯೋಮಿತಿ ಮೀರಿ ಹೋಗಿದೆ. ಹೀಗಾಗಿ ಸರ್ಕಾರ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಿಬ್ಬಂದಿ ಆಗ್ರಹಿಸಿದ್ದಾರೆ. ವಯೋಮಿತಿ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ವಯೋಮಿತಿ ಹೆಚ್ಚಿಸದಿದ್ದರೆ, ಪೊಲೀಸ್ ಹುದ್ದೆಯನ್ನು ನೆಚ್ಚಿಕೊಂಡು ಕುಳಿತ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗಲಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ …

Read More »

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ

ವಿಜಯಪುರ – ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಅವರು, ಯತ್ನಾಳ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಆದರೆ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ರಾಜಕೀಯ ಮಾತುಕತೆ ಇಲ್ಲ ಎಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಬಹು ಹಿಂದಿನಿಂದಲೇ ಪ್ರಯತ್ನ ನಡೆಸುತ್ತಿದ್ದರೆ ಯೋಗೀಶ್ವರ ಈಚೆಗೆ ಆರಂಭಿಸಿದ್ದಾರೆ. ಇದೇ …

Read More »