Breaking News

ರಾಜಕೀಯ

ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತ

ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಪಡೆ ಗುರುವಾರ ಅರಣ್ಯಭವನದಿಂದ ಅರಮನೆ ಪ್ರವೇಶಿಸಿದ್ದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಅರಣ್ಯಭವನದಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳನ್ನು ಸಿಂಗರಿಸಿ ಗಜಪಡೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು. ಅರಮನೆಯ ಜಯಮಾರ್ತಂಡ ದ್ವಾರದಲ್ಲಿ ಗಜಪಡೆಗೆ ಹೂಮಳೆಗರೆಯಲಾಯಿತು. ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಪೂಜೆ ನೆರವೇರಿಸಿ ಸ್ವಾಗತ ಕೋರಿದರು. ಇದೇ ವೇಳೆ ಕಬ್ಬು, ಬೆಲ್ಲ, …

Read More »

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …

Read More »

6ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾಮುಕ ಆತ್ಮಹತ್ಯೆಗೆ ಶರಣು: ರೈಲ್ವೆ ಹಳಿ ಮೇಲೆ ಶವ ಪತ್ತೆ

ಹೈದರಾಬಾದ್​: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಗುರುವಾರ ವರದಿಯಾಗಿದೆ. ಆರೋಪಿಯ ಮೃತದೇಹವು ಘಣಪುರ್​ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಬೇಕಿದೆ. ಆರೋಪಿಯನ್ನು ಪಲ್ಲಕೊಂಡ ರಾಜು (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್​ 9ರಂದು 6 ವರ್ಷದ ಬಾಲಕಿ ಸೈದಾಬಾದ್​ನ ಸಿಂಗ್ರೌಣಿ ಕಾಲನಿಯಲ್ಲಿರುವ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹವು ಬೆಡ್​ಶೀಟ್​ನಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ …

Read More »

‘ಮೂವರು ಹೆಂಡಿರು, ಸೊಸೆಯಂದಿರನ್ನಿಟ್ಟುಕೊಂಡಿರೋ ರಾಜು ತಾಳಿಕೋಟಿಗೆ ನನ್ನ ಬಗ್ಗೆ ಮಾತನಾಡೋ ನೈತಿಕ ಹಕ್ಕಿಲ್ಲ’

ವಿಜಯಪುರ: ಮೂವರು ಹೆಂಡಿರು, ಮೂರು ಮೂರು ಸೊಸೆಯಂದಿರನ್ನಿಟ್ಟುಕೊಂಡಿರುವ ರಾಜು ತಾಳಿಕೋಟಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಅವನೊಬ್ಬ ಬಕೆಟ್ ಕಲಾವಿದ, ಕಲಿಯುಗದ ಕುಡುಕ ಸ್ಕ್ರಿಪ್ಟ್ ಸಹ ಕದ್ದು ಕ್ಯಾಸೆಟ್ ಮಾಡಿದವ ಎಂದು ಅವನ ಅಳಿಯ ಶೇಕ್‌ಹುಸೇನ ಮೋದಿ ಆರೋಪಿಸಿದ್ದಾರೆ. ಕಲಿಯುಗದ ಕುಡುಕ ಸ್ಕ್ರಿಪ್ಟ್ ರಾಜು ತಾಳಿಕೋಟಿ ಬರೆದಿದ್ದು ಅಲ್ಲ. ಪಾಪ ಅದನ್ನು ಯಾರೋ ಬರೆದದ್ದು, ಅದನ್ನಿಟ್ಟುಕೊಂಡು ಈತ ಕ್ಯಾಸೆಟ್ ಮಾಡಿದ. ಇದೀಗ ನನಗೆ ದೊಡ್ಡ ದೊಡ್ಡ ನಿರ್ಮಾಪಕರು …

Read More »

ಆತ್ಮೀಯ ಗೆಳೆಯನ ಅಗಲಿಕೆ: ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಕುಟುಂಬ ಸಮೇತರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ನಿನ್ನೆ ನಿಧನರಾದ ಸ್ನೇಹಿತ ಹಾಘೂ ಸಂಬಂಧಿಕರಾದ ರಾಜು ಪಾಟೀಲ್​​ ಮನೆಗೆ ನೇರವಾಗಿ ತೆರಳಿದ್ದಾರೆ. ಹುಬ್ಬಳ್ಳಿಯ ಶಕ್ತಿ ನಗರದಲ್ಲಿರುವ ಮೃತ ರಾಜು ಪಾಟೀಲ್ ಮನೆಗೆ ಭೇಟಿ ನೀಡಿದ ಸಿಎಂ, ಸ್ನೇಹಿತನ ನಿಧನಕ್ಕೆ ಕಣ್ಣೀರ ವಿದಾಯ ಹೇಳಿದ್ದಾರೆ. ಬಳಿಕ ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

Read More »

ಒಂದೇ ಸೆಟ್​ನಲ್ಲಿ ಡ್ಯಾನ್ಸ್​ ಕಿಂಗ್ & ಪವರ್ ಸ್ಟಾರ್​ -ಏನ್ ಹೊಸ ಸಮಾಚಾರ..?

ಮನಸೆಲ್ಲಾ ನೀನೇ’ ಖ್ಯಾತಿಯ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್​​ ಮಾಡ್ತಿರೋ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೀರೊ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡೊಂದಕ್ಕೆ ಇಂಡಿಯನ್​ ಡ್ಯಾನ್ಸ್​ ಕಿಂಗ್​ ಪ್ರಭುದೇವ ಮತ್ತು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ನಾವು ಮೊದಲೇ ಹೇಳಿದ್ವಿ. ಅದರಂತೇ ಇದೀಗ ಪ್ರಭುದೇವ ಹಾಗೂ ಪುನೀತ್​ ಜೊತೆಗಿರುವ ಫೋಟೋಗಳು ವೈರಲ್​ ಆಗುತ್ತಿವೆ.     ಹೌದು, ಚಿತ್ರದ ಸೆಟ್​ನಲ್ಲಿ ಪ್ರಭುದೇವ ಹಾಗ ಪುನೀತ್​ …

Read More »

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಉಡುಪಿ, ಸೆ.15: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲೀಸರು ಎಸಗಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳ ಮೇಲಿನ ಪ್ರಕರಣವನ್ನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಎಫ್‌ಐ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಕುಂದಾಪುರದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಎಫ್‌ಐ ಉಡುಪಿ ಜಿಲ್ಲಾ ಮುಖಂಡ ನವಾಝ್ ಶೇಖ್, ಲಾಠಿ ಏಟಿನ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಫ್ಯಾಶಿಸ್ಟ್ ಸರಕಾರದ …

Read More »

ಸಾರಿಗೆ ಸಚಿವರ ತವರೂರಲ್ಲಿಯೇ ಬಸ್​ಗಾಗಿ ವಿದ್ಯಾರ್ಥಿಗಳ ಪರದಾಟ

ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ತವರೂರಲ್ಲಿಯೇ ವಿದ್ಯಾರ್ಥಿಗಳು ಬಸ್​ಗಳಿಗಾಗಿ ಪರದಾಟ ನಡೆಸಿದ ಘಟನೆ ನಡೆದಿದೆ. ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ, ಒಂದೇ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬಸ್​ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನರಕ ದರ್ಶನ ಅನುಭವಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಬಸ್ ಹತ್ತುತ್ತಿದ್ದಾರೆ. ಬಳ್ಳಾರಿಯಿಂದ ಹಡ್ಲಿಗಿ ಮಾರ್ಗವಾಗಿ ಸಂಚಾರ ಮಾಡುವ ಬಸ್​ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್​ ಬಾಗಿಲಲ್ಲಿ ನೇತಾಡುತ್ತ ಸಂಚಾರ …

Read More »

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶ

ಚಿಕ್ಕೋಡಿ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಡೆದಿದೆ. ಯಡೂರವಾಡಿ ಮತ್ತು ಮಾಂಜರಿವಾಡಿ ಗ್ರಾಮಕ್ಕೆ ಸೇರಿದ 15 ಕ್ಕೂ ಹೆಚ್ಚು ರೈತರ ಜಮೀನುಗಳ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ ಪಡುತ್ತಿದ್ದಾರೆ.. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ 15 …

Read More »

ವೆಂಟಿಲೇಟರ್ ಬೆಡ್ ಸಿಗದೆ ಸಂಬಂಧಿಕರನ್ನು ಕಳೆದುಕೊಂಡೆ: ಬಿಜೆಪಿ ಶಾಸಕ ಹರತಾಳು ಹಾಲಪ್ಪ

ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪಕ್ಷಾತೀತವಾಗಿ ಶಾಸಕರು ಆಕ್ರೋಶ ತೋಡಿಕೊಂಡ ಘಟನೆಗೆ ಬುಧವಾರ ವಿಧಾನಸಭೆ ಸಾಕ್ಷಿಯಾಯಿತು. ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಬೆಲೆ ಏರಿಕೆ ಚರ್ಚೆಗೆ ಸ್ಪೀಕರ್‌ ಕಾಗೇರಿ ಸಿದ್ದರಾಮಯ್ಯ ಅವರನ್ನು ಕರೆದರು. ಆಗ ಎದ್ದು ನಿಂತ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ನನ್ನ ವಿಷಯವೊಂದಿತ್ತು ಎಂದು ನೆನಪಿಸಿದರು. ಆಗ ಹೌದೌದು ಎನ್ನುತ್ತ ಅವಕಾಶ ನೀಡಿದರು. ಬಳಿಕ ಮಾತನಾಡಿದ ಹಾಲಪ್ಪ ಅವರು, ಪಾರ್ಶ್ವವಾಯು ರೋಗಿಗೆ …

Read More »