Breaking News

ರಾಜಕೀಯ

R.S.S. ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ : ಭದ್ರತೆ ಹೆಚ್ಚಳ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಚೇರಿಯನ್ನು ಶನಿವಾರ ಅಪರಿಚಿತರು ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   “ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯಾಹ್ನ 1 ಗಂಟೆಗೆ ಫೋನ್ ಕರೆ ಬಂದಿದ್ದು, ಮಹಲ್ ಪ್ರದೇಶದಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ವಲಯ ಡಿಸಿಪಿ ಗೋರಖ್ ಭಮ್ರೆ ಹೇಳಿದ್ದಾರೆ. ಬಾಂಬ್ ಪತ್ತೆ ಮತ್ತು …

Read More »

ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ವ್ಯಕ್ತಿಯೋರ್ವ ಮನನೊಂದು ಸ್ಮಶಾನದಲ್ಲಿಯೇ ಬೆಂಕಿ ಹಚ್ಚಿಕೊಂಡ

ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ವ್ಯಕ್ತಿಯೋರ್ವ ಮನನೊಂದು ಸ್ಮಶಾನದಲ್ಲಿಯೇ ಬೆಂಕಿ ಹಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಸಂತೋಷ ಕೊರಡಿ (೩೦) ಎಂಬಾತನೇ ಬೆಂಕಿಹಚ್ಚಿಕೊಂಡಾತ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ ಸಿಗಲಿಲ್ಲವೆಂದು ಮನನೊಂದಿದ್ದು, ಅಲ್ಲದೇ ಮಾನಸಿಕ ಅಸ್ವಸ್ಥನಾಗಿದ್ದ ಯುವಕ ಅಮ್ಮಿನಬಾವಿ ಗ್ರಾಮದ ಸ್ಮಶಾನದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆನ್ನಲಾಗಿದೆ. ಸಂತೋಷನಿಗೆ ದೇಹದ ಶೇಕಡಾ ಅರ್ಧದಷ್ಟು ಭಾಗ ಬೆಂಕಿಗೆ ಆಹುತಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಗಾಯಗೊಂಡ ಹಿನ್ನಲೆ ಹುಬ್ಬಳ್ಳಿ ಕಿಮ್ಸ್ …

Read More »

ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಚಾಲಕನಿಂದ ಅತ್ಯಾಚಾರ

ಪಣಜಿ: ರಜೆಯ ನಿಮಿತ್ತ ಗೋವಾಕ್ಕೆ ಕ್ರಿಸ್​ಮಸ್​ ಪಾರ್ಟಿ ಮಾಡಲು ಸ್ನೇಹಿತರ ಜೊತೆ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್​ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮುಂಬೈ ಮೂಲದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರದಂದು ಆರೋಪಿಯ ಬಸ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ವಾಸ್ಕೋದ ಜುವಾರಿನಗರದ ನಿವಾಸಿಯಾಗಿದ್ದಾನೆ. ಸಂತ್ರಸ್ತೆ 14 ಜನ ಸ್ನೇಹಿತರ ಜತೆಗೂಡಿ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಆಕೆಯ …

Read More »

ಪ್ರತಿ ಟನ್‌ ಕಬ್ಬಿಗೆ ಹೆಚ್ಚುವರಿ ₹150 | ಪ್ರತಿಭಟನೆ ಕೈಬಿಟ್ಟ ಕಬ್ಬು ಬೆಳೆಗಾರರು

ಬೆಂಗಳೂರು: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಜತೆಗೆ ಹೆಚ್ಚುವರಿಯಾಗಿ ₹ 150 ನೀಡಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕಬ್ಬು ಬೆಳೆಗಾರರು ಶುಕ್ರವಾರ ಸ್ಥಗಿತಗೊಳಿಸಿದರು.‌ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಎಫ್‌ಆರ್‌ಪಿ ಜತೆಗೆ ಪ್ರತಿ ಟನ್‌ಗೆ …

Read More »

ಕುಷ್ಟಗಿ ಕ್ಷೇತ್ರಕ್ಕೆ ಬಸವರಾಜ್ ಹಳ್ಳೂರಗೆ ಗಾಳ ಹಾಕಿದ ಜನಾರ್ದನ ರೆಡ್ಡಿ

ಕುಷ್ಟಗಿ:ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ಪಕ್ಷಕ್ಕೆ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಗಾಳ ಹಾಕಿದ್ದು,ಕುಷ್ಟಗಿ ಕ್ಷೇತ್ರದಲ್ಲಿ ರೆಡ್ಡಿ ಪಕ್ಷ ಇದೀಗ ಮುನ್ನೆಲೆಗೆ ಬಂದಿದೆ.   ಈಗಾಗಲೇ ಜೆಡಿಎಸ್ ತುಕಾರಾಮ್ ಸುರ್ವೆ ತನ್ನ ಅಭ್ಯರ್ಥಿ ಎಂದು ಪ್ರಕಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅಭ್ಯರ್ಥಿಗಳೆಂದು ಪ್ರಕಟಿಸುವುದು ಬಾಕಿ ಇದೆ. …

Read More »

ಮೆಜೆಸ್ಟಿಕ್‌ ‘ಅಕ್ರಮ’ ವ್ಯಾಪಾರ: ಪ್ರಶ್ನಿಸಿದರೆಚಾಕು- ಚೂರಿ ತೋರಿಸಿ ಕೊಲೆ ಬೆದರಿಕೆ

ಬೆಂಗಳೂರು: ಮೆಜೆಸ್ಟಿಕ್‌ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಸುರಂಗ ಮಾರ್ಗದಲ್ಲಿ ‘ಅಕ್ರಮ’ ವ್ಯಾಪಾರ ಜೋರಾಗಿದ್ದು, ಇದನ್ನು ಪ್ರಶ್ನಿಸುವ ಜನರ ಮೇಲೆ ವ್ಯಾಪಾರಿಗಳು ಹಲ್ಲೆ ಮಾಡುತ್ತಿದ್ದಾರೆ. ತಮ್ಮದೇ ಗುಂಪು ಕಟ್ಟಿಕೊಂಡು ಚಾಕು- ಚೂರಿ ತೋರಿಸಿ ಕೊಲೆ ಬೆದರಿಕೆಯೊಡ್ಡುತ್ತಿರುವ ದೂರುಗಳು ಹೆಚ್ಚಾಗಿವೆ.   ನಿಲ್ದಾಣಕ್ಕೆ ಬಂದು ಹೋಗುವ ಜನರ ಸಂಚಾರಕ್ಕೆ ಅನುಕೂಲವಾಗಲೆಂದು ಸುರಂಗ ಮಾರ್ಗ ನಿರ್ಮಿಸಲಾಗಿದ್ದು, ‘ಕಡ್ಡಾಯವಾಗಿ ಸುರಂಗ ಮಾರ್ಗ ಬಳಸಿ’ ಎಂಬ ನಾಮಫಲಕಗಳನ್ನು ನೇತುಹಾಕಲಾಗಿದೆ. ಆದರೆ, ಜನರು ಓಡಾಡುವ …

Read More »

ಐದು ಮೆಗಾ ಹಾಸ್ಟೆಲ್‌ಗಳ ನಿರ್ಮಾಣ:C.M. ಬೊಮ್ಮಾಯಿ

ಬೆಳಗಾವಿ: ‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಐದು ಸ್ಥಳಗಳಲ್ಲಿ ಮೆಗಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ 2022-23ನೇ ಸಾಲಿನ ಪೂರಕ ಅಂದಾಜಿನ ಎರಡನೇ ಕಂತಿನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಪ್ರಥಮ ಬಾರಿ ಮೆಗಾ ಹಾಸ್ಟೆಲ್‌ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಮಂಗಳೂರು, ಧಾರವಾಡ, ಮೈಸೂರು, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಈ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು. ‘ಅಗತ್ಯವಿದ್ದರೆ ಇತರ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ …

Read More »

ಮೀಸಲಾತಿ | ರಂಗನ ಮಂಗ ಮಾಡಲು ಹೊರಟಿದ್ದಾರೆ” H.D.K

ತುಮಕೂರು: ಒಕ್ಕಲಿಗ, ಲಿಂಗಾಯತ ಸಮುದಾಯದ ಮೀಸಲಾತಿ ಸಂಬಂಧ ಪ್ರವರ್ಗ ಬದಲಾವಣೆ ಮಾಡುವ ಮೂಲಕ ‘ರಂಗನ ಮಂಗ ಮಾಡಲು’ ಬಿಜೆಪಿಯವರು ಹೊರಟಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರವರ್ಗ ಬದಲಾವಣೆ ಮಾಡಿರುವುದರಿಂದ ಎರಡೂ ಸಮುದಾಯಗಳಿಗೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ. ಪ್ರವರ್ಗ ಬದಲಾವಣೆ ಮಾಡಿರುವುದೇ ಸಾಧನೆ. ಈವರೆಗೆ ಮೂಗಿಗೆ ತಪ್ಪ ಹಚ್ಚುತ್ತಿದ್ದವರು, ಈಗ ಹಣೆಗೆ ಹಚ್ಚಿದ್ದಾರೆ. …

Read More »

ಐಪಿಎಸ್ ಅಧಿಕಾರಿ ಆರ್‌. ದಿಲೀಪ್ ನಿಧನ

ಬೆಂಗಳೂರು: ರಾಜ್ಯದ ಐಪಿಎಸ್ ಅಧಿಕಾರಿ ಆರ್. ದಿಲೀಪ್ (53) ಅವರು ಅನಾರೋಗ್ಯದಿಂದಾಗಿ ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಸಿಐಡಿ ಆರ್ಥಿಕ ವಿಭಾಗದ ಡಿಐಜಿಪಿ ಆಗಿ ಕೆಲಸ ಮಾಡುತ್ತಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಬಿಇ ಪದವೀಧರರಾಗಿದ್ದ ದಿಲೀಪ್ ಅವರು 2005ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಧಾರವಾಡ, ಉತ್ತರ ಕನ್ನಡ ಹಾಗೂ ಹಲವು ಜಿಲ್ಲೆಗಳ ಎಸ್ಪಿ ಆಗಿದ್ದರು. ಹುಬ್ಬಳ್ಳಿ-ಧಾರವಾಡ ಕಮಿಷನರ್ ಆಗಿಯೂ ಕೆಲಸ ಮಾಡಿದ್ದರು

Read More »

ಪ್ರಧಾನಿ ಮೋದಿ ಹೋಲುತ್ತಿದೆ ಕೊಚ್ಚಿನ್ ಕಾರ್ನಿವಲ್ ನಲ್ಲಿ ಸುಡಲು ಸಿದ್ಧವಾದ ಪ್ರತಿಕೃತಿ: ಬಿಜೆಪಿ ಆಕ್ರೋಶ

ಕೊಚ್ಚಿ: ಕೊಚ್ಚಿನ್ ಕಾರ್ನೀವಲ್‌ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎಸ್. ಶೈಜು, ಪ್ರತಿಕೃತಿ ಮುಖ ಮತ್ತು ವೇಷಭೂಷಣ ಮೋದಿಯನ್ನು ಹೋಲುತ್ತದೆ ಮತ್ತು ಅದು ದೇಶದ ಪ್ರಧಾನಿಯನ್ನು ಅವಮಾನಿಸುವ ಯತ್ನ. ಕೊಚ್ಚಿನ್ ಕಾರ್ನಿವಲ್‌ಗೆ ಅಡ್ಡಿಪಡಿಸಲು ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಪ್ರತಿಭಟನೆಯ ನಂತರ ಪ್ರತಿಕೃತಿ ರೂಪ ಬದಲಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದರು. …

Read More »