ಬೆಳಗಾವಿ: ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿಯನ್ನು, ಮಹಾರಾಷ್ಟ್ರದ ಪೊಲೀಸರು ಭಾನುವಾರ ಇಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು. ತನಿಖೆಗೆ ಮಹಾರಾಷ್ಟ್ರದ ಎಟಿಎಸ್ ಮತ್ತು ನಾಗ್ಪುರದ ಪೊಲೀಸರ ತಂಡ ಧಾವಿಸಿದ್ದು, ಕೈದಿಯಿಂದ ಮಾಹಿತಿ ಕಲೆ ಹಾಕಿತು. ಆತನಿಂದ ಡೈರಿ ಜಪ್ತಿ ಮಾಡಿದೆ. ಆದರೆ, ಕರೆ ಮಾಡಲು ಬಳಸಿದ್ದ ಮೊಬೈಲ್ ಸಿಕ್ಕಿಲ್ಲ. ಕೊಲೆ ಸೇರಿ …
Read More »2ಎ ಮೀಸಲಾತಿ ಸಿಗುವವರೆಗೂ ಸಿಂಹಾಸನದಲ್ಲಿ ಕೂರುವುದಿಲ್ಲ: ವಚನಾನಂದ ಸ್ವಾಮೀ
ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬೆಳ್ಳಿ ಸಿಂಹಾಸನದಲ್ಲಿ ಕೂರುವುದಿಲ್ಲ’ ಎಂದು ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರಕಟಿಸಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇತ್ರದಲ್ಲಿ ಭಾನುವಾರ ನಡೆದ ಹರಜಾತ್ರೆ ಹಾಗೂ ‘ಪಂಚಮ ಪೀಠಾರೋಹಣ’ ಸಮಾರಂಭದಲ್ಲಿ ಅವರು ಸಿಂಹಾಸನದಲ್ಲಿ ಕೂರಲು ನಿರಾಕರಿಸಿದರು. ‘ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಿ ಜನರ ಹೃದಯ ಸಿಂಹಾಸನದಲ್ಲಿ ಕೂರಲು ಇಚ್ಛೆ ಪಡುತ್ತೇನೆ. ಪಂಚಮ ಪೀಠಾರೋಹಣ ಮಾಡುವುದಿಲ್ಲ’ ಎಂದು …
Read More »ಗಂಗಾಮತಸ್ಥರಿಗೆ ST ಮೀಸಲಾತಿ ಸೌಲಭ್ಯ : ಸಿಎಂ
ಹಾವೇರಿ: ‘ಅಂಬಿಗರ ಸಮಾಜಕ್ಕೆ (ಗಂಗಾಮತಸ್ಥರು) ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಸೌಲಭ್ಯ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು. ತಾಲ್ಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ಪರಿಶಿಷ್ಟ ಪಂಗಡದ ಮೀಸಲಾತಿ ಅಡಿ ಪರಿಗಣಿಸಲು ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ ಈಗಾಗಲೇ ಚರ್ಚಿಸಲಾಗಿದೆ. ಕೇಂದ್ರದ …
Read More »ಸವದತ್ತಿ : ಹಾಳು ಕೊಂಪೆಯಾದ ‘ಮಿನಿಹಂಪಿ’
ಹೂಲಿ (ಸವದತ್ತಿ ತಾ.): ಮೈ ನವಿರೇಳಿಸುವಂಥ ಶಿಲ್ಪಕಲಾಕೃತಿ ಹೊಂದಿದ ಈ ಜಾಗ ಹಾಳು ಕೊಂಪೆಯಾಗಿದೆ. ಶಿಲ್ಪವೈಭವದ ಶ್ರೀಮಂತಿಕೆಯ ಕಾರಣದಿಂದ ಇದಕ್ಕೆ ‘ಮಿನಿಹಂಪಿ’ ಎಂದೇ ಕರೆಯಲಾಗುತ್ತದೆ. ರೋಮಾಂಚಕ ಇತಿಹಾಸವನ್ನು ತನ್ನ ಒಡಲೊಳಗೆ ಹುದುಗಿಸಿ ಇಟ್ಟುಕೊಂಡ ಮಂದಿರಗಳು, ಕಟ್ಟಡಗಳು ದುಷ್ಕರ್ಮಿಗಳ ಉಪಟಳಕ್ಕೆ ನಲುಗಿ ಹೋಗಿವೆ. ಸವದತ್ತಿಯಿಂದ ರಾಮದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಹೂಲಿ ಎಂಬ ಗ್ರಾಮದ ಕತೆ-ವ್ಯಥೆ ಇದು. ಪುರಾತನ ಕಾಲದ 101 ದೇವಸ್ಥಾನಗಳು, 101 ಬಾವಿಗಳನ್ನು ಹೊಂದಿದ್ದು ಈ ಊರಿನ ಹಿರಿಮೆ. …
Read More »ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್
ಬೆಂಗಳೂರು: ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು) ಸ್ಥಾಪನೆಗೆ ಭಾರತ ಸರ್ಕಾರದ ಗೃಹ ಸಚಿವಾಲಯವು ತಾತ್ವಿಕ ಅನುಮೋದನೆಯನ್ನು ನೀಡಿದೆ. ಟ್ವಿಟರ್‌ನಲ್ಲಿ ಸುದ್ದಿ ಹಂಚಿಕೊಂಡಿರುವ ಕೇಂದ್ರ ಸಚಿವ ಮತ್ತು ಧಾರವಾಡ ಸಂಸದಪ್ರಲ್ಹಾದ ಜೋಶಿ, ಅವಳಿ ನಗರಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತೊಂದು ಸಂಸ್ಥೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ.ಎನ್‌ಎಫ್‌ಎಸ್‌ಯು ಅಪರಾಧ ತನಿಖಾ ಕ್ಷೇತ್ರದಲ್ಲಿ ನುರಿತ ಮಾನವಶಕ್ತಿಯನ್ನು ಸೃಷ್ಟಿಸುತ್ತದೆ ಮತ್ತು ತನಿಖೆ, ತಡೆಗಟ್ಟುವಿಕೆ ಮತ್ತು ಅಪರಾಧಗಳ ಪತ್ತೆಗೆ ಸಂಬಂಧಿಸಿದ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು …
Read More »ವಾಡಿ: ಗೂಡ್ಸ್ ರೈಲು ಅಪಘಾತ. ತಪ್ಪಿದ ದುರಂತ
ವಾಡಿ: ಹಳಿ ತುಂಡಾದ ಪರಿಣಾಮ ಸುಮಾರು ಮೂವತ್ತು ಬೋಗಿಗಳುಳ್ಳ ಗೂಡ್ಸ್ ರೈಲು ಅಪಘಾತಕ್ಕೀಡಾದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಶನಿವಾರ ಮಧ್ಯಾಹ್ನ ಹೈದರಾಬಾದ್ ನಿಂದ ವಾಡಿ ಮಾರ್ಗವಾಗಿ ಬರುತ್ತಿದ್ದ ಸಿಮೆಂಟ್ ಸಾಗಾಣಿಕೆ ಗೂಡ್ಸ್ ರೈಲು ಚಿತ್ತಾಪುರ ನಿಲ್ದಾಣ ದಾಟಿದ ಕೆಲವೇ ಹೊತ್ತಿನಲ್ಲಿ ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ. ಘಟನೆಯಿಂದ ಎರಡು ಬೋಗಿಗಳು ಮುಗುಚಿ ಬಿದ್ದಿದ್ದು. ಬೋಗಿಗಳಲ್ಲಿದ್ದ ನೂರಾರು ಟನ್ ತೂಕದ ಸಿಮೆಂಟ್ ಚೀಲಗಳು …
Read More »ಸಂಕ್ರಮಣದ ಶುಭದಿನದಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ `ಯೋಗಥಾನ್’
ಬೆಳಗಾವಿ : ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ ‘ಯೋಗ ಸಾಕ್ಷರತಾ ರಾಜ್ಯ’ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಇಂದು ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು. ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ನೇಸರನ ಹೊಂಗಿರಣಗಳ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲುಗಳ ಎದುರು ಸಾವಿರಾರು ಜನರು ಯೋಗ ಪ್ರದರ್ಶಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, …
Read More »ನಗ್ನ ವಿಡಿಯೋ ಕಾಲ್ ಬಲೆಗೆ ಬಿದ್ದು 2.69 ಕೋಟಿ ರೂ.ಕಳೆದುಕೊಂಡ ಉದ್ಯಮಿ..!
ಅಹಮದಾಬಾದ್: ಗುಜರಾತ್ ಮೂಲದ ಉದ್ಯಮಿಯೊಬ್ಬರು ನಗ್ನ ವಿಡಿಯೋ ಕಾಲ್ ಬಲೆಗೆ ₹2.69 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿಗೆ ಕಳೆದ ವರ್ಷ ಆಗಸ್ಟ್ 8 ರಂದು ಮೋರ್ಬಿಯಿಂದ ರಿಯಾ ಶರ್ಮಾ ಎಂದು ಗುರುತಿಸಿಕೊಂಡ ಮಹಿಳೆಯಿಂದ ಕರೆ ಬಂದಿತ್ತು ಎಂದು ಅವರು ಹೇಳಿದರು. ಅವರು ನಂತರ ವೀಡಿಯೊ ಕರೆ ಸಮಯದಲ್ಲಿ ಅವನ ಬಟ್ಟೆಗಳನ್ನು ತೆಗೆಯುವಂತೆ ಮನವರಿಕೆ ಮಾಡಿದರು. ನಂತರ ಅವರು ಕರೆಯನ್ನು …
Read More »ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ : ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA ರಘು
ಬೆಂಗಳೂರು : ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಮನೆಮನೆಗಳಿಗೆ ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಿಲಿಕಾನ್ ಸಿಟಿಯ ಕೆಲ ಭಾಗಗಳಲ್ಲಿ ರಾಜಕೀಯ ನಾಯಕರು ಚುನಾವಣೆಗಾಗಿ ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಜನರಿಗೆ ಗಿಫ್ಟ್ ನೀಡುವ ಮೂಲಕ ಮತ ಪಡೆಯೋದಕ್ಕೆ ಮುಂದಾಗಿದ್ದಾರೆ. ಅದರಲ್ಲೂ …
Read More »ಹಿಂಡಲಗಾ ಕೈದಿ ಕೇಂದ್ರ ಸಚಿವರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿ ಸಿಕ್ಕ ಕೂಡಲೆ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆದರೆ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ. ಕೈದಿಯೊಬ್ಬ, ಕೇಂದ್ರ ಮಂತ್ರಿಗೆ ಜೈಲಿನಿಂದ ಕರೆ ಮಾಡಿದ್ದು ಹೇಗೆ ಎಂದು ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರದ …
Read More »
Laxmi News 24×7