Breaking News

ಮಂಡ್ಯ

ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ವಿತರಣೆ: ಪಾಲಕರ ಆಕ್ರೋಶ

  ಗುಡಿಬಂಡೆ : ತಾಲೂಕಿನ ಜಂಬಿಗೇಮರದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ. ಗ್ರಾಮದ ನಿವಾಸಿಗಳು ಅಂಗನವಾಡಿಗೆ ಭೇಟಿ ನೀಡಿದಾಗ ಮಕ್ಕಳಿಗೆ ಕಳಪೆ ಆಹಾರ ವಿತರಿಸುವುದು ಬೆಳಕಿಗೆ ಬಂದಿದೆ. ಕೇಂದ್ರದಲ್ಲಿಸಂಗ್ರಹಿಸಿರುವ ಒಡೆದ ಮೊಟ್ಟೆ ನೋಡಿ ಬೇಸರಗೊಂಡ ಅವರು, ಕಳಪೆ ಮಟ್ಟದ ಆಹಾರ ಸೇವಿಸುತ್ತಿರುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿ, ಇದನ್ನು ಕಂಡು ಕಾಣದಂತೆ ವರ್ತಿಸುವ ಸಿಡಿಪಿಒ, …

Read More »

ಕೆ.ಆರ್.ಪೇಟೆ ಪೇದೆಗೆ ಕೊರೊನಾ- 2 ಠಾಣೆ ಸೀಲ್‍ಡೌನ್……….

ಮಂಡ್ಯ: ಮಳವಳ್ಳಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಯೊಬ್ಬರಿಗೆ ಕೊರೊನಾ ತಗುಲಿದ ಬೆನ್ನಲ್ಲೇ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ. ಕ್ರೈಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಯು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದ ವೇಳೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಪೇಗೆ ಸೋಂಕು ದೃಢಪಡುತ್ತಿದ್ದಂತೆ ಅವರು ಭೇಟಿ ನೀಡಿದ್ದ ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ನಾಲ್ಕು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ …

Read More »

ಇಂದು ಸಂಜೆ ದಿಢೀರ್ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಮಾಡಿರುವ ವ್ಯವಸ್ಥೆಯನ್ನ ಪರಿಶೀಲಿಸಿದ್ರು.

ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ಸೂಚಿಸಿದ್ದರು. ಅಧಿಕಾರಿಗಳು ಆದೇಶವನ್ನ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಖುದ್ದು ಸಚಿವರೆ ಭೇಟಿ ನೀಡಿ ಪರಿಶೀಲಿಸಿದ್ರು. ಕೆ ಆರ್ ಪೇಟೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ರು.  ಇನ್ನೂ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರನ್ನ ನೋಡಿಕೊಳ್ಳಬೇಕು. ಚಿಕ್ಕಮಕ್ಕಳಿದ್ದಾರೆ ಅವರಿಗೆ ಹಾಲು, ಹಣ್ಣಿನ …

Read More »

ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಸೋಂಕು ಪತ್ತೆ.ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆ ಸೀಲ್ ಡೌನ್.

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು ವಿವರಿಸಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು …

Read More »

ಸಕ್ಕರೆ ನಾಡಿಗೆ ಮತ್ತೆ ಕೊರೊನಾ ಶಾಕ್ – ಜಿಲ್ಲೆಗೆ ತಲೆನೋವಾದ ಮುಂಬೈ ನಂಟು!

ಮಂಡ್ಯ: ಮಹಾಮಾರಿ ಕೊರೊನಾ ಅಬ್ಬರದಿಂದ ಸಕ್ಕರೆ ನಾಡು ದಿನೇ ದಿನೇ ಸುಧಾರಿಸಿಕೊಳ್ಳುವಷ್ಟರಲ್ಲೇ ಮತ್ತೆ ಕೊರೊನಾ ಶಾಕ್ ಕೊಟ್ಟಿದೆ.  ಸೋಮವಾರ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾತಂಕ ತಂದೊಡ್ಡಿದ್ದ ತಬ್ಲಿಘಿ ಹಾಗೇ ಜ್ಯುಬಿಲಿಯಂಟ್ ನಂಟಿಂದ ದಿನೇ ದಿನೇ ಮಂಡ್ಯ ಜಿಲ್ಲೆ ಸುಧಾರಿಸಿಕೊಳುತ್ತಿತ್ತು. ಆದರೆ ಈ ಮಧ್ಯೆ ಕೊರೊನಾ ಮತ್ತೆ ಜನರ ನಿದ್ದೆಗೆಡಿಸಿದೆ. ತಬ್ಲಿಘಿ, ಜ್ಯುಬಿಲಿಯಂಟ್ ಬಳಿಕ ಈ ಮುಂಬೈ ನಂಟು ಜಿಲ್ಲೆಯಲ್ಲಿ ಹೊಸದೊಂದು ತಲೆನೋವಾಗಿದೆ. ಸೋಮವಾರ ಪಾಸಿಟಿವ್ ಆಗಿರುವ ಎರಡು …

Read More »

ಸಕ್ಕರೆನಾಡಿಗೆ ಮುಳುವಾಗುತ್ತಿದೆ ಮಹಾರಾಷ್ಟ್ರ……..

ಮಂಡ್ಯ: ದಿನೇ ದಿನೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಮಂಡ್ಯಕ್ಕೆ ಮುಂಬೈ ಲಿಂಕ್ ಹೆಚ್ಚಾಗಿದ್ದು, ಶವ ತಂದ ಬಳಿಕ ಇದೀಗ ಮುಂಬೈನಿಂದ ಗರ್ಭಿಣಿಯೊಬ್ಬರು ಬಂದಿದ್ದು, ಅವರಿಗೂ ಕೊರೊನಾ ದೃಢವಾಗಿದೆ. ಮಂಡ್ಯಕ್ಕೆ ಮುಂಬೈಯ ಕೊರೊನಾ ಚೈನ್ ಲಿಂಕ್ ಹೆಚ್ಚಾಗುತ್ತಿದೆ. ಮುಂಬೈನಿಂದ ಮಂಡ್ಯಕ್ಕೆ ಶವ ತಂದು ಅಂತ್ಯಕ್ರಿಯೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಂಬುಲೆನ್ಸ್‍ನಲ್ಲಿ ಶವ ತಂದ ದಿನವೇ ಗರ್ಭಿಣಿಯೊಬ್ಬರನ್ನ ಮುಂಬೈನಿಂದ ಮಂಡ್ಯದ ಕೆ.ಆರ್.ಪೇಟೆಗೆ ಕರೆತರಲಾಗಿತ್ತು. ಇದೀಗ ಆ …

Read More »

ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮದ್ಯ ಮಾರಾಟವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕನ್ನಡ ಸೇನೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

    ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಕಚೇರಿಗೆ ತೆರಳಿದ ಕನ್ನಡ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿ ಮದ್ಯ ಮಾರಾಟ ಸ್ಥಗಿತಕ್ಕೆ ಆಗ್ರಹಿಸಿದರು. ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು. ಮದ್ಯ ಮಾರಾಟದ ಜತೆಗೆ ಗುಟ್ಕಾ ಮಾರಾಟಕ್ಕೂ ಸರ್ಕಾರ ಆದೇಶ ಮಾಡಿರುವುದು ಸರಿಯಲ್ಲ. ತಕ್ಷಣ ಮಾರಾಟ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. …

Read More »

ಮಂಡ್ಯ:ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಆಹಾರಪದಾರ್ಥಗಳ ಕಿಟ್ ವಿತರಣೆ.

  ಮಂಡ್ಯ :ನಾಗಮಂಗಲ ತಾಲ್ಲೂಕಿನ ಬಿಳಗುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಆವರಣದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಮತ್ತು ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿ ರವಿರವರು ಚಾಲನೆ ನೀಡಿದರು ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳ ಮಹಾ ಮಂಡಳಿಗಳಲ್ಲೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ವಿನೂತನ ಕಾರ್ಯಕ್ರಮವನ್ನು ನಿರೂಪಿಸಿದೆ. ಪ್ರಪ್ರಥಮ ಬಾರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಜಿಲ್ಲೆಯ 1 ಲಕ್ಷದ …

Read More »

ನಾಗಮಂಗಲ ಹಾಗೂ ಕೆ ಆರ್ ಪೇಟೆ ಮಾರ್ಗಗಳನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ

  ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೋಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದಲ್ಲಿ ಕರೋನ (ಕೋವಿಡ್19) 1 ಪಾಸಿಟಿವ್ ಬಂದ ಇನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಗಡಿಭಾಗವಾದ ಕಾರಣ, ನಾಗಮಂಗಲ ಹಾಗೂ ಕೆ ಆರ್ ಪೇಟೆ ಮಾರ್ಗಗಳನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಾಗೂ ಸಂತೇಬಾಚಹಳ್ಳಿ ಹಾಗೂ ತಾಲೋಕಿನ ಜನತೆಯ ಇತರಕ್ಷಣೆಗಾಗಿ ಅಂಗಡಿ ಮುಂಗಟ್ಟನ್ನ ಲಕ್ ಡೌನ್ ಮಾಡಲಾಗಿದೆ. ಇದರಬಗ್ಗೆ ಸಂತೇಬಾಚಹಳ್ಳಿ ಗ್ರಾಮಪಂಚಾಯತ್ ಸದಸ್ಯರು ಹಾಗೂ ಪ್ರಾರ್ಥಮಿಕ ಕೃಷಿ ಪತ್ತಿನ …

Read More »

ಎಂ.ವಿ.ವಿ.ಹಾಗೂ ಎಂ.ಪಿ.ವೈ.ಹುಳಿಯಾರ ಕುಟುಂಬದ ವತಿಯಿಂದ ದಿನಸಿ ಕಿಟ್ ವಿತರಣೆ

  ಮಂಡ್ಯ: ನಾಗಮಂಗಲ ಪಟ್ಟಣದ ಎಂವಿವಿ ಹಾಗೂ ಎಂಪಿವೈ ಹುಳಿಯಾರ್ ಕುಟುಂಬದ ವತಿಯಿಂದ ನಾಗಮಂಗಲ ತಾಲ್ಲೂಕಿನ ಕಡುಬಡವರು ಹಾಗೂ ನಿರ್ಗತಿಕರಿಗೆ ಆಹಾರ ಕೀಟಗಳನ್ನು ವಿತರಿಸಲಾಗುತ್ತಿದೆ ಎಂದು ದಾನಿಗಳು ತಿಳಿಸಿದರು ಪಟ್ಟಣದ ಟಿಬಿ ಬಡಾವಣೆಯ ಕಡುಬಡವರು ವಾಸಿಸುವಂತಹ ಸುಭಾಷ್ ನಗರ ಕಾಲೋನಿ ನಾಗಮಂಗಲದ ಮಾರುತಿನಗರ ಸಂತೆ ಮೈದಾನದ ನಿವಾಸಿಗಳು ಟ್ಯಾಂಕ್ ಮೈದಾನದ ಗುಡಿಸಲು ನಿವಾಸಿಗಳಿಗೆ ಇಂದು ಆಹಾರಧಾನ್ಯದ ಕೀಟಗಳನ್ನು ವಿತರಿಸಲಾಯಿತು ಇದೇ ಸಂದರ್ಭದಲ್ಲಿ ಮಾತನಾಡಿದ ಪಣಿ ಕಿರಣ ಕರುನಾ ವೈರಸ್ ಎಲ್ಲೆಡೆ …

Read More »