Breaking News

ಬೆಳಗಾವಿ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ.

ಕುಡಚಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಇಂದು ಬೆಳ್ಳಂಬೆಳಗ್ಗೆ ಕೃಷ್ಣಾ ನದಿ ವೀರ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು. ಸೇತುವೆ ಜಲಾವೃತಗೊಂಡ ಪರಿಣಾಮ ಜಮಖಂಡಿ ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡಲಾಗಿದೆ.

Read More »

ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿಯಲ್ಲಿ ನಡೆದಿದೆ. ಹನುಮಂತ ಖೋತ (34) ಹಾಗೂ ಖಂಡೋಬಾ ಖೋತ (32) ಮೃತಪಟ್ಟ ದುರ್ದೈವಿಗಳು.   ಕಳೆದ ಹಲವಾರು ವರ್ಷಗಳಿಂದ ಈ ಇಬ್ಬರು ಸಹೋದರರ ನಡುವೆ ಜಮೀನು ವಿವಾದ ಇತ್ತು ಎನ್ನಲಾಗಿದೆ ಅಲ್ಲದೆ ವಿವಾದ ಬಗೆಹರಿಸಲು ರಾಜಿ ಸಂಧಾನ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ. ಈ ನಡುವೆ ಮತ್ತೆ ಇಬ್ಬರು …

Read More »

D.K. Shivakumar 15 ದಿನಗಳಲ್ಲಿ ಮತ್ತೆ ತಿಹಾರ್‌ ಜೈಲಿಗೆ: ಯತ್ನಾಳ್‌

ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ನಾನು ಸಲ್ಲಿಸಿರುವ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಲಿದ್ದು 15 ದಿನಗಳ ಒಳಗೆ ಡಿಕೆಶಿ ಮತ್ತೆ ತಿಹಾರ್‌ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಡಿಕೆಶಿ ವಿರುದ್ಧದ ಕೇಸ್‌ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಡಿಕೆಶಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಬಿಜೆಪಿಯಲ್ಲಿ ತಪ್ಪು …

Read More »

ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

ಚಿಕ್ಕೋಡಿ: ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ, ಕೊಯ್ನಾ, ನವಜಾ ಮತ್ತು ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಹಾಗೂ ರಾಜ್ಯದ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ಭಾಗದಲ್ಲಿಯೂ ನಿರಂತರವಾಗಿ ಮಳೆ ಆಗುತ್ತಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ 1.05 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳು ಒಡಲು ದಾಟಿ ಹರಿದು ಪಕ್ಕದ ಬೆಳೆಗಳಿಗೆ ನುಗ್ಗಿವೆ. ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ, ಕೊಯ್ನಾ, ನವಜಾ ಹಾಗೂ …

Read More »

ಕೃಷಿ ಕಾಯ್ದೆ ಹಿಂಪಡೆಯಲು ರೈತ ಸಂಘಟನೆಗಳ ಆಗ್ರಹ

ಬೆಳಗಾವಿ: ತಮಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು …

Read More »

ಅಂಕಲಗಿ ಗ್ರಾಮದಲ್ಲಿ ಬೈಕ್ ಮತ್ತು ಕ್ರೂಸರ್ ನಡುವೆ ಡಿಕ್ಕಿ: ಓರ್ವ ಸಾವು

ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬೈಕ್ ಮತ್ತು ಕ್ರೂಸರ್ ನಡುವೆ ಡಿಕ್ಕಿ: ಓರ್ವ ಸಾವು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ, ಅಡಿವೆಪ್ಪನ ಮಠದ ಮುಂಭಾಗದ ರಸ್ತೆಯಲ್ಲಿ ಬೈಕ್ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ 18 ವರ್ಷದ ಅನೀಲ್ ಬಿಚಗತ್ತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಬೈಕ್ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲ್ಮೆಟ್ ಧರಿಸದೆ ಇದ್ದುದರಿಂದ ಅನೀಲ್ ತಲೆಗೆ ಗಂಭೀರ …

Read More »

ಬೆಳಗಾವಿ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ನಿಪ್ಪಾಣಿ(ಬೆಳಗಾವಿ): ಸತತ ಮಳೆಯಿಂದಾಗಿ ಇಲ್ಲಿನ ಜತ್ರಾಟ ವೇಸ್‌ನಲ್ಲಿ ಭಾನುವಾರ ಬೆಳಿಗ್ಗೆ ಪಕ್ಕದ ಮನೆಯ ಗೋಡೆ ತಗಡಿನ ಶೆಡ್ ಮೇಲೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತಿರುಪತಿ ರಾಜಾರಾಮ ವಟಕರ್(50) ಮೃತರು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮುಜಫ್ಫರ್ ಬಳಿಗಾರ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಜಾಂಬೋಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಜಾಂಬೋಟಿಯಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಶನಿವಾರದಿಂದ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಾಂಬೋಟಿಯಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಜಾಂಬೋಟಿ- ಪೀರಣವಾಡಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ- 54) ಕುಸಮಳಿ ಗ್ರಾಮದ ಹತ್ತಿರದ ಸೇತುವೆ ಹಳೆಯದಾಗಿದೆ. ಇದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಲ್ಲದೇ ಜಾಂಬೋಟಿಯಿಂದ ಖಾನಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ …

Read More »

ಸಿಬ್ಬಂದಿ ಕೊರತೆಗೆ ನಲುಗಿದ ಕೃಷಿ ಇಲಾಖೆ

ಬೆಳಗಾವಿ: ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ, ಬೆಳೆ ವಿಮೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಕುರಿತು ರೈತರಿಗೆ ನಿಯಮಿತವಾಗಿ ಮಾಹಿತಿ ನೀಡಬೇಕಿದ್ದ ಮತ್ತು ಬೆಳೆಹಾನಿಯಂಥ ಸಂದರ್ಭ ತ್ವರಿತವಾಗಿ ರೈತರ ನೆರವಿಗೆ ನಿಲ್ಲಬೇಕಿದ್ದ ಕೃಷಿ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ವಿವಿಧ ವೃಂದದ 498 ಹುದ್ದೆ ಮಂಜೂರಾಗಿವೆ. ಈ ಪೈಕಿ 205 ಮಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. 293 ಹುದ್ದೆ ಹಲವು ವರ್ಷಗಳಿಂದ ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಸಹಾಯಕ ಕೃಷಿ ಅಧಿಕಾರಿಗಳ(ಎಎಒ), …

Read More »

ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಮುರಗೇಶ ಶಿವಪೂಜಿ

ಹುಕ್ಕೇರಿ: ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದಿ ಜ್ಞಾನ ಬೆಳೆಸಿಕೊಂಡು ಪ್ರಬುದ್ಧ ನಾಗರಿಕರಾಗಬೇಕು. ಜತೆಗೆ ಪತ್ರಿಕೆಗಳಲ್ಲಿ ಬರುವ ಮಹತ್ವದ ಘಟನೆಗಳನ್ನು ಟಿಪ್ಪಣೆ ಮಾಡಿಕೊಂಡು, ವೈಯಕ್ತಿಕ ಬೆಳವಣಿಗೆಗೆ ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಘಟಕ ಅಧ್ಯಕ್ಷ ಮುರಗೇಶ ಶಿವಪೂಜಿ ಹೇಳಿದರು.   ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿ ಪತ್ರಕರ್ತರ ಸಂಘ, ಸಮ್ಮೂರ ಬಾನುಲಿ ಸಮುದಾಯ ರೆಡಿಯೊ ಕೇಂದ್ರ, ಎಲ್ಲಾಪುರ ಹಾಗೂ ಸ್ಥಳೀಯ ಪತ್ರಕರ್ತರ ಬಳಗದ ಸಹಯೋಗದಲ್ಲಿ …

Read More »