ಕೋವಿಡ್-೧೯: ಮತ್ತೇ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಏ.೨೧(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಇಬ್ಬರು ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ೨೦ ವರ್ಷದ ಯುವಕ(ಪಿ-೧೨೮) ಹಾಗೂ ರಾಯಬಾಗ ತಾಲ್ಲೂಕು ಕುಡಚಿಯ ೪೦ ವರ್ಷದ ವ್ಯಕ್ತಿ (ಪಿ-೧೪೮)ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. …
Read More »ಶಿವಭೋದರಂಗ ಮಠದ 12 ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ಮೌನಾಚರಣೆ
ಮೂಡಲಗಿ : ಇಲ್ಲಿಯ ಶ್ರೀ ಲಕ್ಷ್ಮಿದೇವಿ ಅಬ೯ನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿಯಲ್ಲಿ ಶಿವಭೋದರಂಗ ಮಠದ 12 ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ಮೌನಾಚರಣೆ ಮೂಲಕ ಶ್ರಧ್ಧಾಂಜಲಿ ಸಲ್ಲಿಸಿದರು. ಸೊಸೈಟಿ ಅಧ್ಯಕ್ಷ ಲಕ್ಕಪ್ಪಾ ತಿಪ್ಪಣ್ಣಾ ಹುಚ್ಚರಡ್ಡಿ ಮಾತನಾಡಿ, ಶ್ರೀಗಳ ನಿಧನದಿಂದ ನಾಡಿಗೆ ತುಂಬಲ್ಲಾರದ ನಷ್ಟವಾಗಿದೆ. ಶ್ರೀಗಳ ಅತ್ಯಂತ ಸಹೃದಯ ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳವರಾಗಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಬದುಕಿನೊಂದಿಗೆ ಜನ ಪರ ನಿಲುವು ಹೊಂದಿದವರಾಗಿದ್ದರು ಎಂದು ಹೇಳಿದರು. …
Read More »ಬುಧವಾರ ವಾರ್ ರೂಂ ನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ.
ಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕೊರೋನಾ ವಾರ್ ರೂಂ ಆಗಿ ಪರಿವರ್ತನೆಯಾಗಿದೆ. ಬುಧವಾರ ವಾರ್ ರೂಂ ನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಕೊರೋನಾ ಸಂಬಂಧಿಸಿದ ಎಲ್ಲ ನಿಯಂತ್ರಣ ಇನ್ನು ಮುಂದೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿಂದ ನಡೆಯಲಿದೆ. 14 ದ್ರೋಣ್ ಕ್ಯಾಮೆರಾ ಸಹಾಯದಿಂದ ಇಡೀ ನಗರದ ಆಗು ಹೋಗುಗಳ ಮೇಲೆ ನಿಗಾ ಇಡಲಿದೆ. ಎಷ್ಟು ಜನ ಹೊರಗೆ …
Read More »ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿಯ ಯಾವುದೇ ಪಾಸಿಟೀವ್ ಕೇಸ್ ಇಲ್ಲ
ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಾಲಿಗೆ ಇವತ್ತೂ ಶುಭಮಂಗಳ ಯಾಕಂದ್ರೆ ಇವತ್ತು ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿಯ ಯಾವುದೇ ಪಾಸಿಟೀವ್ ಕೇಸ್ ಇಲ್ಲ ಭಾನುವಾರದಿಂದ ಬೆಳಗಾವಿ ಜಿಲ್ಲೆಯ ಪಾಲಿಗೆ ಸಿಹಿ ಸುದ್ಧಿ ಹೊರಬೀಳುತ್ತಲೇ ಇದೆ ,ಭಾನುವಾರ,ಸೋಮವಾರದ ಬುಲಿಟೀನ್ ಗಳು ಸಿಹಿ ಸುದ್ಧಿ ನೀಡಿದ್ದವು ಇಂದು ಮಂಗಳವಾರ ಬೆಳಗಿನ ಬುಲಿಟೀನ್ ಶುಭ ಮಂಗಳ ಎಂದಿದೆ ಮಂಗಳವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ರಾಜ್ಯದ ವೇಳೆ ವಿವಿಧ ಜಿಲ್ಲೆಗಳ …
Read More »ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿ……..
ಬೆಳಗಾವಿ – ಮಹಾರಾಷ್ಟ್ರದಿಂದ ಔಷಧಿ ಸಾಗಿಸುವ ಕಂಟೇನರ್ ನಲ್ಲಿ ಕದ್ದು ಮುಚ್ವಿ ಕರ್ನಾಟಕದ ಗಡಿ ಪ್ರವೇಶ ಮಾಡಲು ಪ್ರಯತ್ನಿಸಿದ್ದ 24 ಜನರನ್ನು ತಡೆದಿರುವ ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿಯಾಗಿದ್ದಾರೆ . ಏಪ್ರಿಲ್ 16 ರಂದು ಔಷಧಿ ಸಾಗಿಸುವ ಕಂಟೇನರ್ ಕಾಗಲ್ ಬಳಿ ಕರ್ನಾಟಕದ ಗಡಿ ಪ್ರವೇಶಿಸುವಾಗ ಕಂಟೇನರ್ ತಡೆದು ಕಂಟೇನರ್ ಚೆಕ್ ಮಾಡಿದಾಗ 24 ಜನರು ಔಷಧಿ ಭಾಕ್ಸ್ ಗಳ ನಡುವೆ ಮುಚ್ಚಿ ಕುಳಿತುಕೊಂಡಿದ್ದರು ಅವರನ್ನು ವಶಕ್ಕೆ …
Read More »ಚಿಕ್ಕೋಡಿ:ಕೊರೊನಾ ಭೀತಿ- ರಸ್ತೆಯಲ್ಲಿ 100ರೂ. ನೋಟು ಬಿದ್ದರೂ ಎತ್ತಿಕೊಳ್ಳುತ್ತಿಲ್ಲ
ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ. ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ …
Read More »ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ.
ಬೆಳಗಾವಿ: ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ. ಸಂಕೇಶ್ವರ ಪಟ್ಟಣದ ಸಮೀಪದ ಹೊಲಗಳಲ್ಲಿ 3 ಕಾಡುಕೋಣ ಕಾಡಿಸಿಕೊಂಡಿವೆ. ಜಮೀನಿನಲ್ಲಿ ಕೆಲಸ ಮಾಡುವ ರೈತರ ಅವುಗಳನ್ನು ಕಂಡು ಭಯ ಬೀತರಾಗಿ ಬೆದರಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಜತೆ ನೀರಾವರಿ ಜಮೀನಿನಲ್ಲಿ ರೈತರ ಬೆಲೆ ಬಾಳುವ ಪೈಪ್ ಗಳನ್ನು ತುಳಿದು ಓಡಿವೆ. ಇದರಿಂದ ನೀರಾವರಿ ಜಮೀನಿನಲ್ಲಿ ನಾಶವಾಗಿರುವುದನ್ನು ಕಂಡು ಮರುಗಿದ್ದಾರೆ. ಹೊಲದಲ್ಲಿ ಇದ್ದಂತ …
Read More »ಜಮೀರ್ ಯಾವ ದೇಶದ ಪರವಾಗಿ ಇದ್ದಾರೆ ಎಂಬುದು ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದ್ದಾರೆ.ಸುರೇಶ ಅಂಗಡಿ
ಬೆಳಗಾವಿ: ಬೆಂಗಳೂರಿನ ಪಾದರಾಯನಪುರದಲ್ಲಿ ಘಟನೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೆಂಡಾಮಂಡಲರಾಗಿದ್ದಾರೆ. ಪಾದರಾಯನಪುರ ಘಟನೆ ಬಗ್ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಯಾವುದೇ ಜಾತಿ, ಭಾಷೆಗೆ ಸೀಮಿತವಾಗಿಲ್ಲ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳ ಮೇಲೆ ದೇಶ ದ್ರೋಹದ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹಾಗೂ …
Read More »ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ದೊರೆಯಲಿದೆ:ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ: ಕೋವಿಡ್-19 ವೈರಾಣು ಜಿಲ್ಲೆಯ ಸಾರ್ವಜನಿಕರನ್ನು ಕಂಗೆಡಿಸಿದ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ದೊರೆಯಲಿ ಎಂಬ ಸದುದ್ದೇಶದಿಂದ ಏ.14 , 2020 ರಿಂದ ಪಡಿತರವನ್ನು ವಿತರಿಸಲು ಪ್ರಾರಂಭಿಸಿದೆ. ಈ ಯೋಜನೆಯಡಿ ಅರ್ಜಿದಾರರು ಏಪ್ರಿಲ್ 24, 2020 ರ ರಾತ್ರಿ 8-00 ಗಂಟೆಯವರೆಗೆ ತಮ್ಮ ಪಾಲಿನ ಪಡಿತರ ಧಾನ್ಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಆನ್ಲೈನ್‌ದಲ್ಲಿ ಸಲ್ಲಿಸಿದ ಪ್ರತಿ ಬಿ.ಪಿ.ಎಲ್(ಆದ್ಯತಾ) ಪಡಿತರ …
Read More »ಕನ್ನಡ ಸೇನೆ ವತಿಯಿಂದ ಕರ್ತವ್ಯ ನಿರತ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಮತ್ತು ಆಶಾ ಕಾರ್ಯಕರ್ತೆಯರಿಗೆ ಅಲ್ಪೋಪಹಾರ ವ್ಯವಸ್ಥೆ
ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಹಾಗೂ ದುಪದಾಳ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ಕರ್ತವ್ಯ ನಿರತ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಮತ್ತು ಆಶಾ ಕಾರ್ಯಕರ್ತೆಯರಿಗೆ ಅಲ್ಪೋಪಹಾರ ವ್ಯವಸ್ಥೆ ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೋನಾವನ್ನು ನಿಯಂತ್ರಿಸುವ. ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು,ಪೌರಕಾರ್ಮಿಕರಿಗೆ ಕನ್ನಡ ಸೇನೆ ಸಂಘಟನೆಯ ವತಿಯಿಂದ ಮುಂಜಾನೆಯ ಅಲ್ಪೋಪಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಪತ್ತಾರ. ಗೋಕಾಕ ತಾಲೂಕಾಧ್ಯಕ್ಷರಾದ. ಅಪ್ಪಾಸಾಬ ಮುಲ್ಲಾ. …
Read More »
Laxmi News 24×7